17 December , 2017 Sunday

COASTAL NEWS

COASTAL NEWS

Archive for the ‘Crime News’ Category

Belthangadi: Man arrested on sexual assault charge

By The Hindu On October - 7 - 2016 ADD COMMENTS

A 16-year-old girl was reportedly raped by a 33-year-old man in Belthangady. The sexual assault came to light when the girl came to a hospital for check-up on Thursday.

The police said that the girl was raped by her neighbour Seena.

She revealed to the doctors about the assault when she came to hospital for a check-up on Thursday afterthe doctors told her that she was six months pregnant.

On a complaint, the police arrested Seena for offences under Section 376 of the Indian Penal Code and under provisions of the Protection of Children from Sexual Offences Act.

ಉಪ್ಪಿನ ಕುದ್ರು: ಬೈಕ ಅಪಘಾತ

By udupi police On September - 4 - 2015 ADD COMMENTS
  • ಕುಂದಾಪುರ: ದಿನಾಂಕ 02/09/2015 ರಂದು ರಾತ್ರಿ 8:15 ಗಂಟೆಗೆ ಕುಂದಾಪುರ ತಾಲೂಕು ಉಪ್ಪಿನ ಕುದ್ರು ಗ್ರಾಮದ ಹಾದಿಬೆಟ್ಟು ಕ್ರಾಸ್‌ ಎಂಬಲ್ಲಿ ಆಪಾದಿತ ರಾಧಕೃಷ್ಣ ಎಂಬುವವರು KA 20 W 4188 ನೇ ಬೈಕನ್ನು ಉಪ್ಪಿನಕುದ್ರು ಕಡೆಯಿಂದ ತಲ್ಲೂರು ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ಬಲಬದಿಗೆ ಬಂದು ಪಿರ್ಯಾದಿದಾರರಾದ ಮಂಜುನಾಥ (29), ತಂದೆ : ಕುಷ್ಟ, ವಾಸ: ಮೊಳಸಾಲ್‌‌ ಬೆಟ್ಟು ಉಪ್ಪಿನಕುದ್ರು ಗ್ರಾಮ ಕುಂದಾಪುರ ತಾಲೂಕು ಇವರು ಸಹ ಸವಾರರಾಗಿ, ನಿತ್ತೇಶ ಎಂಬುವವರು ಸವಾರರಾಗಿ ತಲ್ಲೂರಿ ಕಡೆಯಿಂದ ಉಪ್ಪಿನಕುದ್ರು ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿದ್ದ KA 20 S 3902 ನೇ ಬೈಕಿಗೆ ಎದುರಗಡೆಯಿಂದ ಡಿಕ್ಕಿ ಹೊಡೆದ ಪರಿಣಾಮ ಮಂಜುನಾಥ ರವರು ಹಾಗೂ ಬೈಕ್‌ ಸವಾರ ನಿತ್ತೇಶ ಬೈಕ್ ಸಮೇತ ರಸ್ತೆಯಲ್ಲಿ ಬಿದ್ದು ನಿತ್ತೇಶನ ತಲೆಯು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ತಾಗಿ ಅವರ ತಲೆಗೆ ಬಲ ಕಿವಿಗೆ ಹಾಗೂ ಮೈಕೈಗೆ ರಕ್ತಗಾಯ  ಹಾಗೂ ಒಳ ನೋವು ಉಂಟಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲದ  ಕೆಎಂಸಿ ಆಸ್ಪತ್ರೆಗೆ ಹೋಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 109/2015 ಕಲಂ: 279 ,337   ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಗಂಗೊಳ್ಳಿ: ಹಲ್ಲೆ ಪ್ರಕರಣ

By udupi police On August - 14 - 2015 ADD COMMENTS
  • ಗಂಗೊಳ್ಳಿ: ಪಿರ್ಯಾದಿದಾರರಾದ ಈಣಕಿ ಗೌಡ (28), ತಂದೆ: ಕರಿ ಗೌಡ, ವಾಸ: ಜಿಗಲೂರು ಗ್ರಾಮ, ರೋಣ ತಾಲೂಕು, ಗದಗ ಜಿಲ್ಲೆ ಇವರು ದುರ್ಗಾಂಬಾ ಕಂಪೆನಿಯ ಕೆಎ 20 ಬಿ 6981 ನೇ ಬಸ್ಸಿನಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 13/08/2015 ರಂದು ಬೆಳಿಗ್ಗೆ 08:25 ಗಂಟೆಗೆ ಪಡುಕೋಣೆಯಿಂದ ಕುಂದಾಫುರಕ್ಕೆ ಟ್ರೀಪ್‌ ಮಾಡಿಕೊಂಡು ಬರುವಾಗ ಗುಡ್ಡಮ್ಮಾಡಿ ಬಳಿ ಬಸ್ಸು ನಿಲ್ಲಿಸುವಂತೆ ಕೆಲವು ಹುಡುಗರು ಸೂಚನೆ ನೀಡಿದ್ದು, ಬಸ್ಸಿನಲ್ಲಿ ಪ್ರಯಾಣಿಕರು ತುಂಬಾ ಇರುವುದರಿಂದ ಈಣಕಿ ಗೌಡ ರವರು ಬಸ್ಸನ್ನು ನಿಲ್ಲಿಸದೇ ಹೋಗಿದ್ದು, ಸಂಜೆ 6:30 ಗಂಟೆಗೆ ಕುಂದಾಫುರ ತಾಲೂಕು ಪಡುಕೋಣೆ ಎಂಬಲ್ಲಿ ಬಸ್ಸನ್ನು ನಿಲ್ಲಿಸಿ ತನ್ನ ರೂಮಿನ ಕಡೆಗೆ ನಡೆದುಕೊಂಡು ಹೋಗುವಾಗ 4 ಜನ ಯುವಕರು ಈಣಕಿ ಗೌಡ ರವರ ಬಳಿ ಬಂದು ಅವರ ಪೈಕಿ ಈಣಕಿ ಗೌಡರವರಿಗೆ ಪರಿಚಯವಿರುವ ಜೀವನ್‌ ಶೆಟ್ಟಿ ಎಂಬುವವನು ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ ಕೈಯಿಂದ ಕೆನ್ನೆಗೆ ಹೊಡೆದು ಅವಾಚ್ಯ ಶಬ್ಧದಿಂದ ಬೈದು ಮುಂದಕ್ಕೆ ಚಾಲಕನಾಗಿ ಬಂದಲ್ಲಿ ಕೊಲ್ಲದೇ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 107/2015 ಕಲಂ: 341, 323, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಗಂಗೊಳ್ಳಿ: ಸಾರ್ವಜನಿಕ ರಸ್ತೆಯಲ್ಲಿ ಜಗಳ

By udupi police On August - 13 - 2015 ADD COMMENTS

ಗಂಗೊಳ್ಳಿ: ದಿನಾಂಕ 12/08/2015  ರಂದು ಗಂಗೊಳ್ಳಿ ಪೊಲೀಸ್ ಠಾಣಾ ಹೆಚ್.ಸಿ ರವೀಶ್  ಹೊಳ್ಳರವರು ಗಂಗೊಳ್ಳಿ ಹೊರ ಠಾಣೆಯಲ್ಲಿ ಕರ್ತವ್ಯದಲ್ಲಿ  ಇರುವಾಗ ಬೆಳಿಗ್ಗೆ  11-00 ಗಂಟೆಗೆ  ಗಂಗೊಳ್ಳಿ  ಬಂದರ್ ನಿಂದ  ಒಬ್ಬರು  ಫೋನ್  ಮಾಡಿ  ಗಂಗೊಳ್ಳಿ ಗ್ರಾಮದ  ಗಂಗೊಳ್ಳಿ  ಬಂದರ್  ಬಸ್  ನಿಲ್ದಾಣದಲ್ಲಿ  ಎರಡು ಬಸ್ಸುಗಳನ್ನು ಸಾರ್ವಜನಿಕ ರಸ್ತೆಯಲ್ಲಿ ನಿಲ್ಲಿಸಿಕೊಂಡು ಚಾಲಕ ಮತ್ತು ನಿರ್ವಾಹಕರು ಗಲಾಟೆ ಮಾಡಿಕೊಳ್ಳುತ್ತಿರುವುದಾಗಿ  ಮಾಹಿತಿ ನೀಡಿದ್ದು  ಕೂಡಲೇ  ನಾನು ಮೇಲ್ಕಾಣಿಸಿದ  ಸ್ಥಳಕ್ಕೆ  ಬೆಳಿಗ್ಗೆ   11-15 ಗಂಟೆಗೆ  ತಲುಪಿದ್ದು  ಆ ಸಮಯದಲ್ಲಿ ಗಂಗೊಳ್ಳಿ ಗ್ರಾಮದ  ಗಂಗೊಳ್ಳಿ  ಬಂದರ್  ಬಸ್  ನಿಲ್ದಾಣಕ್ಕೆ ಹೋದಾಗ  ಬಸ್‌  ನಿಲ್ದಾಣದ  ಬಳಿ ಸಾರ್ವಜನಿಕ ರಸ್ತೆಯಲ್ಲಿ  ಕೆಎ 20 ಸಿ 1711 ಮತ್ತು  ಕೆಎ 20 ಸಿ  3309 ನೇದನ್ನು  ನಿಲ್ಲಿಸಿಕೊಂಡು ಮೂವರು  ವ್ಯಕ್ತಿಗಳು  ಅವರೊಳಗೆ ಅವಾಚ್ಯ ಶಬ್ದಗಳಿಂದ ಬೈದಾಡುತ್ತ ದೂಡಾಡಿಕೊಂಡು ಜಗಳಮಾಡಿಕೊಳ್ಳುತ್ತಿದ್ದರು. ಅವರನ್ನು ವಿಚಾರಣೆಯ ಬಗ್ಗೆ ಕರೆದಾಗ ಮೂವರು  ಪರಸ್ಪರ ಬೈದಾಡುತ್ತಾ  ಕೈಗಳಿಂದ ಹೊಡೆದಾಡಲು ಪ್ರಾರಂಭಿಸಿದರು. ಇವರನ್ನು  ವಶಕ್ಕೆ  ತೆಗೆದುಕೊಂಡು  ಅವರ  ಹೆಸರು  ವಿಳಾಸ  ವಿಚಾರಿಸಲಾಗಿ ಕೆಎ 20 ಸಿ 1711     ಬಸ್ಸಿನ  ಚಾಲಕರಾದ  1.ಗಿರೀಶ  (28)  ತಂದೆ. ಹನುಮಂತ  ಖಾರ್ವಿ,  ವಾಸ. ತ್ರಾಸಿ ಬೀಚ್  ಬಳಿ, ತ್ರಾಸಿ ಗ್ರಾಮ ಕುಂದಾಪುರ  ತಾಲೂಕು  ಮತ್ತು ಸದ್ರಿ ಬಸ್ಸಿನ ನಿರ್ವಾಹಕರಾದ  2. ಜಯರಾಮ (25)  ತಂದೆ. ಬಾಬು ಪೂಜಾರಿ, ವಾಸ.  ಏರುಕೋಣೆ,  ಹೇರೂರು ಗ್ರಾಮ,  ಕುಂದಾಪುರ ತಾಲೂಕು  ಮತ್ತು  ಕೆಎ 20 ಸಿ  3309 ನೇ  ಬಸ್ಸಿನ  ಚಾಲಕ  3.  ಗೋವಿಂದರಾಯ (25)  ತಂದೆ. ಅಣ್ಣಪ್ಪ, ವಾಸ. ಸೋಮನ ಮನೆ, ಮಯ್ಯಾಡಿ  ಅಂಚೆ,  ಬೈಂದೂರು. ಕುಂದಾಪುರ ತಾಲೂಕು.  ಎಂಬುವುದಾಗಿ  ತಿಳಿಸಿರುತ್ತಾರೆ. ಇವರುಗಳು ಸಾರ್ವಜನಿಕ ಸ್ಥಳದಲ್ಲಿ  ಹೊಡೆದಾಡಿ ಸಾರ್ವಜನಿಕ ಶಾಂತಿ  ಕದಡಿ ಶಾಂತಿಭಂಗವನ್ನುಂಟು ಮಾಡಿದ್ದು,  ಎರಡೂ ಬಸ್ಸುಗಳನ್ನು  ಹಾಗೂ  ಮೂವರನ್ನು   ವಶಕ್ಕೆ  ತೆಗೆದುಕೊಂಡು  ಈ ಬಗ್ಗೆ ಗಂಗೊಳ್ಳಿ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 106/2015  ಕಲಂ:160 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಬೈಂದೂರು: ಅಸ್ವಾಭಾವಿಕ ಮರಣ ಪ್ರಕರಣ

By udupi police On August - 13 - 2015 ADD COMMENTS

ಬೈಂದೂರು: ಪಿರ್ಯಾದಿದಾರರಾದ ಸೀತು ಪೂಜಾರ್ತಿ (55) ಗಂಡ: ದಿ| ರಾಮ ಪೂಜಾರಿ ವಾಸ: ಕಾಪಿನಮನೆ ಉಪ್ರಳ್ಳಿ, ಉಳ್ಳೂರು 11 ಗ್ರಾಮ ಕುಂದಾಪುರ ತಾಲೂಕು ಇವರ ಮಗ ನಾಗರಾಜ (27) ಎಂಬುವವರು ದಿನಾಂಕ 12/08/2015 ರಂದು ರಾತ್ರಿ 10:00 ಗಂಟೆಯಿಂದ ದಿನಾಂಕ 13/08/2015 ರಂದು ಬೆಳಿಗ್ಗಿನ ಜಾವ 02:30 ಗಂಟೆಯ ನಡುವಿನ ಅವಧಿಯಲ್ಲಿ 11 ನೇ ಉಳ್ಳೂರು ಗ್ರಾಮದ ಉಪ್ರಳ್ಳಿಯ ಕಾಪಿನ ಮನೆ ಎಂಬಲ್ಲಿರುವ ಸೀತು ಪೂಜಾರ್ತಿ ಯವರ ಮನೆಯ ರೂಮಿನ ಮಾಡಿನ ಪಕಾಸೆಗೆ ನೈಲಾನ್‌ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೋಲಿಸ್ ಠಾಣೆ ಯುಡಿಆರ್ ಕ್ರಮಾಂಕ 30/2015 ಕಲಂ:174  ಸಿಅರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.   

ವಂಡ್ಸೆ: ಮೋಟಾರು ಸೈಕಲ್‌ ಡಿಕ್ಕಿ: ಸವಾರ ಗಾಯ

By udupi police On March - 8 - 2015 ADD COMMENTS

ವಂಡ್ಸೆ: ದಿನಾಂಕ 07/03/2015 ರಂದು ಪಿರ್ಯಾದಿದಾರರಾದ ಮಹೇಶ ಪೂಜಾರಿ ತಂದೆ ಕೊರಗ ಮಾವಿನಕಟ್ಟೆ, ವಂಡ್ಸೆ ಗ್ರಾಮ, ಕುಂದಾಪುರ ತಾಲೂಕು ಎಂಬವರು ತನ್ನ ಕೆಎ-20-ಇಸಿ-3509 ನೇ ಕಮೋಟಾರು ಸೈಲಿನಲ್ಲಿ ಹಿಂಬದಿ ನಾಗರಾಜ ಪೂಜಾರಿಯವರನ್ನು ಕುಳ್ಳಿರಿಸಿಕೊಂಡು ವಂಡ್ಸೆ ಕಡೆಯಿಂದ ರಾಹೆ-66 ರಲ್ಲಿ ಮರವಂತೆ ಕಡೆಗೆ ಹೋಗುವರೇ ಹೊಸಾಡು ಗ್ರಾಮದ ಅರಾಟೆ ಬಸ್‌ ನಿಲ್ದಾಣ ಬಳಿ ಬೆಳಿಗ್ಗೆ 8.30ಗಂಟೆಗೆ ಬರುವಾಗ ಸದ್ರಿ ಮೋಟಾರು ಸೈಕಲಿನ ಹಿಂಬದಿಯಿಂದ ಕೆಎ-20-ಸಿ-2066ನೇ ಆಟೋ ರಿಕ್ಷಾವನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದಿದಾರರ ಮೋಟಾರು ಸೈಕಲಿನ ಬಲ ಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ಹಾಗೂ ಸಹಸವಾರ ಮೋಟಾರು ಸೈಕಲ್‌ ಸಮೇತ ರಸ್ತೆಗೆ ಬಿದ್ದು, ಪಿರ್ಯಾದುದಾರರ ಪಾದದ ಬೆರಳು, ಪಾದಕ್ಕೆ ತೀವೃ ಗಾಯ ಹಾಗೂ ಸಹ ಸವಾರ ನಾಗರಾಜ ಪೂಜಾರಿಯವರಿಗೆ ಬಲಭುಜಕ್ಕೆ ತರಚಿದ ಗಾಯ ಹಾಗೂ ಬಲ ಬದಿ ಸೊಂಟ ಹಾಗೂ ಬಲಕಾಲಿಗೆ ಒಳ ಗಾಯ ಆಗಿದ್ದು. ಚಿಕಿತ್ಸೆ ಬಗ್ಗೆ ಚಿನ್ಮಯಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ ಎಂಬುದಾಗಿ ಮಹೇಶ ಪೂಜಾರಿ ರವರು ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 30/2015  ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ

ವಂಡ್ಸೆ: ಮಾರಣಾಂತಿಕ ಹಲ್ಲೆ

By udupi police On December - 2 - 2014 ADD COMMENTS
  • ವಂಡ್ಸೆ: ಆನಂದ ಶೆಟ್ಟಿ ಇವರು ದಿನಾಂಕ:01.12.2014 ರಂದು ರಾತ್ರಿ 9.15 ಗಂಟೆಗೆ ವಂಡ್ಸೆ ಪೇಟೆಯಿಂದ ತನ್ನ ಮನೆಯ ಕಡೆಗೆ ನೂಜಾಡಿ ಕ್ರಾಸ್‌ನಿಂದಾಗಿ ತೆಂಕೊಡ್ಗಿ ಕಡೆಗೆ ರಸ್ತೆಯಲ್ಲಿ ನಡೆದು ಕೊಂಡು ಹೋಗುತ್ತಿರುವಾಗ ಎರಡು ಮೋಟಾರು ಬೈಕ್‌ನಲ್ಲಿ ಬಂದಿದ್ದ ಆಪಾದಿತ 1)ಮಹೇಶ ಗಾಣಿಗ  2)ಮಂಜುನಾಥ @ ಸಿ.ಡಿ ಮಂಜ 3) 2 ಜನ ಅಪರಿಚಿತ ಯುವಕರುಗಳು  ಆನಂದ ಶೆಟ್ಟಿ ಅವರನ್ನು  ರಸ್ತೆಯಲ್ಲಿ ಅಡ್ಡಗಟ್ಟಿದ್ದು ಆಪಾದಿತರ ಪೈಕಿ ಪರಿಚಿತನಾಗಿದ್ದ ಮಹೇಶ ಗಾಣಿಗನು ಆತನ ಕೈಯಲ್ಲಿದ್ದ ಮರದ ಸೊಂಟೆಯಿಂದ ದೂರುದಾರರ ತಲೆಗೆ ಹೊಡೆದಿದ್ದು, ಅಲ್ಲದೆ ಇನ್ನೊಬ್ಬ ಆಪಾದಿತ ಪರಿಚಯದ ಸಿ.ಡಿ.ಮಂಜನ ಜೊತೆಗೆ ಅವಾಚ್ಯ ಶಬ್ದಗಳಿಂದ ಬೈದಿದ್ದು ಬಳಿಕ ಆಪಾದಿತ ಸಿ.ಡಿ ಮಂಜನು ಆತನ ಕೈಯಲ್ಲಿದ್ದ ತಲವಾರಿನಿಂದ ತಲೆಗೆ ಎಡಕಿವಿಗೆ ಹಾಗೂ ಎಡಗಲ್ಲದ ಬಳಿ ಕಡಿದಿದ್ದು ಆಪಾದಿತ ಮಹೇಶಗಾಣಿಗನು ದೂರುದಾರರ ಎಡಕೈಯ ಮೊಣಗಂಟಿಗೆ ಬಲವಾಗಿ ಹೊಡೆದಿದ್ದು ಈ ಹಲ್ಲೆಯಿಂದ ಆನಂದ ಶೆಟ್ಟಿ ಮಾರಣಾಂತಿಕವಾಗಿ ಗಾಯಗೊಂಡಿದ್ದು ಚಿಕಿತ್ಸೆಗೆ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 75/2014   ಕಲಂ: 341,504, 307 R/w 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕುಂದಾಪುರ : ಬೈಕ್‌ ಢಿಕ್ಕಿ, ಮಗು ಗಾಯ

By udupi police On November - 9 - 2014 ADD COMMENTS
  • ಕುಂದಾಪುರ : ದಿನಾಂಕ 07/11/2014 ರಂದು ಮಧ್ಯಾಹ್ನ 3:00 ಗಂಟೆಗೆ ಕುಂದಾಪುರ ತಾಲೂಕು ಕುಂದಾಪುರ ಕಸಬಾ   ಗ್ರಾಮದ ಚಿಕ್ಕನ್‌‌ ಸಾಲ್‌ ರಸ್ತೆಯ ಮೂಕಾಂಬಿಕಾ ಜನರಲ್‌‌  ಸ್ಟೋರ್ ಹತ್ತಿರ ರಸ್ತೆಯ ಬದಿಯಲ್ಲಿ ನಿಂತಿದ್ದ ಪಿರ್ಯಾದಿದಾರರಾದ ಉಮ್ಮರ್‌  (37) ತಂದೆ ಅಬ್ದುಲ್‌ ಸಾಹೇಬ್  ವಾಸ: ಜುಮ್ಮಾ ಮಸೀದಿಯ ಬಳಿ ಎಮ್‌‌‌ ಕೋಡಿ, ಕೋಡಿ  ಕಸಬಾ  ಗ್ರಾಮರವರ ಮೂರು ವರ್ಷ ಪ್ರಾಯದ ಇಫ್ರತ್‌  ಎಂಬ ಹೆಣ್ಣು  ಮಗುವಿಗೆ,  ಆಪಾದಿತ ಸತೀಶ  ಗಾಣಿಗ ಎಂಬವರು  KA20-V-1859 ನೇ ಬೈಕ್‌ನ್ನು  ಕುಂದಾಪುರ ಹಳೆ ಬಸ್‌  ನಿಲ್ದಾಣ ಕಡೆಯಿಂದ  ಸಂಗಂ ಕಡೆಗೆ ಅತೀವೇಗ ಹಾಗೂ  ಅಜಾಗರೂಕತೆಯಿಂದ ಸವಾರಿಮಾಡಿಕೊಂಡು ಬಂದು, ಢಿಕ್ಕಿ  ಹೊಡೆದ  ಪರಿಣಾಮ ಇಫ್ರತ್‌ಳ ಮೂಗಿನ ಬಳಿ,  ತಲೆಗೆ, ಹೊಟ್ಟೆಗೆ  ಒಳನೋವು ಹಾಗೂ  ತರಚಿದ  ರಕ್ತಗಾಯವಾಗಿ  ಚಿಕಿತ್ಸೆ  ಬಗ್ಗೆ  ಕುಂದಾಪುರ  ಚಿನ್ಮಯಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ ಎಂಬುದಾಗಿಉಮ್ಮರ್‌ರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣೆಯಲ್ಲಿ ಅಪರಾಧ ಕ್ರಮಾಂಕ 136/2014 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಮುದೂರು : ಜೀವ ಬೆದರಿಕೆ

By udupi police On October - 20 - 2014 ADD COMMENTS

ಕೊಲ್ಲೂರು:ದಿನಾಂಕ:18/10/2014 ರಂದು 22.00 ಗಂಟೆಗೆ ಆಪಾದಿತ 1)ಬಾಬು 2)ರಂಗ,ವಾಸ:ಕೊರಗ ಕಾಲೋನಿ, ಉದಯನಗರ, ಮುದೂರು ಗ್ರಾಮ, ಕುಂದಾಪುರ ತಾಲೂಕು ಇವರುಗಳು ಸಮಾನ ಉದ್ದೇಶದಿಂದ ಪಿರ್ಯಾದಿದಾರರಾದ ಸಂತೋಷ (45) ತಂದೆ:ದಿವಂಗತ ನಂದಿ ವಾಸ:ಕೊರಗ ಕಾಲೋನಿ, ಉದಯನಗರ, ಮುದೂರು ಗ್ರಾಮ, ಕುಂದಾಪುರ ತಾಲೂಕುರವರ ಮನೆಯ ಜಗುಲಿಗೆ ಅಕ್ರಮ ಪ್ರವೇಶ ಮಾಡಿ ಜಗುಲಿಯ ಬಾಗಿಲಿಗೆ ಬಡಿದು “ನಿಮ್ಮನ್ನು ಕೊಂದೇ ಬಿಡುತ್ತೇವೆ” ಎಂದು ಬೆದರಿಕೆ ಹಾಕಿದ್ದು,  ಸಂತೋಷರವರು ಹೆದರಿ ಹೆಂಡತಿ ಮಕ್ಕಳೊಂದಿಗೆ ಮನೆಯ ಹಿಂದಿನ ಬಾಗಿಲಿನಿಂದ ಓಡಿ ಜೋಸ್‌ ಎಂಬವರ ಮನೆಯಲ್ಲಿ ಆಶ್ರಯ ಪಡೆದಿರುತ್ತಾರೆ.ಈ ಕೃತ್ಯಕ್ಕೆ ಆಪಾದಿತರ ಮನೆಯ ರಾಜು ಎಂಬಾತನು ಸಂತೋಷರವರ ಮನೆಗೆ ಬರುತ್ತಿದ್ದು, ಸಂತೋಷರವರೊಂದಿಗೆ ಒಳ್ಳೆಯ ರೀತಿಯಲ್ಲಿದ್ದು,ಅದೇ ಕಾರಣಕ್ಕೆ ಆಪಾದಿತರುಗಳು ಮತ್ಸರಗೊಂಡು ಈ ಕೃತ್ಯ ಮಾಡಿರುವುದಾಗಿದೆ. ಈ ಬಗ್ಗೆ ಸಂತೋಷರವರು ನೀಡಿದ ದೂರಿನಂತೆ ಕೊಲ್ಲೂರು ಠಾಣಾ ಅಪರಾಧ ಕ್ರಮಾಂಕ 68/2014 ಕಲಂ:448, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ

ಗಂಗೊಳ್ಳಿ:ಅಕ್ರಮ ಜಾನುವಾರು ಸಾಗಾಟ

By udupi police On September - 13 - 2014 ADD COMMENTS
  • ಗಂಗೊಳ್ಳಿ: ದಿನಾಂಕ  12/09/2014  ರಂದು ರಾತ್ರಿ ಗಂಗೊಳ್ಳಿ ಪೊಲೀಸ್  ಠಾಣಾ  ಪಿ.ಎಸ್.ಐ  ಗೋವರ್ಧನ ಎಂ  ರವರಿಗೆ ಮಾರುತಿ  ಓಮ್ನಿ    ಕಾರು  ಕೆಎ. 20.ಬಿ. 2334   ನೇಯದರಲ್ಲಿ  ಗಂಗೊಳ್ಳಿ ಕಡೆಗೆ  ದನ ಸಾಗಿಸುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ  ರಾತ್ರಿ 11.15 ಗಂಟೆಗೆ ಓಮ್ನಿ   ಕಾರು ಪರಿಶೀಲಿಸಲಾಗಿ ಕಾರಿನ ಹಿಂಭಾಗದಲ್ಲಿ ಎರಡು ಎತ್ತುಗಳನ್ನು ತುಂಬಿಸಿದ್ದು,  ಅವುಗಳನ್ನು  ನೈಲಾನ್ ಹಗ್ಗದಿಂದ ಕಾಲುಗಳನ್ನು ಕಟ್ಟಿ ದನ ತಪ್ಪಿಸಿಕೊಳ್ಳದಂತೆ  ಹಿಂಸಾತ್ಮಕ ರೀತಿಯಲ್ಲಿ  ಕಟ್ಟಿ  ಮಲಗಿಸಿದ್ದು ಕಂಡುಬಂತು.  ವಾಹನದ  ಚಾಲಕನನ್ನು  ವಿಚಾರಿಸಲಾಗಿ ಆತನು  ತನ್ನ    ಹೆಸರು  ಮಹಮ್ಮದ್  ಹನೀಫ್ ಪ್ರಾಯ  35 ವರ್ಷ,  ತಂದೆ  ಮುನ್ನಿ  ಅಬ್ದುಲ್  ಕಾದರ್,  ವಾಸ:  5  ಸೆಂಟ್ಸ್  ಭರತ್  ನಗರ,  ಗುಜ್ಜಾಡಿ ಗ್ರಾಮ,  ಕುಂದಾಪುರ  ತಾಲೂಕು.  ಎಂದು  ತಿಳಿಸಿದ್ದು,  ಕಾರಿನ ಚಾಲಕನ ಪಕ್ಕದ   ಸೀಟಿನಲ್ಲಿ  ಕುಳಿತಿದ್ದ ವ್ಯಕ್ತಿಯನ್ನು  ವಿಚಾರಿಸಲಾಗಿ  ಆತನು  ತನ್ನ ಹೆಸರು,  ಅಬ್ದುಲ್  ರಹೀಮ್ (27 ವರ್ಷ,)  ತಂದೆ:  ಜೆ.ಎಂ. ನೂರುದ್ದೀನ್, ವಾಸ:  ವಾರ್ಡ್‌  ನಂಬ್ರ : 2.  ಮೀನು  ಮಾರ್ಕೇಟ್  ಗಂಗೊಳ್ಳಿ.  ಕುಂದಾಪುರ  ತಾಲೂಕು ಎಂದು  ತಿಳಿಸಿರುತ್ತಾನೆ.  ವಾಹನದ ಹಿಂಬದಿ ಜಾಬನುವಾರುಗಳೊಂದಿಗೆ  ಇದ್ದ   ಇಬ್ಬರು  ವ್ಯಕ್ತಿಗಳಲ್ಲಿ ವಿಚಾರಿಸಲಾಗಿ    ಹೆಸರು :  ಹುಸೈನ್, ಪ್ರಾಯ  31  ವರ್ಷ,  ತಂದೆ;  ದಿ:  ಅಬ್ದುಲ್  ಕರೀಂ,  ವಾಸ:  ಸಿದ್ದಿ ಐಸ್  ಪ್ಲಾಂಟ್, ಗಂಗೊಳ್ಳಿ,  ಕುಂದಾಪುರ  ತಾಲೂಕು.   ಎಂದು  ತಿಳಿಸಿದ್ದು,  ಇನ್ನೊಬ್ಬ ವ್ಯಕ್ತಿಯನ್ನು ವಿಚಾರಿಸಲಾಗಿ  ಆತನು  ತನ್ನ  ಹೆಸರು ಅಬು  ಮೊಹಮ್ಮದ್ ಪ್ರಾಯ  30  ವರ್ಷ,  ತಂದೆ: ಮುನ್ನಿ  ಅಬ್ದುಲ್ ಕಾದರ್, ವಾಸ:  ಹಾಲಿ  ಕ್ರಾಸ್  ಆಸ್ಪತ್ರೆಯ  ಬಳಿ,  ಗುಜ್ಜಾಡಿ  ಗ್ರಾಮ,  ಕುಂದಾಪುರ  ತಾಲೂಕು  ಎಂದು ತಿಳಿಸಿರುತ್ತಾನೆ.  ಎತ್ತುಗಳನ್ನು  ಪರಿಶೀಲಿಸಲಾಗಿ ಒಂದು ಮೃತಪಟ್ಟಿದ್ದು,  ಸದ್ರಿ  ಎತ್ತುಗಳನ್ನು ಓಮ್ನಿ ಕಾರಿನಲ್ಲಿ ಹಿಂಸಾತ್ಮಕವಾಗಿ ತುಂಬಿಸಿದ್ದರಿಂದ  ಅದರಲ್ಲಿ ಒಂದು  ಎತ್ತು ಉಸಿರು ಕಟ್ಟಿ  ಮೃತಪಟ್ಟಿರುವ  ಸಾಧ್ಯತೆ ಇರುತ್ತದೆ.  ಸದ್ರಿ  ವ್ಯಕ್ತಿಗಳು ಎತ್ತುಗಳನ್ನು  ಎಲ್ಲಿಂದಲೋ  ಕಳವು  ಮಾಡಿಕೊಂಡು     ಮಾಂಸಕ್ಕಾಗಿ ಕಡಿಯಲು ಸಾಗಾಟಮಾಡುತ್ತಿದ್ದಂತೆ  ಕಂಡುಬಂದಿರುತ್ತದೆ.  ಸದ್ರಿ ಜಾನುವಾರುಗಳ ಅಂದಾಜು ಮೌಲ್ಯ ಸುಮಾರು 20,000/- ರೂ  ಆಗಬಹುದು. ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಅಪರಾಧ ಕ್ರಮಾಂಕ: 167/2014 ಕಲಂ 379 ಐಪಿಸಿ,ಮತ್ತು  ಕಲಂ  8, 9, 11 ಗೋಹತ್ಯೆ ನಿಷೇಧ ಕಾಯ್ದೆ 1964, ಮತ್ತು  ಕಲಂ 11 (1) ಪ್ರಾಣಿ ಹಿಂಸೆ ತಡೆಕಾಯ್ದೆ 1960 ಯಂತೆ ಪ್ರಕರಣ ದಾಖಲಾಗಿರುತ್ತದೆ.
Copyright © 2012 All rights reserved.