17 December , 2017 Sunday

COASTAL NEWS

COASTAL NEWS

Archive for the ‘Kundapura’ Category

Govt names Viral V Acharya as RBI Deputy Governor

By pti On December - 28 - 2016 ADD COMMENTS

New Delhi, Dec 28 (PTI) Government today appointed Viral V Acharya, a professor of Economics in the Department of Finance at the New York University (NYU), new Deputy Governor at the Reserve Bank of India.

The Appointments Committee of the Cabinet cleared the appointment for three years.

He is taking over at a time when the central bank is facing criticism for repeated changes in the rules related to deposit and withdrawal of money, post-demonetisation.

Acharya is known for his research in theoretical and empirical analysis of systemic risks of the financial sector, its regulation and genesis in government-induced distortions, according to the profile on the NYU website.

The research areas also span across credit and liquidity risks, agency-theoretic foundations as well as their general equilibrium consequences, it says.

Acharya is is the C V Starr Professor of Economics in the Department of Finance at the New York University Stern School of Business (NYU-Stern).

An alumnus of IIT, Mumbai, with a degree of Bachelor of Technology in Computer Science and Engineering in 1995 and PhD in Finance from NYU-Stern in 2001, Acharya was with London Business School (2001-08) and served as the Academic Director of the Coller Institute of Private Equity at LBS (2007-09) and a Senior Houblon-Normal Research Fellow at the Bank of England (Summer 2008).

Power cut in Udupi dist. on 18.10.2016

By The Hindu On October - 15 - 2016 ADD COMMENTS

There will be no power supply to many areas in Udupi district on October 18 from 11 a.m. to 2 p.m. The areas are Vandse, Gulvadi, Gangolli, Shiroor, Kollur, Uppunda, Baindoor, Hattiyangady, Kundapura, Japti, Amparu, Kumbhasi, Barkuru, Shiriyara, Kokkarne, Hiliyana, Koteshwara, Saligarama, Sasthana, Airody, Talluru and nearby areas. It is for maintenance work along Hiriyadkka-Madhuvana-Kundapura-Navnunda power supply line.

ಮರಳು ಅಕ್ರಮ ಸಾಗಾಟ ತಡೆಗೆ ಗ್ರಾಪಂಗಳಲ್ಲಿ ಸಿಸಿಟಿವಿ: ಉಡುಪಿ ಜಿಪಂ ಸಾಮಾನ್ಯ ಸಭೆ ನಿರ್ಣಯ

By varthabharathi On September - 4 - 2015 ADD COMMENTS

 

ಉಡುಪಿ, ಸೆ.3: ಜಿಲ್ಲೆಯಲ್ಲಿ ನಡೆದಿರುವ ಅಕ್ರಮ ಮರಳುಗಾರಿಕೆ ಹಾಗೂ ಮರಳಿನ ಅಕ್ರಮ ಸಾಗಾಟದ ಕುರಿತು ಇಂದು ನಡೆದ ಉಡುಪಿ ಜಿಪಂನ 23ನೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪಕ್ಷಭೇದ ಮರೆತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಜಿಲ್ಲೆಯಲ್ಲಿರುವ ಮರಳಿನ ಕೃತಕ ಅಭಾವವನ್ನು ಬಗೆಹರಿಸದಿದ್ದರೆ ಗ್ರಾಮಸ್ಥರೊಂದಿಗೆ ಸೇರಿ ಧರಣಿ ನಡೆಸುವ ಎಚ್ಚರಿಕೆಯನ್ನೂ ನೀಡಿದರು.
ಜಿಪಂ ಅಧ್ಯಕ್ಷೆ ಸವಿತಾ ಶಿವಾನಂದ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಕುಂದಾಪುರ ತಾಪಂ ಅಧ್ಯಕ್ಷ ಭಾಸ್ಕರ ಬಿಲ್ಲವ, ಆ.1ರಿಂದ ಮರಳು ತೆಗೆಯಲು ಇದ್ದ ನಿಷೇಧ ತೆರವಾಗಿದ್ದರೂ, ಕೇವಲ ಸಿಆರ್‌ಝೆಡ್ ವ್ಯಾಪ್ತಿಯ ಪ್ರದೇಶಗಳಲ್ಲಿ ಮಾತ್ರ ಮರಳು ತೆಗೆಯಲು ಅವಕಾಶ ನೀಡಲಾಗುತ್ತಿದೆ. ನಾನ್‌ಸಿಆರ್‌ಝೆಡ್ ಪ್ರದೇಶದಲ್ಲಿ ಇನ್ನೂ ಅದಕ್ಕೆ ಅವಕಾಶ ನೀಡುತ್ತಿಲ್ಲ ಎಂದರು.
ಕುಂದಾಪುರದಲ್ಲಿ ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಏಳು ಸ್ಯಾಂಡ್‌ಬಾರ್‌ಗಳಲ್ಲಿ 36 ಮಂದಿಗೆ ಮರಳುಗಾರಿಕೆಗೆ ಪರವಾನಿಗೆ ನೀಡಿದ್ದರೂ ಅಲ್ಲಿ 100ಕ್ಕೂ ಅಧಿಕ ಮಂದಿ ಮರಳುಗಾರಿಕೆ ಮಾಡುತ್ತಿದ್ದಾರೆ. ಒಂದು ದಿನದಲ್ಲಿ 2-3 ಲೋಡು ಮರಳು ಸಾಗಾಟ ಮಾಡಬಹುದು. ಆದರೆ ಕುಂದಾಪುರ ತಾಲೂಕಿನಲ್ಲಿ 100-200 ಲೋಡ್‌ಗಳು ಅಕ್ರಮವಾಗಿ ಸಾಗುತ್ತಿವೆ. ಒಂದೊಂದು ದಕ್ಕೆಗಳಲ್ಲಿ 30ಕ್ಕೂ ಅಧಿಕ ಮರಳು ಲಾರಿಗಳು ಸಾಗುತ್ತಿವೆ. ಇದರಿಂದ ಅಲ್ಲಿ ಆಗುವ ಅನಾಹುತಗಳು ಹೇಳಲು ಸಾಧ್ಯವಿಲ್ಲ ಎಂದರು.
ಇವೆಲ್ಲವೂ ಅಧಿಕಾರಿಗಳಿಗೆ ತಿಳಿದೇ ನಡೆಯುತ್ತಿದೆ. ಇವರು ಕಣ್ಮುಚ್ಚಿ ಕುಳಿತಿದ್ದಾರೆ. ಮರಳುಗಾರಿಕೆ ಅಷ್ಟೊಂದು ದೋಣಿಗಳ ಸತತ ಸಾಗಾಟದಿಂದ ಹೊಳೆಯ ಒಳಗಿನಿಂದ ಹಾಕಿದ ಕುಡಿಯುವ ನೀರಿನ ಪೈಪ್ ಒಡೆದಿದ್ದು, ಗ್ರಾಮಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ನಾವು ತಾಪಂ ಮೂಲಕ ಎಷ್ಟೇ ಬೊಬ್ಬೆ ಹೊಡೆದರೂ ಯಾರೂ ಗಮನವನ್ನೇ ನೀಡುತ್ತಿಲ್ಲ. ಇದರೊಂದಿಗೆ ಕಾಂಡ್ಲಾ ವನಗಳಿಗೆ, ಸೇತುವೆಗಳಿಗೆ ಆಪತ್ತು ಎದುರಾಗಿದೆ ಎಂದು ಭಾಸ್ಕರ ಬಿಲ್ಲವ ಆಕ್ರೋಶಭರಿತರಾಗಿ ನುಡಿದರು.
ಗ್ರಾಪಂನ ಒಪ್ಪಿಗೆ ಇಲ್ಲದೇ, ಬೈಕಾಡಿಯ ಸರಕಾರಿ ಜಾಗದಲ್ಲಿ ಮರಳನ್ನು ಸಂಗ್ರಹಿಸಲಾಗಿದೆ. ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳು ದುಡ್ಡುಪಡೆದು ಅದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಬೆಳಗಿನಜಾವ 4 ಗಂಟೆಗೆಲ್ಲಾ ಮರಳುಗಾರಿಕೆ ದಂಧೆ ಆರಂಭಗೊಳ್ಳುತ್ತಿದೆ. ಗ್ರಾಮದ ಜನರಿಗೆ ನೆಮ್ಮದಿ ಇಲ್ಲವಾಗಿದೆ ಎಂದು ಮಲ್ಲಿಕಾ ದೂರಿದರು.
ಜಿಲ್ಲೆಯ ಜನರಿಗೆ ಮನೆ ಕಟ್ಟಲು ಈಗ ಸಿಮೆಂಟ್, ಕಬ್ಬಿಣ, ಕಲ್ಲು ಎಲ್ಲಾ ಸಿಗುತ್ತಿದೆ. ಆದರೆ ಮರಳೇ ಸಿಗುತ್ತಿಲ್ಲ್ಲ. ನಮ್ಮ ಕಣ್ಣೆದುರೇ ಅವು ಹೊರ ಜಿಲ್ಲೆಗಳಿಗೆ ಸಾಗುತ್ತಿವೆ. ನಾವಿಲ್ಲಿ ಮರಳಿಗಾಗಿ ಪರದಾಡಬೇಕು ಎಂದು ಕಟಪಾಡಿ ಶಂಕರ ಪೂಜಾರಿ, ಅನಂತ ಮೊವಾಡಿ, ಬಾಬು ಶೆಟ್ಟಿ, ಗಣಪತಿ ಶ್ರೀಯಾನ್, ಇಲಾಖೆಯ ಅಧಿಕಾರಿಗಳ ವಿರುದ್ಧ ಕೆಂಡ ಕಾರಿದರು.
ಪ್ರತಿ ಗ್ರಾಪಂ ಮಟ್ಟದಲ್ಲಿ ಮರಳುಗಾರಿಕೆ ಮೇಲೆ ಕಣ್ಣಿಡಲು ಸಿಸಿಟಿವಿಗಳನ್ನು ಅಳವಡಿಸುವಂತೆ ನಿರ್ಣಯಕೈಗೊಳ್ಳುವಂತೆ ಭಾಸ್ಕರ ಬಿಲ್ಲವ ಸಲಹೆ ನೀಡಿದರು. ಇದಕ್ಕೆ ಸದಸ್ಯರ ಸಹಮತ ವ್ಯಕ್ತವಾಯಿತು. ಸಿಸಿಟಿವಿ ಅಳವಡಿಕೆಯಿಂದ ನಡೆಯುವ ಅಕ್ರಮ ದಂಧೆ ನಿಲ್ಲಬಹುದು ಎಂದರು. ಆದರೆ ಜಿಪಂ ಕಾರ್ಯನಿರ್ವಹಣಾಧಿಕಾರಿ ಎಂ.ಕನಗವಲ್ಲಿ ಇದು ತನ್ನ ವ್ಯಾಪ್ತಿಗೆ ಬರುವುದಿಲ್ಲವಾದ್ದರಿಂದ ಕೇವಲ ಸಲಹೆಯನ್ನಷ್ಟೇ ನೀಡಬಹುದು ಎಂದರು.
ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಹಿರಿಯ ಭೂವಿಜ್ಞಾನಿಯಾಗಿ ಕಳೆದ ವಾರವಷ್ಟೇ ಕೋಲಾರದಿಂದ ವರ್ಗವಾಗಿ ಬಂದ ಕೋದಂಡರಾಮಯ್ಯ ಅವರು ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿ, ಕರಾವಳಿಯ ಮೂರು ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿಯನ್ನು ಘೋಷಿಸುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅದನ್ನು ಎದುರು ನೋಡಲಾಗುತ್ತಿದೆ. ಈ ತಿಂಗಳು ಸರಕಾರ ಮಟ್ಟದಲ್ಲಿ ಚರ್ಚೆಯಾಗಿ ನಿರ್ಧಾರ ಹೊರಬೀಳಬೇಕಾಗಿದೆ. ಈಗ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮಾತ್ರ ಮರಳುಗಾರಿಕೆಗೆ ಪರವಾನಿಗೆ ನೀಡಲಾಗಿದೆ ಎಂದರು.
ಕೊನೆಗೆ ಮರಳುಗಾರಿಕೆ ನಡೆಯುವ ವ್ಯಾಪ್ತಿಯ ಗ್ರಾಪಂಗಳು ಮರಳುಗಾರಿಕೆಗೆ ಪರವಾನಿಗೆ ನೀಡಲು ಅನುಮತಿ ನೀಡುವಂತೆ ಹಾಗೂ ಸಾಧ್ಯವಿದ್ದಲ್ಲಿ ಸಿಸಿಟಿವಿ ಅಳವಡಿಸುವಂತೆ ಕೋರುವ ನಿರ್ಣಯವನ್ನು ಮಾಡಲಾಯಿತು.
ಮರಳು ನೀತಿಯಲ್ಲ ‘ಮರುಳು’ ನೀತಿ!
ತಡವಾಗಿ ಸಭೆಗೆ ಬಂದ ಲೋಕೋಪಯೋಗಿ ಇಲಾಖೆಯ ಕಾರ್ಯ ನಿರ್ವಾಹಕ ಎಂಜಿನಿಯರ್ ಚಂದ್ರಶೇಖರ್ ಅವರು ಮರಳು ನೀತಿಯ ಕುರಿತು ಸಭೆಗೆ ವಿವರಗಳನ್ನು ನೀಡಿ, ಜಿಲ್ಲಾ ಮರಳು ಉಸ್ತುವಾರಿ ಸಮಿ ತಿಯ ಸಭೆಯಲ್ಲಿ ಆದ ನಿರ್ಧಾರದಂತೆ ಜಿಲ್ಲಾಧಿಕಾರಿಗಳು ಆ.1ರಿಂದ ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ಅವಕಾಶ ನೀಡಿದ್ದಾರೆ. ಇದನ್ನು ಸಾಂಪ್ರದಾಯಿಕ ಮರಳುಗಾರಿಕೆ ಮಾಡುವವರಿಗೆ ನೀಡಲಾಗಿದೆ. ಇನ್ನು ನಾನ್ ಸಿಆರ್‌ಝೆಡ್ ಪ್ರದೇಶಗಳಲ್ಲಿ ಟೆಂಡರ್ ಮೂಲಕ ಮರಳು ಗಾರಿಕೆ ಜವಾಬ್ದಾರಿಯನ್ನು ಪಿಡಬ್ಲುಡಿ ಇಲಾಖೆಗೆ ನೀಡಲಾಗಿದೆ ಎಂದರು.
ಆದರೆ ಒಂದೇ ಜಿಲ್ಲೆಯಲ್ಲಿ ಮರಳಿಗೆ ಎರಡು ದರ ನಿಗದಿ ಸರಿಯಲ್ಲ. ಇದರಿಂದ ಜನರಿಗೆ ತೊಂದರೆ ಎಂದು ಭಾವಿಸಿ, ಕರಾವಳಿಯ ಮೂರು ಜಿಲ್ಲೆಗಳಲ್ಲಿ ಸಿಆರ್‌ಝೆಡ್ ಮತ್ತು ನಾನ್‌ಸಿಆರ್‌ಝೆಡ್ ಪ್ರದೇಶಗಳಲ್ಲಿ ಒಂದೇ ರೀತಿಯ ಮರಳು ನೀತಿಯನ್ನು ಜಾರಿಗೊಳಿಸುವಂತೆ ಸರಕಾರಕ್ಕೆ ಜು.31ರಂದು ಪ್ರಸ್ತಾವನೆ ಹೋಗಿದೆ. ಅದಕ್ಕೆ ಅನುಮತಿ ಬಂದಾಕ್ಷಣ ನಾವು ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಇಲ್ಲಿ ಮರಳುಗಾರಿಕೆ ಮಾಡುವವರೆಲ್ಲರೂ, ಶೇ.50ನ್ನು ಸ್ಥಳೀಯ ಬಳಕೆಗೆ ನೀಡಬೇಕು. ಉಳಿದ ಶೇ.50ನ್ನು ಹೊರ ಜಿಲ್ಲೆಗೆ ಕೊಡಲು ಅನುಮತಿ ಇದೆ ಎಂದು ಚಂದ್ರಶೇಖರ್ ಹೇಳಿದಾಗ, ಸದಸ್ಯರು ಇದನ್ನು ತೀವ್ರವಾಗಿ ವಿರೋಧಿಸಿದರು. ಜಿಲ್ಲೆಯ ಜನಸಾಮಾನ್ಯರು ಸಮಸ್ಯೆ ಎದುರಿಸುತ್ತಿರುವಾಗ ಹೆಚ್ಚು ದುಡ್ಡಿನ ಆಸೆಗಾಗಿ ಮರಳನ್ನು ಹೊರ ಜಿಲ್ಲೆಗೆ ಸಾಗಿಸುವುದು ಸರಿಯಲ್ಲ. ಇದು ಮರಳು ನೀತಿಯಲ್ಲ, ‘ಮರುಳು’ ನೀತಿ ಎಂದು ಅನಂತ ಮೊವಾಡಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ವಿರುದ್ಧ ಶ್ರೀಯಾನ್ ಕಿಡಿ
ಮರಳು ಸಮಿತಿ ಜಿಲ್ಲೆಯ ಹಿತಾಸಕ್ತಿಯನ್ನು ಮರೆತಿದೆ. ಜಿಲ್ಲಾಧಿಕಾರಿಗೆ ಮಾಹಿತಿಯ ಕೊರತೆ ಇದೆ ಎಂದು ಅನಂತ ಮೊವಾಡಿ ದೂರಿದರೆ, ಜಿಲ್ಲಾಧಿಕಾರಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಗಣಪತಿ ಶ್ರೀಯಾನ್, ಅವರಿಂದ ಜಿಲ್ಲೆಗೆ ಬಹಳ ಅನ್ಯಾಯವಾಗುತ್ತಿದೆ. ಅವರ ಎದುರು ಯಾರೂ ಮಾತನಾಡುತ್ತಿಲ್ಲ. ಅವರು ಯಾರ ಸಲಹೆಯನ್ನೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂದರು.

ಸ್ವಾತಂತ್ರ್ಯ ದಿನದ ಪ್ರೀತಿಯ ಬೆನ್ನುಹತ್ತಿ

By prajavani On August - 14 - 2015 ADD COMMENTS

ಚಲಿಸುವ ವಾಹನಗಳಲ್ಲಿ, ಪೆರೇಡ್‌ ಮೈದಾನಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ದೇಶ ಭಕ್ತಿ ಗೀತೆಯ ರಿಂಗಣ. ಹಾದಿ ಬೀದಿಗಳಲ್ಲೂ ಕೇಸರಿ, ಬಿಳಿ, ಹಸಿರಿನ ವರ್ಣತೋರಣ. ಎಲ್ಲೆಲ್ಲೂ ರಾಷ್ಟ್ರಧ್ವಜ, ಬ್ಯಾಡ್ಜ್‌, ರಿಸ್ಟ್‌ ಬ್ಯಾಂಡ್‌, ಐ ಲವ್‌ ಇಂಡಿಯಾ ಚಿತ್ರ ಚಿತ್ತಾರ. ಹೌದು ಇದು ಆಗಸ್ಟ್‌ 15, ಸ್ವಾತಂತ್ರ್ಯ ದಿನಾಚರಣೆಯ ಪ್ರಭಾವ.

ಅಂಗಡಿ, ಶಾಲೆಗಳಲ್ಲಿ ಈಗಾಗಲೇ ದೇಶ ಪ್ರೀತಿ ಹುಟ್ಟಿಸುವ ಕೇಸರಿ, ಬಿಳಿ, ಹಸಿರಿನ ಬಣ್ಣ ವಿನ್ಯಾಸವುಳ್ಳ ವಸ್ತುಗಳು ಆಕ್ರಮಿಸಿಯಾಗಿದೆ. ಟ್ರಾಫಿಕ್‌ ಸಿಗ್ನಲ್‌ಗಳಲ್ಲೂ ವ್ಯಾಪಾರ ಶುರುವಾಗಿದೆ. ಅನೇಕರು ತಮ್ಮ ವಾಹನಗಳಿಗೂ ದೇಶಪ್ರೀತಿಯ ಅಲಂಕಾರ ಮಾಡಿಕೊಂಡಿದ್ದಾಗಿದೆ. ಕಚೇರಿ, ಕಾರ್ಪೊರೇಟ್‌ ವಲಯಗಳಲ್ಲೂ ಆಗಸ್ಟ್‌ 15ನ್ನು ವಿಜೃಂಭಣೆಯಿಂದ ಆಚರಿಸುವ ತಯಾರಿ ನಡೆದಿದೆ. ಹಾಗೆಯೇ ಸ್ವಾಂತಂತ್ರ ದಿನಾಚರಣೆಗೆ ಬೇಕಾದ ಅಲಂಕಾರಿಕ ವಸ್ತುಗಳ ಮಾರಾಟವೂ ಭರ್ಜರಿ ಸಾಗಿದೆ.

ವ್ಯಾಪಾರ ಜೋರು
ಅವೆನ್ಯೂ ರಸ್ತೆ ತುಂಬ ತ್ರಿವರ್ಣದ ನಾನಾ ವಸ್ತುಗಳು ಕಾಣಸಿಗುತ್ತವೆ. ನಗರದ  ಅಂಗಡಿಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ಅವೆನ್ಯೂ ರಸ್ತೆಯಲ್ಲಿರುವ ಸಾಯಿ ಬಾಲಾಜಿ ಪಾರ್ಟಿ ಶಾಪ್‌ ಮಾಲೀಕ ಎಲ್‌.ಆರ್‌. ಕೃಷ್ಣ ಕುಮಾರ್ ವ್ಯಾಪಾರ ಜೋರಾದ ಖುಷಿಯಲ್ಲಿದ್ದಾರೆ. ‘ಹೆಚ್ಚಾಗಿ ಅಂಗಡಿಯವರೇ ಬಂದು ನಮ್ಮ ಬಳಿ ವಸ್ತುಗಳನ್ನು ಕೊಂಡುಕೊಳ್ಳುತ್ತಾರೆ. ಈ ಬಾರಿ ಪ್ರತಿ ಸಲಕ್ಕಿಂತ ಹೆಚ್ಚಿನ ವ್ಯಾಪಾರವಿದೆ. ಕೆಲವು ವಸ್ತುಗಳನ್ನು ದೆಹಲಿ, ಮುಂಬೈನಿಂದ ತರಿಸಿದ್ದೇವೆ. ಪ್ಲಾಸ್ಟಿಕ್‌ ಬಳಕೆ ಕಡಿಮೆ ಮಾಡುವ ಸಲುವಾಗಿ ಪೇಪರ್‌ ಧ್ವಜಗಳನ್ನು ಶಿವಕಾಶಿಯಿಂದ ತರಿಸಿದ್ದೇವೆ. ಇನ್ನು ಥರ್ಮಕೋಲ್‌ನಿಂದ ಭಾರತದ ನಕಾಶೆ, ಮುಂತಾದ ವಿನ್ಯಾಸವನ್ನು ಉದಯ್‌ ಎಂಬ ಕಲಾವಿದರಿಂದ ಮಾಡಿಸಿದ್ದೇವೆ. ₹1ರಿಂದ ₹150ರವರೆಗಿನ ವಸ್ತುಗಳಿವೆ’ ಎನ್ನುತ್ತಾರೆ ಅವರು.

ಪ್ರತಿಬಾರಿಯೂ ವಸ್ತುಗಳು ಒಂದೇ ಆಗಿದ್ದರೂ ವಿನ್ಯಾಸದಲ್ಲಿ ವಿಭಿನ್ನತೆ ಇರುತ್ತದೆ ಎಂದು ಮಾಹಿತಿ ನೀಡುವ ಅಲ್ಲಿಯ ಕೆಲಸಗಾರ, ವಿವಿಧ ವಿನ್ಯಾಸದ ಫ್ಲ್ಯಾಗ್‌, ಕ್ಯಾಪ್‌, ಬ್ಯಾಡ್ಜ್‌, ಹ್ಯಾಂಗಿಂಗ್ಸ್‌, ಬ್ಯಾಂಡ್‌, ಡೆಕೊರೇಟಿವ್‌ ವಸ್ತುಗಳನ್ನು ಒಪ್ಪವಾಗಿಡುತ್ತಿದ್ದರು.
ವಿಶೇಷ ಹಾರ

ಅವೆನ್ಯೂ ರಸ್ತೆಯ ಸಿಂಗ್ರಿ ಚಂದ್ರಶೇಖರ ಗುಪ್ತಾ ಅಂಡ್‌ ಸನ್ಸ್‌ನ ಸಿಂಗ್ರಿ ಸತ್ಯನಾರಾಯಣ ಅವರ ಪ್ರಕಾರ ‘ಈ ಬಾರಿ ವ್ಯಾಪಾರ ಕುಸಿದಿದೆ. ಚುನಾವಣೆ ಇದೇ ಸಂದರ್ಭದಲ್ಲಿ ಬಂದಿರುವುದರಿಂದ ನಿಯಮಗಳು ಅನೇಕ ಇದೆ. ಹೀಗಾಗಿ ವಿಜೃಂಭಣೆಯಿಂದ ಆಚರಿಸುವ ಗೋಜಿಗೂ ಹೋಗುತ್ತಿಲ್ಲ. ಕೊಳ್ಳುವವರ ಸಂಖ್ಯೆಯೂ ಕಮ್ಮಿಯಾಗಿದೆ. ನಮ್ಮಲ್ಲಿ ಈ ಬಾರಿ ಅಶೋಕ ಸ್ತಂಭ ಹಾಗೂ ರಾಷ್ಟ್ರಪ್ರಾಣಿ ಇರುವ ಶೀಲ್ಡ್‌, ಕೇಸರಿ, ಬಿಳಿ, ಹಸಿರು ಬಣ್ಣದ ಪೇಟ ಹಾಗೂ ರೇಷ್ಮೆ, ಪರ್ಲ್‌ ಹಾಗೂ ಉಲ್ಲನ್‌ ಬಳಸಿ ವಿಶೇಷವಾಗಿ ನಿರ್ಮಿಸಲಾದ ಹಾರ (₹1800) ತಯಾರು ಮಾಡಿದ್ದೇವೆ’ ಎನ್ನುತ್ತಾರೆ.

ಎಲ್ಲವೂ ಕಮ್ಮಿ
‘ಕಳೆದ ಕೆಲವು ವರ್ಷ­ಗಳಿಗೆ ಹೋಲಿಸಿದರೆ ಈ ಬಾರಿ ವ್ಯಾಪಾರ ಕಮ್ಮಿ. ಎರಡು ದಿನ ಇರುವಾಗ ಸ್ವಾತಂತ್ರ್ಯ ದಿನಕ್ಕೆ ಸಂಬಂಧಿ­ಸಿದ ವಸ್ತುಗಳು ಹೆಚ್ಚೆಚ್ಚು ಮಾರಾಟ­ವಾಗುತ್ತವೆ. ಕೆಲಸ ಹೆಚ್ಚು, ಸಂಪಾದನೆ ಕಮ್ಮಿ ಆಗಿರುವ ಈ ಸಂದರ್ಭಗಳಲ್ಲಿ ಯಾರೂ ಇಂಥವುಗಳಿಗೆ ಹೆಚ್ಚು ಹಣ ಹೂಡಲು ಮನಸು ಮಾಡುವುದಿಲ್ಲ. ಶಾಲಾ ಮಕ್ಕಳು ಮಾತ್ರ ಇವುಗಳನ್ನು ಹೆಚ್ಚು ಖರೀದಿಸುತ್ತಾರೆ. ಪ್ರಾಜೆಕ್ಟ್‌ ವರ್ಕ್‌, ಆಗಸ್ಟ್‌ 15ರ ಕಾರ್ಯಕ್ರಮಕ್ಕೆ ಬೇಕೆಂಬ ಕಾರಣಕ್ಕೆ ಕೊಳ್ಳುತ್ತಾರೆ. ಈ ಬಾರಿ ಕೇಸರಿ, ಬಿಳಿ, ಹಸಿರು ಬಣ್ಣದ ಪೇಪರ್‌ಗಳು ಜಾಸ್ತಿ ಮಾರಾಟವಾಗಿದೆ’ ಎನ್ನುತ್ತಾರೆ. ಅದನ್ನು ಬಿಟ್ಟರೆ ಫ್ಲ್ಯಾಗ್‌, ರಿಸ್ಟ್‌ ಬ್ಯಾಂಡ್‌, ವಿವಿಧ ಬಗೆಯ ಬ್ಯಾಡ್ಜ್‌ಗಳು ಈ ಬಾರಿಯ ಆಕರ್ಷಣೆ. ₹1ರಿಂದ ₹25–30 ರೂಪಾಯಿ ವಸ್ತು­ಗಳನ್ನು ಅವೆನ್ಯು ರಸ್ತೆಯಿಂದ ತಂದು ಮಾರಾಟ ಮಾಡುತ್ತೇವೆ’   ಎನ್ನುತ್ತಾರೆ ಎಲ್‌.ಎನ್‌.ಪುರದ ಮಾರುತಿ ಬುಕ್‌ ಸ್ಟೋರ್‌ನ ಮಾಲೀಕರಾದ ಪಾರ್ಥಸಾರಥಿ ಎಂ.

ಖುಷಿಯಿಂದ ಮಾಡುತ್ತೇವೆ
ನಗರದ ಮುಖ್ಯ ಪ್ರದೇಶಗಳ ಸಿಗ್ನಲ್‌ನಲ್ಲಿ ನಿಂತು ಮಳೆ ಬಿಸಿಲೆನ್ನದೆ ವ್ಯಾಪಾರಕ್ಕಿಳಿದ ಅನೇಕರನ್ನು ಕಾಣಬಹುದು. ಕಾಲಕ್ಕೆ ತಕ್ಕಂತೆ ವ್ಯಾಪಾರದಲ್ಲಿ ಬದಲಾವಣೆ ಕಂಡುಕೊಳ್ಳುವ ಅವರು, ‘ಮಾಡುವ ಕೆಲಸವನ್ನು ಖುಷಿಯಿಂದ ಮಾಡುತ್ತೇವೆ’ ಎನ್ನುತ್ತಾರೆ. ‘ನಾವು ಗಾರೆ ಕೆಲಸ ಮಾಡುವವರು. ಆಂಧ್ರದಿಂದ ಬಂದಿದ್ದೇವೆ. ಅಂದಿನಂದಿನ ಸನ್ನಿವೇಶಕ್ಕೆ ತಕ್ಕಂತೆ ವ್ಯಾಪಾರ ಮಾಡುತ್ತೇವೆ. ಬೇರೆಯವರನ್ನು ನೋಡಿ ಸನ್ನಿವೇಶಗಳನ್ನು ಅರ್ಥೈಸಿಕೊಳ್ಳುವ ನಮ್ಮ ವ್ಯಾಪಾರ ಹೇಳಿಕೊಳ್ಳುವಷ್ಟೇನೂ ಚೆನ್ನಾಗಿರುವುದಿಲ್ಲ. ದಿನಕ್ಕೆ ₹200ರಿಂದ ₹300 ವ್ಯಾಪಾರವಾಗುತ್ತದೆ. ಕೆಲವೊಮ್ಮೆ ಅದೂ ಇಲ್ಲ. ಹಾಕಿದ ಬಂಡವಾಳ­ ಆದರೂ  ಬಂದರೆ ಸಾಕು. ಹೆಚ್ಚಿಗೆ ಉಳಿದ ವಸ್ತು­ಗಳನ್ನು ಇನ್ಯಾವತ್ತಾದರೂ ಉಪಯೋಗಕ್ಕೆ ಬರುತ್ತದೆ ಎನ್ನುವ ಭರವಸೆಯಿಂದ ಮನೆಯಲ್ಲೇ ಇಟ್ಟುಕೊಳ್ಳುತ್ತೇವೆ’ ಎನ್ನುತ್ತಾರೆ ಎಂ.ಜಿ. ರಸ್ತೆಯಲ್ಲಿ ವ್ಯಾಪಾರ ಮಾಡುತ್ತಿರುವ ಸುಶೀಲಾ ಹಾಗೂ ಭಾಗ್ಯಾ.

ವಂಡ್ಸೆ ಗ್ರಾ.ಪಂ.ಅಧ್ಯಕ್ಷರಾಗಿ ಉದಯಕುಮಾರ್ ಶೆಟ್ಟಿ ಉಪಾಧ್ಯಕ್ಷರಾಗಿ ಶಾರದಾ ರುದ್ರಯ್ಯ ಆಚಾರ್ಯ

By Karavali Nudi On July - 1 - 2015 ADD COMMENTS


ವಂಡ್ಸೆ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ಉದಯಕುಮಾರ್ ಶೆಟ್ಟಿ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಶಾರದಾ ರುದ್ರಯ್ಯ ಆಚಾರ್ಯ ಆಯ್ಕೆಯಾದರು. ಅವಿರೋಧವಾಗಿ ಆಯ್ಕೆ ಪ್ರಕ್ರಿಯೆ ನಡೆಯಿತು..
ಅಧಿಕಾರ ಸ್ವೀಕರಿಸಿ ಮಾತನಾಡಿದ ಉದಯಕುಮಾರ್ ಶೆಟ್ಟಿ ಅವರು, ಬೆಳೆಯುತ್ತಿರುವ ವಂಡ್ಸೆಗೆ ಅತ್ಯಂತ ಅಗತ್ಯವಿರುವ ಸಮುದಾಯ ಭವನ ನಿಮರ್ಾಣದ ಬಗ್ಗೆ ತಕ್ಷಣ ಕಾರ್ಯಪ್ರವತ್ತರಾಗಲಾಗುವುದು. ಈಗಾಗಲೇ ಗುರುತಿಸಿರುವ ಪಂಚಾಯತ್ ನಿವೇಶನದಲ್ಲಿ ಸಮುದಾಯ ಭವನಕ್ಕೆ ಯೋಜನೆ ತಯಾರಿಸಲಾಗುವುದು. ವಂಡ್ಸೆ-ಕಾನಮ್ಮ ದೇವಸ್ಥಾನ ರಸ್ತೆ, ಭದ್ರಮಹಾಕಾಳಿ ರಸ್ತೆಗೆ ಗೆ ಅಡ್ಡಲಾಗಿ ಕಿರು ಸೇತುವೆ ನಿಮರ್ಾಣ, ದಿನದ 24 ಗಂಟೆ ಕುಡಿಯುವ ನೀರು ನೀಡುವ ನಿಟ್ಟಿನಲ್ಲಿ ತೆರೆದ ಬಾವಿ ನಿಮರ್ಾಣ ಮಾಡಿ, ಪ್ರತಿಮನೆಗೂ ಮೀಟರ್ ಅಳವಡಿಸಿ ನೀರು ಸರಬರಾಜು ಮಾಡುವುದು, ಶಾಲೆ ರಸ್ತೆಯ ಅಭಿವೃದ್ದಿ, ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಯ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ವಂಡ್ಸೆ ಗ್ರಾ.ಪಂ.ನೂತನ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಈಗಾಗಲೇ ಸಾಕಷ್ಟು ಅಭಿವೃದ್ದಿ ಕಾಮಗಾರಿಗಳು ಚಾಲ್ತಿಯಲ್ಲಿದ್ದು ಅವುಗಳನ್ನು ಪೂರ್ಣಗೊಳಿಸಲಾಗುವುದು. ವಂಡ್ಸೆ ಗ್ರಾಮ ಗ್ರಾಮ ವಿಕಾಸ ಯೋಜನೆಯಲ್ಲಿ ಆಯ್ಕೆಯಾಗಿದ್ದು ಅದರ ಅನುದಾನದ ಸಮರ್ಪಕ ಸದ್ವಿನಿಯೋಗ ಮಾಡಲಾಗುವುದು. ಕೆಳಪೇಟೆಯಲ್ಲಿ ಶೌಚಾಲಯ ನಿಮರ್ಾಣ, ಸಂತೆ ಮಾರುಕಟ್ಟೆಯ ಪುನಃನಿಮರ್ಾಣಕ್ಕೆ ಕ್ರಿಯಾಯೋಜನೆ ತಯಾರಿಸಲಾಗುವದು. ಮೂಕಾಂಬಿಕಾ ಕಾಲೋನಿ ರಸ್ತೆ ಡಾಂಬರೀಕರಣ, ಪಂಚಾಯತ್ ನಿವೇಶನದಲ್ಲಿ ನಾಡಕಛೇರಿ, ಮೆಸ್ಕಾಂ ಕಛೇರಿ ನಿಮರ್ಾಣಕ್ಕೆ ಒತ್ತು ನೀಡಲಾಗುವುದು ಎಂದರು.
ಮುಖ್ಯವಾಗಿ ಬೆಳೆಯುತ್ತಿರುವ ವಂಡ್ಸೆಗೆ ನಿದರ್ಿಷ್ಟ ತ್ಯಾಜ್ಯ ವಿಲೇವಾರಿ ಘಟಕದ ಅವಶ್ಯಕತೆ ಇದ್ದು ಈಗಾಗಲೇ ಸ್ಥಳ ಗುರುತಿಸಲಾಗಿದ್ದು, ಆ ಬಗ್ಗೆ ಕ್ರಿಯಾಯೋಜನೆ ತಯಾರಿಸಲಾಗುವುದು ಎಂದರು. ಗ್ರಾಮದ ಸಮಗ್ರ ಮಾಹಿತಿ, ಸಕರ್ಾರದ ಸೌಲಭ್ಯಗಳ ಮಾಹಿತಿ, ಯೋಜನೆಗಳ ವಿವರಣೆಯನ್ನು ಜನರಿಗೆ ಮುಕ್ತವಾಗಿ ತಿಳಿಸುವ ನಿಟ್ಟಿನಲ್ಲಿ ವೆಬ್ಸೈಟ್ ನಿಮರ್ಾ ಣ ಮಾಡುವ ಗುರಿ ಇದೆ. ಒಟ್ಟಾರೆಯಾಗಿ ಗ್ರಾಮದ ಸವರ್ಾಂಗೀಣ ಅಭಿವೃದ್ಧಿಗೆ ನಾವು ಬದ್ಧರಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭ ಸದಸ್ಯರಾದ ಉದಯ ನಾಯ್ಕ್, ಗುಂಡು ಪೂಜಾರಿ, ಸಿಂಗಾರಿ ಪೂಜಾರಿ, ಮಲ್ಲಿಕಾ, ಲಕ್ಷ್ಮೀ ಉಪಸ್ಥಿತರಿದ್ದರು.

ಶಂಕರನಾರಾಯಣ: ‘ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ’ ಸಾಧಕ ಕೃಷಿಕರಿಗೆ ಗೌರವ

By Nagaraj On July - 1 - 2015 ADD COMMENTS

ಇವತ್ತು ಕೃಷಿಗೆ ಯಂತ್ರೋಪಕರಣಗಳು ಬಂದರೂ ಕೂಡಾ ಕೃಷಿಕ ಕೃಷಿಯ ಬಗ್ಗೆ ನಿರಾಸಕ್ತಿ ತೋರಿಸುತ್ತಲೇ ಇದ್ದಾನೆ. ಕೈಷಿಯಲ್ಲಿ ಪಾಲ್ಗೊಳ್ಳುವಿಕೆ ಕುಂಠಿತವಾಗುತ್ತಿದೆ. ಕೃಷಿ ಕ್ಷೇತ್ರದ ಅನಾರೋಗ್ಯಕರ ಬೆಳವಣಿಗೆ ಬದಲಾಗಬೇಕು. ಕೃಷಿಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ಕೆಲಸ ಆಗಬೇಕು. ವಿವಿಧ ಇಲಾಖೆಗಳ ಪ್ರಯೋಜನವನ್ನು ಸಕಾಲಕ್ಕೆ ಪಡೆದುಕೊಂಡು ಕೃಷಿ ಅಭಿವೃದ್ಧಿ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಆರ್.ಶೆಟ್ಟಿ ಹೇಳಿದರು. ಶಂಕರನಾರಾಯಣದ ಜಿ.ಎಸ್.ಆಚಾರ್ ಸಭಾಂಗಣದಲ್ಲಿ ಜೂ.27ರಂದು ಉಡುಪಿ ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ, ಕುಂದಾಪುರ ಕ್ರಷಿ ಇಲಾಖೆಗಳ ಸಹಯೋಗದಲ್ಲಿ ವಂಡ್ಸೆ ಹೋಬಳಿ ಮಟ್ಟದ ಕೃಷಿ ಅಭಿಯಾನ ‘ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತಾಲೂಕು ಪಂಚಾಯತ್ ಸದಸ್ಯೆ ಪಾರ್ವತಿ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ವಂಡ್ಸೆ ಹೋಬಳಿಯಲ್ಲಿ ಕೃಷಿ ಸಾಧನೆ ಮಾಡಿದ ನೂಜಾಡಿ ಬ್ರಹ್ಮೇರಿಯ ಪ್ರಯೋಗಶೀಲ ಕೃಷಿಕ ಮಂಜುನಾಥ ನಾಯ್ಕ್, ಸಾವಯವ ಕೃಷಿಕ ಪದ್ಮನಾಭ ಅಡಿಗ ಗುಲ್ವಾಡಿ, ಸದಾನಂದ ನಾಯ್ಕ ಯಳಬೇರು, ದಾಕ್ಷಾಯಣಿ ಕುಂದಬಾರಂದಡಿ ಇವರನ್ನು ಸನ್ಮಾನಿಸಲಾಯಿತು. ತಾಲೂಕು ಪಂಚಾಯತ್ ಸದಸ್ಯೆ ಲಲಿತಾ ಆರ್.ಶೆಟ್ಟಿ, ಜಿಲ್ಲಾ ಉಪ ಕೃಷಿ ನಿದರ್ೇಶಕ ಚಂದ್ರಶೇಖರ ನಾಯಕ್, ಬ್ರಹ್ಮಾವರ ಕೆವಿಕೆಯ ವಿಜ್ಞಾನಿ ನವೀನ್ ಉಪಸ್ಥಿತರಿದ್ದರು. ಕುಂದಾಪುರ ಸಹಾಯಕ ಕೃಷಿ ನಿದರ್ೇಶಕ ಮೋಹನರಾಜ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಾಯಕ ಕೃಷಿ ಅಧಿಕಾರಿ ರಘುರಾಮ ಶೆಟ್ಟಿ ಸ್ವಾಗತಿಸಿ, ಕೃಷಿ ಅಧಿಕಾರಿ ಸುಬ್ಬಣ್ಣ ಶೆಟ್ಟಿ ಅತಿಥಿಗಳನ್ನು ಗೌರವಿಸಿದರು. ಕಾರ್ಯಕ್ರಮದಲ್ಲಿ ಆರ್ಹ ಫಲಾನುಭವಿಗಳಿಗೆ ಪವರ್ ಟಿಲ್ಲರ್ ಸೇರಿದಂತೆ ವಿವಿಧ ಕೃಷಿ ಪರಿಕರಗಳ ವಿತರಿಸಲಾಯಿತು. ಕೃಷಿ ಮಾಹಿತಿ, ಪ್ರಾತ್ಯಕ್ಷಿಕೆಗಳು ಜರಗಿದವು.

ಬೈಂದೂರು ಕಾಲೇಜು ವಿದ್ಯಾರ್ಥಿ ನಿ ಅಸಹಜ ಸಾವು ಪ್ರಕರಣ

By Nagaraj On June - 25 - 2015 ADD COMMENTS


ಬಡ ಕುಟುಂಬಕ್ಕೆ ನವೋದಯ ಟ್ರಸ್ಟ್ನಿಂದ 1ಲಕ್ಷ ರೂ. ಹಸ್ತಾಂತರ
ಬೈಂದೂರು ಸಮೀಪದ ಹೇನ್ಬೇರು ಪರಿಸರದ ಆಶಾ ನವೋದಯ ಗುಂಪಿನ ಸದಸ್ಯೆ ರಾಧಾ ದೇವಾಡಿಗ ಅವರ ಮಗಳು ಬೈಂದೂರು ಪದವಿ ಪೂರ್ವ ಕಾಲೇಜು ವಿದ್ಯಾಥರ್ಿನಿ ಅಕ್ಷತಾ ದೇವಾಡಿಗ ಜೂನ್ 17ರಂದು ಕಾಲೇಜಿನಿಂದ ಮನೆಗೆ ಬರುತ್ತಿರುವಾಗ ಮನೆ ಸಮೀಪದ ಆಕೇಶಿಯಾ ತೋಪಿನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದು, ಮಗಳನ್ನು ಕಳೆದುಕೊಂಡು ದುಃಖದಲ್ಲಿರುವ ಮನೆಗೆ ನವೋದಯ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರು, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಜೂನ್ 19ರಂದು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿ, ರೂ. 1ಲಕ್ಷ ನಗದನ್ನು ಕುಟುಂಬಕ್ಕೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ಈ ಭಾಗದ ವಿದ್ಯಾಥರ್ಿಗಳ ಬೇಡಿಕೆಯಂತೆ ಹೆನ್ಬೇರ್ನಿಂದ ಬೈಂದೂರು ಕಾಲೇಜು ತನಕ ಸಕರ್ಾರ ವಾಹನದ ವ್ಯವಸ್ಥೆ ಮಾಡುವ ತನಕ ವಾಹನದ ವ್ಯವಸ್ಥೆ ಕಲ್ಪಿಸಲಾಗುವುದು. ವಿದ್ಯಾಥರ್ಿಗಳು ಯಾವುದೇ ಕಾರಣಕ್ಕೂ ಶಾಲೆ ಕಾಲೇಜಿಗೆ ಹೋಗುವುದನ್ನು ನಿಲ್ಲಿಸಬಾರದು. ಅಲ್ಲದೇ ಕುಟುಂಬದ ತುತರ್ು ಅಗತ್ಯತೆಗಾಗಿ ಒಂದು ಲಕ್ಷ ರೂಪಾಯಿಯನ್ನು ನೀಡುತ್ತಿದ್ದೇವೆ. ಇಂಥಹ ದುರ್ಘಟನೆಗಳು ಭವಿಷ್ಯದಲ್ಲಿ ಘಟಿಸಬಾರದು ಎಂದು ಹೇಳಿದ ಅವರು, ಈ ಹಿಂದೆ ಇದೇ ಪರಿಸರದಲ್ಲಿ ಸರಣಿಯಾಗಿ ದನಗಳು ಸಾವನ್ನಪ್ಪಿದ ಸಂದರ್ಭದಲ್ಲಿ ಕೂಡಾ ನಾವು ಸ್ಪಂದಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿದರ್ೇಶಕರಾದ ಎಸ್.ರಾಜು ಪೂಜಾರಿ, ರಘುರಾಮ ಶೆಟ್ಟಿ, ಟಿಎಪಿಸಿಎಂಎಸ್ ಕುಂದಾಪುರ ಇದರ ಅಧ್ಯಕ್ಷರಾದ ಮಲ್ಯಾಡಿ ಮೋಹನದಾಸ್ ಶೆಟ್ಟಿ, ವಲಯ ಮೇಲ್ವಿಚಾರಕ ಶಿವರಾಮ ಉಪಸ್ಥಿತರಿದ್ದರು.

 

ಮೂರು ದಿನಗಳಲ್ಲಿ ಪ್ರಕರಣ ಬೇಧಿಸಿದ ಪೊಲೀಸ್ ಕಾರ್ಯವೈಖರಿಗೆ ಶಾಸಕರ ಅಭಿನಂದನೆ

By Nagaraj On June - 25 - 2015 ADD COMMENTS

 
ಬೈಂದೂರು ಸಮೀಪದ ಹೆನ್ಬೇರು ವಿದ್ಯಾಥರ್ಿನಿ ಅಕ್ಷತಾ ದೇವಾಡಿಗ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ. ಘಟನೆ ನಡೆದ ಮೂರು ದಿನಗಳ ಒಳಗೆ ಆರೋಪಿಯನ್ನು ಬಂಧಿಸಿದ ಪೊಲೀಸ್ ಇಲಾಖೆ ಅಭಿನಂದನಾರ್ಹ ಎಂದು ಬೈಂದೂರು ಕ್ಷೇತ್ರದ ಶಾಸಕ ಕೆ.ಗೋಪಾಲ ಪೂಜಾರಿ ತಿಳಿಸಿದರು.
ಅವರು ಶಾಸಕರ ಕಛೇರಿಯಲ್ಲಿ ಜೂನ್ 20ರಂದು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು. ಈ ಘಟನೆ ಬಹಳ ದುಃಖಕರವಾದುದಾಗಿದ್ದು, ಬುಧವಾರ ಸಂಜೆ ವಿದ್ಯಾಥರ್ಿ ಅಕ್ಷತಾ ಶವ ಪತ್ತೆಯಾಗುತ್ತಿದ್ದಂತೆ ನನಗೆ ಪೋನ್ ಕರೆ ಬಂತು. ಆ ಸಂದರ್ಭ ನಾನು ಬೆಂಗಳೂರಿನಲ್ಲಿ ಅಗತ್ಯ ಸಭೆಯೊಂದನ್ನು ಮುಗಿಸಿ, ಶಿವಮೊಗ್ಗ ಸಮೀಪ ಬರುತ್ತಿದ್ದೆ. ತಕ್ಷಣ ಈ ಭಾಗದ ಪ್ರಮುಖರಿಗೆ ಸ್ಥಳಕ್ಕೆ ಹೋಗುವಂತೆ ಸೂಚಿಸಿದೆ. ಬೆಳಿಗ್ಗೆ ಮೃತ ಅಕ್ಷತಾ ಮನೆಗೆ ಭೇಟಿ ನೀಡಿದ್ದೇನೆ. ಪೊಲೀಸ್ ಇಲಾಖೆ ಜೊತೆ ನಿರಂತರ ಸಂಪರ್ಕದಲ್ಲಿದ್ದುಕೊಂಡಿದ್ದಲ್ಲದೇ ಮುಖ್ಯಮಂತ್ರಿಗಳ ಜೊತೆ ಚಚರ್ಿಸಿದ್ದೇನೆ. ಐಜಿಪಿ ಮೂಲಕ ಗೃಹ ಸಚಿವರ ಜೊತೆ ಮಾತನಾಡಿದ್ದು, ಅವರು ಶೋಧ ಕಾರ್ಯ ತೀವ್ರಗೊಳಿಸುವಂತೆ ಇಲಾಖೆಗೆ ಸೂಚಿಸಿದ್ದಲ್ಲದೇ ಅವರು ಪೊಲೀಸ್ ಇಲಾಖೆ ಜೊತೆ ನಿರಂತರ ಸಂಪರ್ಕದಲ್ಲಿದ್ದರು. ಐಜಿಪಿ, ಎಸ್ಪಿ ಅವರು ಹೇಳಿದಂತೆ ಮೂರು ದಿನಗಳಲ್ಲಿ ಆರೋಪಿಯನ್ನು ಬಂಧಿಸುವ ಕೆಲಸ ಮಾಡಿದ್ದಾರೆ ಎಂದರು.
ಇನ್ನೂ ಬಡ ಕುಟುಂಬಕ್ಕೆ 5 ಲಕ್ಷಗಳ ಪರಿಹಾರವನ್ನು ಸಕರ್ಾರದ ವತಿಯಿಂದ ಕೂಡಲೆ ತರಿಸಿಕೊಡಲಾಗುವುದು. ಪೊಲೀಸ್ ಇಲಾಖೆಯ ವರದಿಗಳಲ್ಲಿ ಪರಿಹಾರ ದೊರಕಿಸಿಕೊಡುವಲ್ಲಿ ಪ್ರಮುಖವಾಗಿರುವುದರಿಂದ ವರದಿಗಳ ಬಂದ ತಕ್ಷಣ ಪರಿಹಾರ ದೊರಕಿಸಿಕೊಡಲಾಗುವುದು. ತಕ್ಷಣ ಪ್ರಕರಣವನ್ನು ಬೇಧಿಸುವಲ್ಲಿ ಇಲಾಖೆ ಶ್ರಮಿಸಿದ್ದು, ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಬಗ್ಗೆ ಗೌರವ ಮೂಡಿಸುವ ಕೆಲಸ ಮಾಡಿದೆ ಎಂದರು.
ಈಗಾಗಲೇ ಮೃತ ಅಕ್ಷತಾ ಮನೆಗೆ ಶಿಕ್ಷಣ ಸಚಿವರು ಭೇಟಿ ನೀಡಿ, ಅಲ್ಲಿನ ವಿದ್ಯಾಥರ್ಿಗಳ ಬೇಡಿಕೆಯಂತೆ ವಾಹನ ವ್ಯವಸ್ಥೆಯ ಭರವಸೆ ನೀಡಿದ್ದಾರೆ. ಬೈಂದೂರು ಕಾಲೇಜಿನಲ್ಲಿ ಬಾಲಕರ ಶೌಚಾಲಯಕ್ಕೆ 10 ಲಕ್ಷ, ಬಾಲಕಿಯರ ಶೌಚಾಲಯಕ್ಕೆ 20 ಲಕ್ಷ ಮಂಜೂರು ಮಾಡುವ ಆಶ್ವಾಸನೆ ನೀಡಿದ್ದಾರೆ. ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನ ಅಧ್ಯಕ್ಷರು ನವೋದಯ ಟ್ರಸ್ಟ್ನಿಂದ ರೂ.1ಲಕ್ಷ ಆಥರ್ಿಕ ನೆರವು ನೀಡಿದ್ದಾರೆ. ಮೂರು ತಿಂಗಳು ವಾಹನದ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ. ಇನ್ನೂ ಈ ಭಾಗದ ಬಹು ಬೇಡಿಕೆ ಲೇಡಿಸ್ ಹಾಸ್ಟೆಲ್. ಮುಖ್ಯಮಂತ್ರಿಗಳ ಜೊತೆ ಈ ಬಗ್ಗೆ ಚಚರ್ಿಸಿ, ಬೈಂದೂರಿಗೆ ಲೇಡಿಸ್ ಹಾಸ್ಟೆಲ್ ಖಂಡಿತ ಮಾಡುತ್ತೇನೆ ಎಂದರು.
ಹೆನ್ಬೇರು ಭಾಗದ ಜನರ ಬೇಡಿಕೆ ರಾಘವೇಂದ್ರ ಮಠದ ಹತ್ತಿರ ಬಸ್ ತಂಗುದಾಣಕ್ಕೆ ಈಗಾಗಲೇ ಸಚಿವರು ಆದೇಶ ಮಾಡಿದ್ದಾರೆ. ಹಳ್ಳಿಗಳಿಗೆ ಹೊಸ ಬಸ್ ಪರವಾನಿಗೆ ನೀಡುವ ಕೆಲಸ ಆರಂಭವಾಗಲಿದೆ. ಒಟ್ಟಾರೆಯಾಗಿ ಗ್ರಾಮೀಣ ಭಾಗದ ಜನರ ನೋವಿಗೆ ನಾವು ತಕ್ಷಣ ಸ್ಪಂದಿಸುತ್ತೇವೆ. ಇಂಥಹ ಘಟನೆಗಳು ಭವಿಷುದಲ್ಲಿ ಪುನಾರವರ್ತನೆ ಆಗದಂತೆ ಮುಂಜಾರುಕತೆ ವಹಿಸುವ ಕೆಲಸ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ತಾ.ಪಂ.ಸದಸ್ಯ ರಾಜು ಪೂಜಾರಿ, ರಮೇಶ ಗಾಣಿಗ, ರಾಮ ಶೇರುಗಾರ್, ಮಾಜಿ ಸದಸ್ಯರಾದ ವಿಜಯಕುಮಾರ್ ಶೆಟ್ಟಿ, ಕೆ.ಪಿ.ಸಿ.ಸಿ ಸದಸ್ಯರಾದ ರಘುರಾಮ ಶೆಟ್ಟಿ, ಸಂಪಿಗೇಡಿ ಸಂಜೀವ ಶೆಟ್ಟಿ, ಮದನ್ ಕುಮಾರ್, ಬಾಬು ಶೆಟ್ಟಿ, ಅಶೋಕ ಶೆಟ್ಟಿ, ಚಂದ್ರ ಪೂಜಾರಿ, ಸುರೇಶ, ನಾಗರಾಜ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು.
‘ಸುಪ್ರಿತಾ ಪೂಜಾರಿ ಪ್ರಕರಣ ಮರೆತಿಲ್ಲ’
ಕಳೆದ ವರ್ಷ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ವಿದ್ಯಾಥರ್ಿನಿ ಸುಪ್ರಿತಾ ಪೂಜಾರಿ ಆತ್ಮಹತ್ಯೆ ಪ್ರಕರಣವನ್ನು ಮರೆತಿಲ್ಲ, ತನಿಖೆ ನಡೆಯುತ್ತಿದೆ. ರತ್ನ ಕೊಠಾರಿ ನಿಗೂಢ ಸಾವಿನ ಪ್ರಕರಣದ ಮರಣೋತ್ತರ ಪರೀಕ್ಷೆ ವರದಿ ಇತ್ತೀಚೆಗಷ್ಟೆ ಬೈಂದೂರು ಠಾಣೆಗೆ ಬಂದಿದ್ದು, ಇಲಾಖೆಯ ಚಾಜರ್್ಸೀಟ್ ಸಲ್ಲಿಸಿದ ಬಳಿಕ ಆಕೆಯ ಕುಟುಂಬಕ್ಕೆ ಆಶ್ವಾಸನೆ ಕೊಟ್ಟ ಪರಿಹಾರವನ್ನು ಮುಟ್ಟಿಸಲಾಗುವುದು ಎಂದು ಶಾಸಕರು ತಿಳಿಸಿದರು.

 

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುಷಾಗೆ 542 ಅಂಕ

By Karavali Nudi On May - 26 - 2015 ADD COMMENTS

ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸ.ಪ.ಪೂ.ಕಾಲೇಜು ವಂಡ್ಸೆ (ನೆಂಪು) ಇಲ್ಲಿನ ವಿದ್ಯಾಥರ್ಿನಿ ಅನುಷಾ 542 ಅಂಕ ಗಳಿಸಿದ್ದಾರೆ. ಕನ್ನಡ-95, ಇಂಗ್ಲಿಷ್-78, ಹಿಸ್ಟರಿ-92, ಎಕಾನಮಿಕ್ಸ್-94, ಬ್ಯುಸಿನೆಸ್ ಸ್ಟಡೀಸ್-91, ಅಕೌಂಟೆನ್ಸಿ-92 ಅಂಕ ಗಳಿಸಿದ್ದಾರೆ. ಡಿಸ್ಟಿಂಕ್ಷನ್ನಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಆನಂದ ಪೂಜಾರಿ ಮತ್ತು ಆಶಾ ನೆಂಪು ಹೆಜರ್ಾಡಿ ಇವರ ಪುತ್ರಿ.

ಪ್ರಶಾಂತ್ ಬಿ.ಸಿಗೆ 535 ಅಂಕ

By Karavali Nudi On May - 19 - 2015 ADD COMMENTS


ಮೂಲತಃ ಕುಂದಾಪುರದವನಾದ ಬೆಂಗಳೂರು ಅರಬಿಂದೋ ವಿದ್ಯಾ ಮಂದಿರ್ನ ವಿದ್ಯಾಥರ್ಿ ಪ್ರಶಾಂತ್ ಬಿ.ಸಿ ಈ ಬಾರಿ ಎಸ್.ಎಸ್.ಎಲ್.ಸಿ ಪಬ್ಲಿಕ್ ಪರೀಕ್ಷೆಯಲ್ಲಿ 535(86.5%) ಅಂಕ ಗಳಿಸಿದ್ದಾನೆ. ಈತ ಬೆಂಗಳೂರಿನ ಅನ್ನಪೂಣರ್ೇಶ್ವರಿ ಸ್ವೀಟ್ಸ್ನ ಯು.ವಿ.ಚಂದ್ರಶೇಖರ ಮತ್ತು ಶಾಂತ ದಂಪತಿಗಳ ಪುತ್ರ.

Copyright © 2012 All rights reserved.