17 December , 2017 Sunday

COASTAL NEWS

COASTAL NEWS

Archive for August, 2015

http://karavalinudi.com/wp-content/uploads/2015/08/crime-150×150.jpg

By varthabharathi On August - 28 - 2015 ADD COMMENTS

ಉಡುಪಿ, ಆ.27: ಉಡುಪಿ ಜಿಲ್ಲೆಯಲ್ಲಿ ಆಧಾರ್ ಸಂಖ್ಯೆಯನ್ನು ಒಂದಕ್ಕಿಂತ ಹೆಚ್ಚು ಪಡಿತರ ಚೀಟಿಗಳಿಗೆ ಹೊಂದಾಣಿಕೆ ಮಾಡಿರುವ ಪಡಿತರ ಚೀಟಿದಾರರ ಪಡಿತರ ಚೀಟಿಯನ್ನು ಅಮಾನತುಗೊಳಿಸಿ ಪಡಿತರವನ್ನು ಸ್ಥಗಿತಗೊಳಿಸಲಾಗುವುದು.
ಇಂತಹ ಪಡಿತರ ಚೀಟಿದಾರರು ತಾಲೂಕು ಕಚೇರಿಯ ಆಹಾರ ಇಲಾಖೆ ಯನ್ನು ಕೂಡಲೇ ಸಂಪರ್ಕಿಸಿ ಈ ಬಗ್ಗೆ ಮಾಹಿತಿ ಪಡೆಯಬೇಕೆಂದು ಪತ್ರಿಕಾ ಪ್ರಕಟನೆಯೊಂದರಲ್ಲಿ ತಿಳಿಸಲಾಗಿದೆ.

ಚುಟುಕು ಸುದ್ದಿ:ಅನೈತಿಕ ಗೂಂಡಾಗಿರಿಗೆ ಕಡಿವಾಣ ಹಾಕಿ

By varthabharathi On August - 28 - 2015 ADD COMMENTS

ಮಂಗಳೂರು, ಆ.27: ಅತ್ತಾವರದಲ್ಲಿ ಹಿಂದೂ ಸಂಘಟನೆಗೆ ಸೇರಿದ ಕಾರ್ಯ ಕರ್ತರು ಮುಹಮ್ಮದ್ ಶಾಕೀರ್‌ರನ್ನು ಅರೆನಗ್ನಗೊಳಿಸಿ ತಂತಿ ಕಂಬಕ್ಕೆ ಕಟ್ಟಿ ಮಾರಣಾಂತಿಕ ಹಲ್ಲೆ ನಡೆಸಿರುವುದು ಖಂಡನೀಯ. ಇಂತಹ ಕೃತ್ಯಗ ಳಿಗೆ ಕಡಿವಾಣ ಹಾಕುವ ಮೂಲಕ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಜಿಲ್ಲೆಯಲ್ಲಿ ಶಾಂತಿಯುತ ವಾತಾವರಣ ಕಲ್ಪಿಸಬೇಕು ಎಂದು ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಮ್ ಸೆಂಟ್ರಲ್ ಕಮಿಟಿ ಒತ್ತಾಯಿಸಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಮಿಟಿಯ ಉಪಾಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಈ ಪ್ರಕರಣ ದೇಶದ ಸಂವಿಧಾನ, ಹಿಂದೂ ಹಾಗೂ ಇಸ್ಲಾಮ್ ಸಂಸ್ಕೃತಿಗೆ ನೀಡಿದ ದೊಡ್ಡ ಪೆಟ್ಟು ಎಂದು ಅಭಿಪ್ರಾಯಪಟ್ಟರು. ತಪ್ಪು ಮಾಡಿದ್ದಲ್ಲಿ ಶಿಕ್ಷೆ ನೀಡಲು ಪೊಲೀಸ್ ಇಲಾಖೆ ಇದೆ. ಈ ರೀತಿ ಕಾನೂನು ಕೈಗೆತ್ತಿಕೊಳ್ಳುವುದು ಅಕ್ಷಮ್ಯ ಅಪರಾಧ. ಘಟನೆಗೆ ಸಂಬಂಧಿಸಿದಂತೆ ಮುಸ್ಲಿಮ್ ಸಮುದಾಯಕ್ಕೆ ಸಹನೆ ಕಳೆದುಕೊಳ್ಳದಂತೆ ಕರೆ ನೀಡಲಾಗಿತ್ತು. ಅದರಂತೆ ಸಮುದಾಯ ಸಮಾಧಾನ ಹಾಗೂ ಶಾಂತ ಚಿತ್ತದಿಂದ ವರ್ತಿಸಿದೆ. ಎಲ್ಲ ಧರ್ಮಗಳು ಶಾಂತಿ, ಸೌಹಾರ್ದತ, ಸಮಾನತೆಯನ್ನು ಪ್ರತಿಪಾದಿಸುತ್ತದೆ. ಇದನ್ನು ಬಜರಂಗದಳ, ವಿಶ್ವ ಹಿಂದೂ ಪರಿಷತ್‌ನ ಯುವಕರು ಮನಗಾಣಬೇಕು. ಅಪರಾಧಗಳಲ್ಲಿ ಭಾಗಿಯಾಗುವವರು 18ರಿಂದ 25 ವರ್ಷದ ಯುವಕ ರಾಗಿದ್ದು, ಇವರು ಯಾಕೆ ದಾರಿ ತಪ್ಪುತ್ತಿದ್ದಾರೆ ಎಂಬುದನ್ನು ಧಾರ್ಮಿಕ, ರಾಜಕೀಯ ಹಾಗೂ ಸಂಘಟನೆಗಳ ನಾಯಕರು ಅರ್ಥ ಮಾಡಿಕೊಂಡು ತಿಳಿಹೇಳುವ ಕೆಲಸ ಮಾಡಬೇಕು ಎಂದು ಇಬ್ರಾಹೀಂ ಕೋಡಿಜಾಲ್ ಹೇಳಿದರು. ಘಟನೆಗೆ ಸಂಬಂಧಿಸಿ ಜಿಲ್ಲಾ ಉಸ್ತುವಾರಿ ಸಚಿವರು, ಗೃಹ ಸಚಿವರು ಹಾಗೂ ಪೊಲೀಸ್ ಆಯುಕ್ತರ ಜೊತೆ ಮಾತುಕತೆ ನಡೆಸಲಾಗಿದೆ. ಎಲ್ಲರೂ ಪೂರಕವಾಗಿ ಸ್ಪಂದಿಸಿದ್ದಾರೆ. ಘಟನಾ ಸಂದರ್ಭ ಯುವಕನ ಜೊತೆ ಸುಮಾರು ಅರ್ಧತಾಸು ಅಮಾನವೀಯವಾಗಿ ವರ್ತಿಸಲಾಗಿದ್ದು, ತಕ್ಷಣ ಘಟನಾ ಸ್ಥಳಕ್ಕೆ ಹೋಗುವಲ್ಲಿ ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ.ಆದರೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸುವ ಮೂಲಕ ಪೊಲೀಸರು ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಇಬ್ರಾಹೀಂ ಕೋಡಿಜಾಲ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ, ಉಪಾಧ್ಯಕ್ಷರಾದ ಹಮೀದ್ ಕಂದಕ್, ಅಶ್ರಫ್, ಪತ್ರಿಕಾ ಕಾರ್ಯದರ್ಶಿ ಬಿ. ಅಬೂಬಕರ್,ಕಾರ್ಯ ದರ್ಶಿಗಳಾದ ಹಮೀದ್ ಕುದ್ರೋಳಿ, ಸಿ.ಎಂ. ಮುಸ್ತಫಾ, ಅಹ್ಮದ್ ಬಾವಾ ಬಜಾಲ್, ರಿಯಾಝುದ್ದೀನ್, ಜತೆ ಕಾರ್ಯದರ್ಶಿ ಡಿ.ಎಂ.ಅಸ್ಲಂ ಉಪಸ್ಥಿತರಿದ್ದರು.

ವೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಲು ಜಿಲ್ಲಾಧಿಕಾರಿ ಕರೆ
ಪ್ರತಿಜ್ಞಾ ವಿಧಿ ಬೋಧನೆ
ಕಾರ್ಯಕ್ರಮದಲ್ಲಿ ಅತ್ತಾವರದ ಘಟನೆಯನ್ನು ನೆನಪಿಸಿದ ಜಿಲ್ಲಾಧಿಕಾರಿ, ಮಕ್ಕಳಿಗೆ ವೌಲ್ಯಯುತ ಶಿಕ್ಷಣ ನೀಡಬೇಕು ಎಂದರಲ್ಲದೆ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅತಿಥಿಗಳು, ಶಿಕ್ಷಕರು, ವಿದ್ಯಾರ್ಥಿಗಳಿಗೆ ‘ಇಂತಹ ಕುಕೃತ್ಯದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಭಾಗವಹಿಸುವುದಿಲ್ಲ, ಅಂತಹ ಕೃತ್ಯವನ್ನು ಬೆಂಬಲಿಸುವುದೂ ಇಲ್ಲ’ ಎಂದು ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

 

ಬೋಸ್ ಕಡತ ಬಹಿರಂಗಕ್ಕೆ ಪಿಎಂಒ ನಕಾರ

By varthabharathi On August - 28 - 2015 ADD COMMENTS

ಹೊಸದಿಲ್ಲಿ, ಆ.27: ಹಿರಿಯ ಸ್ವಾತಂತ್ರಹೋರಾಟಗಾರ ಸುಭಾಶ್ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ ಕಡತಗಳನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದು ಕೇಂದ್ರೀಯ ಮಾಹಿತಿ ಆಯೋಗಕ್ಕೆ (ಸಿಐಸಿ) ಪ್ರಧಾನಿಯವರ ಕಾರ್ಯಾಲಯ (ಪಿಎಂಒ) ತಿಳಿಸಿದೆ.
ಬೋಸ್ ಅವರಿಗೆ ಸಂಬಂಧಿಸಿದ ಕಡತಗಳು ಸರಕಾರದ ಬಳಿ ಇವೆ. ಆದರೆ, ಕೆಲವು ದೇಶಗಳೊಂದಿಗಿನ ಭಾರತದ ಸಂಬಂಧವನ್ನು ಗಮನದಲ್ಲಿಟ್ಟುಕೊಂಡು ಅವುಗಳನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದು ಬುಧವಾರ ನಡೆದ ಸಿಐಸಿಯ ವಿಚಾರಣೆಯ ಸಂದರ್ಭದಲ್ಲಿ ಪಿಎಂಒ ಹೇಳಿದೆ.
ಆರ್‌ಟಿಐ ಕಾರ್ಯಕರ್ತ ಸುಭಾಶ್ ಅಗರವಾಲ್ ಎಂಬವರು ಈ ಸಂಬಂಧವಾಗಿ ಅರ್ಜಿ ಸಲ್ಲಿಸಿದ್ದರು.
ಬೋಸ್ ಅವರು 70 ವರ್ಷಗಳ ಹಿಂದೆ ನಾಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಹಿತಿ ಬಹಿರಂಗದಿಂದ ಭಾರತದ ವಿದೇಶಿ ಸಂಬಂಧಗಳಿಗೆ ಧಕ್ಕೆಯಾಗದು ಎಂದು ಅಗರವಾಲ್ ವಾದಿಸಿದರು

ತುಮಕೂರು, ಮಂಗಳೂರು ಸ್ಮಾರ್ಟ್ ಸಿಟಿ ಶಿವಮೊಗ್ಗ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ದಾವಣಗೆರೆ ರಾಜ್ಯದ ಉಳಿದ ಸ್ಮಾರ್ಟ್ ನಗರಗಳು

By varthabharathi On August - 28 - 2015 ADD COMMENTS

ಉತ್ತರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರಕ್ಕೆ ಗರಿಷ್ಠ ಸಂಖ್ಯೆಯ ಸ್ಮಾರ್ಟ್ ಸಿಟಿಗಳು ಬೆಂಗಳೂರು, ಕೋಲ್ಕತಾ, ಪಾಟ್ನಾ, ತಿರುವನಂತಪುರ ಸ್ಮಾರ್ಟ್ ಸಿಟಿ ಯೋಜನೆಗೆ ಸೇರ್ಪಡೆಯಾಗದ ಪ್ರಮುಖ ನಗರಗಳು
ಹೊಸದಿಲ್ಲಿ, ಆ.27: ರಾಜ್ಯದ ಮಂಗಳೂರು, ಶಿವಮೊಗ್ಗ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ತುಮಕೂರು, ದಾವಣಗೆರೆ ನಗರಗಳು ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಸ್ಮಾರ್ಟ್ ಸಿಟಿ ಯೋಜನೆಗೆ ಸೇರ್ಪಡೆಗೊಂಡಿವೆ.
ದೇಶದ 24 ರಾಜ್ಯಗಳ ರಾಜಧಾನಿಗಳು ಸೇರಿ ದಂತೆ ಒಟ್ಟು 98 ಸ್ಮಾರ್ಟ್ ಸಿಟಿಗಳ ಪಟ್ಟಿ ಯನ್ನು ಗುರುವಾರ ಕೇಂದ್ರ ನಗರಾಭಿವೃದ್ಧಿ ಖಾತೆ ಸಚಿವ ಎಂ.ವೆಂಕಯ್ಯ ನಾಯ್ಡು ಬಿಡುಗಡೆ ಮಾಡಿದರು.
ಕರ್ನಾಟಕದ ಬೆಂಗಳೂರು, ಕೇರಳದ ತಿರುವನಂತಪುರ, ಪಶ್ಚಿಮ ಬಂಗಾಳದ ಕೋಲ್ಕತಾ ಮತ್ತು ಬಿಹಾರದ ಪಾಟ್ನಾ ನಗರಗಳು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸ್ಥಾನವನ್ನು ಪಡೆದುಕೊಂಡಿಲ್ಲ. ಈ ನಗರಗಳನ್ನು ಸಂಬಂಧಿಸಿದ ರಾಜ್ಯಗಳು ನಾಮಕರಣ ಮಾಡಿಲ್ಲ ಎನ್ನಲಾಗಿದೆ.
ಉತ್ತರ ಪ್ರದೇಶಕ್ಕೆ ಗರಿಷ್ಠ ಸಂಖ್ಯೆಯಲ್ಲಿ ಸ್ಮಾರ್ಟ್ ಸಿಟಿಗಳು ಲಭಿಸಿವೆ. ನಂತರದ ಸ್ಥಾನಗಳಲ್ಲಿ ತಮಿಳುನಾಡು ಮತ್ತು ಮಹಾರಾಷ್ಟ್ರಗಳಿವೆ. ಉತ್ತರ ಪ್ರದೇಶದ 13, ತಮಿಳುನಾಡಿನ 12 ಹಾಗೂ ಮಹಾರಾಷ್ಟ್ರದ 10 ನಗರಗಳು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಅಭಿವೃದ್ಧಿ ಹೊಂದಲಿವೆ. ಜೊತೆಗೆ ಮಧ್ಯಪ್ರದೇಶ (7), ಕರ್ನಾಟಕ (6), ಗುಜರಾತ್ (6), ಪಶ್ಚಿಮ ಬಂಗಾಳ (4), ರಾಜಸ್ಥಾನ (4), ಪಂಜಾಬ್ (3), ಬಿಹಾರ (3), ಆಂಧ್ರಪ್ರದೇಶ (3)ದ ಗರಿಷ್ಠ ಸಂಖ್ಯೆಯ ನಗರಗಳು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಗೊಂಡಿವೆ. ಮೊದಲನೆ ವರ್ಷದಲ್ಲಿ, 24 ನಗರಗಳನ್ನು ಆಯ್ಕೆ ಮಾಡಿಕೊಂಡು ಸ್ಮಾರ್ಟ್ ಸಿಟಿಗಳಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಸ್ಮಾರ್ಟ್ ಸಿಟಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತ ಸಚಿವ ನಾಯ್ಡುತಿಳಿಸಿದರು.
ನಗರ ಜೀವನವನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯುವುದು ಸ್ಮಾರ್ಟ್ ಸಿಟಿ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಸ್ಮಾರ್ಟ್ ಸಿಟಿ ಅಭಿಯಾನ ಬಹಳ ಪ್ರಾಯೋಗಿಕ ಮತ್ತು ನೈಜ ಯೋಜನೆಯಾಗಿದೆ. ಇದರಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ಸ್ಮಾರ್ಟ್ ಸಿಟಿಗಳಿಗೆ ಸ್ಮಾರ್ಟ್ ಜನರು ಬೇಕು. ನಮ್ಮ ಅಭಿಯಾನ ಮುಂದುವರಿಯಲು ದೇಶದ ಜನತೆಯ ಸಹಕಾರ ಬೇಕು ಎಂದು ಅವರು ನುಡಿದರು. ಸ್ಮಾರ್ಟ್ ಸಿಟಿ ಯೋಜನೆಯ ಸಿದ್ಧತೆಗಾಗಿ ಎಲ್ಲ 98 ನಗರಗಳಿಗೆ ಮುಂದಿನ ಕೆಲವು ದಿನಗಳಲ್ಲಿ ಎರಡು ಕೋಟಿ ರೂಪಾಯಿ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.

ಬಣ್ಣ ಕಳೆದುಕೊಂಡ ಮೋದಿ ಭಾಷಣ

By varthabharathi On August - 17 - 2015 ADD COMMENTS

ಪ್ರಧಾನಿ ನರೇಂದ್ರ ಮೋದಿಯವರು 2ನೆ ಬಾರಿ ಕೆಂಪುಕೋಟೆಯಿಂದ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಕಳೆದ ಸ್ವಾತಂತ್ರೋತ್ಸವ ಆಚರಣೆ ಸಂದರ್ಭದಲ್ಲಿ ಅವರದು ಮೊದಲ ಭಾಷಣ. ಅಂದಿನ ಭಾಷಣವನ್ನು ಮೀಡಿಯಾ ವರ್ಣರಂಜಿತವಾಗಿ ದೇಶದ ಮುಂದಿಟ್ಟಿತ್ತು. ಅವರ ಮಾತುಗಳಲ್ಲಿ ಪೊಸಿಟಿವ್ ಎನರ್ಜಿಯಿತ್ತು ಎಂದು ಮಾಧ್ಯಮಗಳು ವಾಸ್ತು ಭವಿಷ್ಯಕಾರರಂತೆ ಬಣ್ಣಿಸಿದ್ದವು. ಮೋದಿ ಅಭಿಮಾನಿಗಳು ಅವರ ಮಾತಿಗೆ ರೋಮಾಂಚನಗೊಂಡಿದ್ದರು. ಆದರೆ ಅವರ ಮಾತುಗಳಲ್ಲಿ ರೋಚಕತೆಗಳಿದ್ದವೇ ಹೊರತು ತಳಮಟ್ಟದ ಯಾವ ಯೋಜನೆಗಳೂ ಇದ್ದಿರಲಿಲ್ಲ. ಮೇಕ್ ಇನ್ ಇಂಡಿಯಾದಂತಹ ಕನಸುಗಳಲ್ಲಿ ಯಾವ ಸ್ವದೇಶಿತನವೂ ಇದ್ದಿರಲಿಲ್ಲ. ಅವರ ಮಾತುಗಳಲ್ಲಿ ರೋಚಕತೆಗಳಿದ್ದವೇ ಹೊರತು, ಕ್ರಿಯೆಗಳಿರಲಿಲ್ಲ. ಒಂದು ರೀತಿಯಲ್ಲಿ ದೇಶಕ್ಕೆ ಬುದ್ಧಿವಾದವನ್ನು ಕೆಂಪುಕೋಟೆಯಲ್ಲಿ ನಿಂತು ಹೇಳಿದ್ದರು. ಆದರೂ ಆ ಭಾಷಣ ಸರ್ವರ ಮೆಚ್ಚುಗೆಗೆ ಕಾರಣವಾಗಿತ್ತು. ಮೋದಿ ಅಲೆ ದೇಶಾದ್ಯಂತ ಜೀವಂತವಿದ್ದ ಪರಿಣಾಮ ಅವರ ಪ್ರತಿ ಮಾತುಗಳಲ್ಲಿಯೂ ಜನರು ಭರವಸೆಯಿಟ್ಟರು. ಮೋದಿ ಅದೇನೋ ಬದಲಾವಣೆ ಮಾಡುತ್ತಾರೆ ಎಂದು ಜನರು ನಿರೀಕ್ಷಿಸಿದ್ದರು. ಆದರೆ ಅವರ ಎರಡನೆ ಕೆಂಪುಕೋಟೆಯ ಭಾಷಣ ಠುಸ್ಸೆಂದಿದೆ. ತನ್ನ ಅದೇ ಸವಕಲು ಅಬ್ಬರದಲ್ಲಿ ಭಾಷಣವನ್ನು ಮಾಡಿ ಮುಗಿಸಿದ್ದಾರಾದರೂ, ಸ್ವತಃ ಬಿಜೆಪಿ ಕಾರ್ಯಕರ್ತರನ್ನು ಸೆಳೆಯುವಲ್ಲೂ ಅವರು ವಿಫಲರಾದರು. ತನ್ನೆಲ್ಲ ವೈಫಲ್ಯಗಳನ್ನು, ತನ್ನೆಲ್ಲ ಜನವಿರೋಧಿ ಕಾನೂನುಗಳನ್ನು ಧನಾತ್ಮಕವಾಗಿ ಮಂಡಿಸಲು ಹೊರಟು ವಿಫಲರಾಗಿದ್ದಾರೆ. ಒಂದು ವರ್ಷದಲ್ಲಿ ತಾನೇನು ಮಾಡಿದ್ದೇನೆ ಎನ್ನುವುದನ್ನು ಅವರು ಗಂಟಲು ಹರಿದು ಹೇಳಿದರಾದರೂ, ಅದು ದೇಶದ ಜನಮನವನ್ನು ಮುಟ್ಟುವಲ್ಲಿ ಮಾತ್ರ ಯಶಸ್ವಿಯಾಗಲಿಲ್ಲ. ಈ ಬಾರಿ ಮೋದಿಯ ಭಾಷಣ ಚರ್ಚೆಯಾಗಲಿಲ್ಲ ಎನ್ನುವುದೇ ಚರ್ಚೆಗೆ ವಸ್ತುವಾದುದು ವಿಶೇಷ.ಈ ಬಾರಿಯ ಸ್ವಾತಂತ್ರೋತ್ಸವಕ್ಕೆ ಒಂದು ರೀತಿಯ ವಿಷಾದ ಆವರಿಸಿತ್ತು. ಕಳೆದ ಕೆಲವು ದಿನಗಳಿಂದ ಸಂಸತ್ತಿನಲ್ಲಿ ನಡೆಯುತ್ತಿರುವ ಗದ್ದಲಗಳು, ಪೋಲಾದ ಕಲಾಪಗಳೇ ಆ ವಿಷಾದಕ್ಕೆ ಕಾರಣ. ಇಡೀ ದೇಶ ಸಂಸತ್ತನ್ನು ಬೆಕ್ಕಸಬೆರಗಾಗಿ ನೋಡುತ್ತಿತ್ತು. ಒಂದೆಡೆ ವಿರೋಧ ಪಕ್ಷಗಳು ಭ್ರಷ್ಟಾಚಾರ ಆರೋಪಕ್ಕಾಗಿ ಸುಷ್ಮಾ ಸ್ವರಾಜ್ ಮತ್ತು ಅವರ ಸಂಗಡಿಗರ ರಾಜೀನಾಮೆಯನ್ನು ಕೇಳುತ್ತಿದ್ದರೆ, ಸರಕಾರ ಜಪ್ಪಯ್ಯ ಎಂದರೂ ಅದಕ್ಕೆ ಒಪ್ಪಿರಲಿಲ್ಲ. ಜೊತೆಗೆ ಸುಷ್ಮಾ ಸ್ವರಾಜ್ ಯಾವ ಮುಜುಗರವೂ ಇಲ್ಲದೆ ಸಂಸತ್ತಿನಲ್ಲಿ ತನ್ನ ಕೃತ್ಯವನ್ನು ಸಮರ್ಥಿಸಿಕೊಂಡರು. ಕೆಂಪುಕೋಟೆಯಲ್ಲಿ ಆ ಕುರಿತಂತೆ ಏನಾದರೂ ವಿವರಗಳು ಹೊರಬೀಳಬಹುದೋ ಎಂಬ ಆಸೆ ಜನರದಾಗಿತ್ತು. ಆದರೆ ಅವರು ತನ್ನ ಭಾಷಣದಲ್ಲಿ, ತಾನು ಭ್ರಷ್ಟಾಚಾರ ರಹಿತ ಆಡಳಿತ ನಡೆಸುತ್ತಿದ್ದೇನೆ ಎಂದು ದೇಶದ ಜನರನ್ನು ನಂಬಿಸಲು ಯತ್ನಿಸಿದರು. ಅವರ ಭಾಷಣವೇ ಒಂದು ವಿಡಂಬನಾ ರೀತಿಯಲ್ಲಿತ್ತು. ಸುಷ್ಮಾ ಸ್ವರಾಜ್, ವಸುಂಧರಾ ರಾಜೇ ಅವರ ಲಲಿತ್ ಗೇಟ್ ಹಗರಣ ಮತ್ತು ಚೌಹಾಣ್ ಅವರ ವ್ಯಾಪಂ ಹಗರಣ ದೇಶದ ಮುಖಕ್ಕೆ ರಾಚುತ್ತಿರುವ ಸಂದರ್ಭದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿದ್ದೇನೆ ಎಂಬ ಮೋದಿಯ ಮಾತು ಒಂದು ಅಣಕವೇ ಆಗಿತ್ತು. ದೇಶದ ಜನರು ತಲೆತಗ್ಗಿಸಿಕೊಂಡು ಅದನ್ನು ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಈ ಇಬ್ಬಗೆಯ ಗೊಂದಲ ಕೇವಲ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಮಾತ್ರ ಆಗಿರಲಿಲ್ಲ. ಕೋಮುವಾದದ ವಿರುದ್ಧವೂ ಅವರು ಮಾತನಾಡಿದರು. ‘ಜಾತಿವಾದ ಮತ್ತು ಕೋಮುವಾದಗಳಿಗೆ ಈ ದೇಶದಲ್ಲಿ ಸ್ಥಾನವಿಲ್ಲ. ಈ ಸಾಮಾಜಿಕ ಪಿಡುಗುಗಳನ್ನು ಅಭಿವೃದ್ಧಿಯ ಮೂಲಕ ತೊಡೆದು ಹಾಕಬೇಕು’ ಎನ್ನುವ ಗೊಂದಲಗಳ ಹೇಳಿಕೆಯನ್ನು ನೀಡಿದರು. ಕೋಮುವಾದ, ಜಾತಿವಾದ ನಿವಾರಣೆಯಾದರೆ ಅಭಿವೃದ್ಧಿಯಾಗುತ್ತದೆಯೋ ಅಥವಾ ಅಭಿವೃದ್ಧಿಯಾಗುವ ಮೂಲಕ ಕೋಮುವಾದ ನಿವಾರಣೆಯಾಗುತ್ತದೆಯೋ ಎನ್ನುವುದರ ಬಗ್ಗೆ ಅವರಿಗೆ ಸ್ಪಷ್ಟತೆಯಿರಲಿಲ್ಲ. ಕಳೆದ ವರ್ಷದ ಭಾಷಣದಲ್ಲಿ ‘‘ಕೋಮುಹಿಂಸೆ ದೇಶದಲ್ಲಿ ತಾಂಡವವಾಡುತ್ತಿದ್ದರೆ ಅಭಿವೃದ್ಧಿ ಸಾಧ್ಯವಿಲ್ಲ’’ ಎಂಬ ಹೇಳಿಕೆಯನ್ನು ಇದೇ ಮೋದಿಯವರು ನೀಡಿದ್ದರು. ಹೀಗೆ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ಮೀರತ್, ದಿಲ್ಲಿ, ಅಸ್ಸಾಂ ಸೇರಿದಂತೆ ಹಲವೆಡೆ ಕೋಮುಗಲಭೆ ಭುಗಿಲೆದ್ದಿತು. ‘ಮರಳಿ ಮಾತೃಧರ್ಮಕ್ಕೆ’ ಎಂಬ ಹೆಸರಿನಲ್ಲಿ ಸಂಘಪರಿವಾರ ನಡೆಸುತ್ತಿರುವ ದಾಂಧಲೆಗಳನ್ನು ಮೋದಿ ವೌನವಾಗಿ ವೀಕ್ಷಿಸತೊಡಗಿದರು. ಇದೀಗ ಮತ್ತೆ ಅದೇ ಕೆಂಪುಕೋಟೆಯಲ್ಲಿ, ಅದೇ ಸವಕಲು ಮಾತುಗಳನ್ನು ಆಡಿದರೆ ಅದು ಕೇಳುವವರ ಎದೆಯೊಳಗೆ ಹೊಸತನ್ನು ಸೃಷ್ಟಿಸುವುದಾದರೂ ಹೇಗೆ?

ಕನಿಷ್ಠ ಸೈನಿಕರ ಸಮಾನ ಶ್ರೇಣಿ, ಸಮಾನ ಪಿಂಚಣಿಯ ಬೇಡಿಕೆಯ ಬಗ್ಗೆಯಾದರೂ ಒಂದು ಸ್ಪಷ್ಟ ನಿರ್ಧಾರವನ್ನು ತಳೆದು ಅವರು ಕೆಂಪುಕೋಟೆಯ ಮೆಟ್ಟಿಲನ್ನು ತುಳಿಯುತ್ತಾರೆ ಎಂದು ಜನರು ಭಾವಿಸಿದ್ದರು. ಆದರೆ ಆ ಕುರಿತಂತೆಯೂ ಒಂದು ಸ್ಪಷ್ಟ ಭರವಸೆಯನ್ನು ಅವರಿಗೆ ನೀಡಲಾಗಲಿಲ್ಲ ‘‘ಕೆಂಪು ಕೋಟೆಯಿಂದ ತ್ರಿವರ್ಣ ಧ್ವಜದ ಅಡಿಯಲ್ಲಿ ನಾನು ಮಾಜಿ ಸೈನಿಕರಿಗೆ ಆಶ್ವಾಸನೆಯೊಂದನ್ನು ನೀಡಬಯಸುತ್ತೇನೆ. ಅವರ ಬೇಡಿಕೆಯನ್ನು ನಾವು ತಾತ್ವಿಕವಾಗಿ ಒಪ್ಪಿಕೊಂಡಿದ್ದೇವೆ. ಈ ಕುರಿತು ಕೆಲವು ಮಾತುಕತೆಗಳು ನಡೆದಿವೆ. ಈ ಮಾತುಕತೆಯ ನಡುವೆ ನಾನು ಒಳಿತನ್ನು ನಿರೀಕ್ಷಿಸುತ್ತಿದ್ದೇನೆ’’ ಒಬ್ಬ ಪ್ರಧಾನಿಯಾದವರು ಹೀಗೆ ಅಡ್ಡಗೋಡೆಯ ಮೇಲೆ ದೀಪ ಇಟ್ಟು ಮಾತನಾಡುತ್ತಿದ್ದರೆ ಅದನ್ನು ನಿವೃತ್ತ ಸೈನಿಕರು ಏನೆಂದು ಅರ್ಥೈಸಿಕೊಳ್ಳಬೇಕು? ‘ಸ್ಟಾರ್ಟ್ ಅಪ್; ಸ್ಟಾಂಡ್ ಅಪ್ ಇಂಡಿಯಾ’ ಎಂಬ ಅಭಿಯಾನಕ್ಕೆ ಅವರು ಚಾಲನೆ ನೀಡಿದ್ದಾರೆ. ಅದರೆ ಆ ಅಭಿಯಾನದ ಸ್ಪಷ್ಟ ಗುರಿ ಸ್ವತಃ ಮೋದಿಗೂ ಗೊತ್ತಿಲ್ಲ. ಪ್ರತಿಯೊಂದು ಬ್ಯಾಂಕ್ ಶಾಖೆ ಕಡೇ ಪಕ್ಷ ಒಬ್ಬ ದಲಿತ ಇಲ್ಲವೇ ಒಬ್ಬ ಆದಿವಾಸಿ ಸ್ಟಾರ್ಟ್ ಅಪ್‌ಗೆ ಸಾಲ ಒದಗಿಸಬೇಕು’ ಎಂದು ಕರೆ ನೀಡುತ್ತಿದ್ದಾರೆ. ಆದರೆ ದೇಶದ ಆರ್ಥಿಕ ನೀತಿಯಿಂದ ರೈತರು ಮತ್ತು ಆದಿವಾಸಿಗಳು ಸಂಪೂರ್ಣ ಬೀದಿಪಾಲಾಗಿರುವಾಗ, ಬ್ಯಾಂಕುಗಳು ಯಾವ ಆಧಾರದ ಮೇಲೆ ರೈತರಿಗೆ ಸಾಲ ನೀಡುತ್ತಿವೆ. ಮೋದಿ ಕೆಂಪುಕೋಟೆಯಲ್ಲಿ ನಿಂತು ಕರೆ ನೀಡಿದರು ಎಂಬ ಒಂದೇ ಕಾರಣಕ್ಕಾಗಿ ಬ್ಯಾಂಕುಗಳು ರೈತರಿಗೆ ಸಾಲಕೊಡುತ್ತವೆಯೇ? ಬಡವರನ್ನು ಮೇಲೆತ್ತಲು ಯಾವ ಕಾರ್ಯಕ್ರಮಗಳನ್ನೂ ಘೋಷಿಸದೆ ‘ಯಾರೂ ಬಡವರಾಗಿಯೇ ಉಳಿಯಲು ಬಯಸುವುದಿಲ್ಲ. ಅದರಿಂದ ಹೊರಬರಲು ಪ್ರಯತ್ನಿಸುತ್ತಾರೆ’ ಎಂಬ ಹೇಳಿಕೆಯಲ್ಲಿ ಬಡವರ ಪರವಾಗಿ ಏನಿದೆ? ಬರೇ ಮಾತುಗಳಲ್ಲೇ ಜನರನ್ನು ಗೊಂದಲಕ್ಕೆ ತಳ್ಳಿ ತಮ್ಮ ಭಾಷಣವನ್ನು ಮುಗಿಸಿ, ದುಬೈಗೆ ಹಾರಿದ್ದಾರೆ.ಒಂದಂತೂ ಸ್ಪಷ್ಟ. ಮೋದಿಯ ಒಂದು ವರ್ಷದ ಆಡಳಿತದಲ್ಲಿ ದೇಶ ಸಂಪೂರ್ಣ ಉದ್ಯಮಿಗಳ, ಹಣವುಳ್ಳವರ ಕೈವಶವಾಗಿವೆ. ಅಮೆರಿಕವೂ ಸೇರಿದಂತೆ ಶ್ರೀಮಂತ ರಾಷ್ಟ್ರಗಳು ಭಾರತದ ಮೇಲೆ ಇನ್ನಷ್ಟು ಹೆಚ್ಚು ಹಿಡಿತ ಸಾಧಿಸಿವೆ. ಬಡವರ, ರೈತರ ಹಿತಾಸಕ್ತಿಗಳು ಸಂಪೂರ್ಣ ಬದಿಗೆ ತಳ್ಳಲ್ಪಟ್ಟಿದ್ದು, ಬೃಹತ್ ವಿದೇಶಿ ಕಂಪೆನಿಗಳಿಗಾಗಿ ರೈತರ ಜಮೀನುಗಳನ್ನು ಕಿತ್ತುಕೊಳ್ಳಲು ಸರಕಾರವೇ ಮುಂದೆ ನಿಂತು ಕಾನೂನು ರೂಪಿಸುತ್ತಿದೆ. ದೇಶದ ಜನರಿಗೆ ಇದು ದಿನೇ ದಿನೇ ಹೆಚ್ಚು ಹೆಚ್ಚು ಸ್ಪಷ್ಟವಾಗುತ್ತಿದೆ. ಕೆಂಪು ಕೋಟೆಯಲ್ಲಿ ನಿಂತು ಮೋದಿ ಆಡಿದ ಮಾತುಗಳು ಇದಕ್ಕೆ ಪುಷ್ಟಿ ನೀಡಿವೆ.

ಉಡುಪಿ: ಧರ್ಮಾಧ್ಯಕ್ಷ ಜೆರಾಲ್ಡ್‌ ಐಸಾಕ್‌ ಲೋಬೊ ಹೇಳಿಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿಲ್ಲ

By prajavani On August - 17 - 2015 ADD COMMENTS

ಉಡುಪಿ: ಭಾರತಕ್ಕೆ ಸ್ವಾತಂತ್ರ್ಯ ಪಡೆ ದರೂ, ಭ್ರಷ್ಟಾಚಾರ, ಹಿಂಸೆ, ಕೋಮುಗಲಭೆಗಳಿಂದಾಗಿ ನಿಜವಾದ ಸ್ವಾತಂತ್ರ್ಯ ಇನ್ನೂ ಲಭಿಸಿಲ್ಲ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್‌ ಐಸಾಕ್‌ ಲೋಬೊ ಹೇಳಿದರು.

ಉಡುಪಿ ಕಲ್ಮಾಡಿಯ ವೆಲಂಕಣಿ ಆರೋಗ್ಯ ಮಾತಾ ಚರ್ಚ್‌ನ ವಾರ್ಷಿಕ ಹಬ್ಬದ ಅಂಗವಾಗಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಧರ್ಮಗುರು ವಲೇರಿಯನ್‌ ಮೆಂಡೋನ್ಸಾ ಮತ್ತು ಕ್ಲೆಮೆಂಟ್‌ ಮಸ್ಕರೇನಸ್‌ ರಚಿಸಿದ ‘ವೆಲಂಕಣಿ ಮಾಯೆ’ ಎಂಬ ಧ್ವನಿಸುರುಳಿಯನ್ನು ಧರ್ಮಾಧ್ಯಕ್ಷರು ಬಿಡುಗಡೆ ಮಾಡಿದರು. ಸಚಿವ ವಿನಯಕುಮಾರ್‌ ಸೊರಕೆ ‘ಧರಿಯ ಸುಕುರ್‌’ ವಾರ್ಷಿಕ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.

ಧರ್ಮಾಧ್ಯಕ್ಷರ ನೇತೃತ್ವದಲ್ಲಿ ನಡೆದ ಬಲಿಪೂಜೆಯಲ್ಲಿ ಧರ್ಮಗುರುಗಳಾದ ವಲೇರಿಯನ್ ಮೆಂಡೋನ್ಸಾ, ರೋಶನ್ ಮಿನೇಜಸ್, ಫೆಡ್ರಿಕ್ ಮಸ್ಕರೇನಸ್, ಆಲ್ಬನ್ ಡಿಸೋಜ ಪಾಲ್ಗೊಂಡಿದ್ದರು. ಶಾಸಕ ಪ್ರಮೋದ್ ಮಧ್ವರಾಜ್ ಉಪಸ್ಥಿತರಿದ್ದರು.
*
ಮನುಷ್ಯರು ಸತ್ತ ಮೇಲೆ ಏನಾಗುತ್ತಾರೆ ಎಂಬುದು ಇನ್ನೂ ಪ್ರಶ್ನೆಯಾಗಿ ಉಳಿದಿದ್ದು, ಇದಕ್ಕೆ ಮರಿಯಾ ಮಾತೆಯ ಮರುಜನ್ಮ ಸ್ಪಷ್ಟ ನಿದರ್ಶನವಾಗಿದೆ ಎಂದರು.
–ಜೆರಾಲ್ಡ್‌ ಐಸಾಕ್‌ ಲೋಬೊ,
ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ

ದುಬೈನಲ್ಲಿ ‘ಮಿನಿ ಇಂಡಿಯಾ’ ದರ್ಶನ: ಮೋದಿ

By prajavani On August - 17 - 2015 ADD COMMENTS

 

ಅಬುಧಾಬಿ: ಪ್ರಧಾನಿ ನರೇಂದ್ರ ಮೋದಿ ಅವರ ದೊಡ್ಡ ಶಕ್ತಿ ‘ಮಾತು’ ಎಂಬುದು ಈಗಾಗಲೇ ಸಾಬೀತಾಗಿರುವ ಸಂಗತಿ.  ವರ್ಷದ ಹಿಂದೆ ಅವರು ಅಮೆರಿಕದ  ‘ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್’ನಲ್ಲಿ ಮಾತಿನ ಸಂಚಲನ ಸೃಷ್ಟಿಸಿದ್ದರು. ಇದೀಗ ದುಬೈ ಸರದಿ.

ಸೋಮವಾರ ದುಬೈನ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನೆರದಿದ್ದ ಸಾವಿರಾರು ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ಮ್ಯಾಡಿಸನ್ ಸ್ಕ್ವೇರ್’ನಲ್ಲಿ ಸೃಷ್ಟಿಸಿದ್ದ  ‘ಅಲೆ’ಯನ್ನು ಮತ್ತೆ ಸೃಷ್ಟಿದರು. ದುಬೈ ನೋಡಿ ನನಗೆ ‘ಮಿನಿ ಇಂಡಿಯಾ’ ಕಂಡ ಹಾಗಾಯಿತು ಎಂದರು.

ಅವರ ಮಾತಿನ ಲಹರಿ
* ಈವತ್ತು ದುಬೈನಲ್ಲಿ ‘ಮಿನಿ ಭಾರತ’ವನ್ನೇ ನೋಡುತ್ತಿದ್ದೇನೆ.

* ಇಡೀ ವಿಶ್ವವೇ ಭಾರತವನ್ನು ನೋಡುವ ದೃಷ್ಟಿಕೋನ ಬದಲಾಗಿದೆ. 125 ಕೋಟಿ ಭಾರತೀಯರ ಮನೋಬಲ ಇದಕ್ಕೆ ಕಾರಣ.

* ಒಳ್ಳೆಯ ಭಯೋತ್ಪಾದನೆ, ಕೆಟ್ಟ ಭಯೋತ್ಪಾದನೆ, ಒಳ್ಳೆಯ ತಾಲಿಬಾನ್‌, ಕೆಟ್ಟ ತಾಲಿಬಾನ್‌ ಎನ್ನುವುದೇ ಅಪ್ರಸ್ತುತ. ಭಯೋತ್ಪಾದನೆ ಜತೆಗೆ ನಿಲ್ಲಬೇಕೇ? ಮನುಷತ್ವದ ಜತೆಗೆ ನಿಲ್ಲಬೇಕೇ? ಎನ್ನುವುದನ್ನು ಸ್ಪಷ್ಟವಾಗಿ ನಿರ್ಧರಿಸಬೇಕಾದ ಕಾಲ ಬಂದಿದೆ.

* ಭಾರತವು ಅವಕಾಶಗಳ ಹೆಬ್ಬಾಗಿಲು. ಜಾಗತಿಕ ಹೂಡಿಕೆ ತಾಣ. ಇಲ್ಲಿರುವ ಜನಸಂಖ್ಯೆಯಲ್ಲಿ ಶೇ 65ರಷ್ಟು ಮಂದಿ 35ವರ್ಷಕ್ಕಿಂತ ಕೆಳಗಿನವರು.

* ದುಬೈನಲ್ಲಿರುವ ಭಾರತೀಯರೇ, ನೀವು ಇಲ್ಲಿ ಶ್ರಮ ವಹಿಸಿ ದುಡಿಯುವ ಮೂಲಕ ಭಾರತದ ಮೌಲ್ಯವನ್ನೂ ಹೆಚ್ಚಿಸಿದ್ದೀರಿ.

* ಭಾರತ ಮತ್ತು ಅರಬ್‌ ಸಂಯುಕ್ತ ಸಂಸ್ಥಾನದ ನಡುವೆ ಪ್ರತಿ ನಿತ್ಯ ಹಲವು ವಿಮಾನಗಳು ಹಾರಾಟ ನಡೆಸುತ್ತಿವೆ. ಆದರೆ, ಭಾರತದ ಒಬ್ಬ ಪ್ರಧಾನಿ ದುಬೈಗೆ  ಬರಲು 34 ವರ್ಷ ಬೇಕಾಯಿತು.

* ಪ್ರಪಂಚದ ಎಲ್ಲ ಭಾಗದ ಜನರು ದುಬೈಗೆ ಬರಲು ಇಷ್ಟಪಡುತ್ತಾರೆ. ಈಗ ‘ಮಿನಿ ಇಂಡಿಯಾ’ಆಗಿರುವ ದುಬೈ, ಮುಂಬರುವ ದಿನಗಳಲ್ಲಿ  ‘ಮಿನಿ ವರ್ಲ್ಡ್‌’ ಆಗಲಿದೆ.

* ದುಬೈನಲ್ಲಿ ಕೇರಳಿಗರ ಸಂಖ್ಯೆ ಹೆಚ್ಚಿದೆ.  ಅವರೊಂದಿಗೆ ವಿಶೇಷವಾಗಿ ಮಾತುಕತೆ ನಡೆಸಲು ಬಯಸುತ್ತೇನೆ.

* ಮಸ್ದಾರ್‌ ನಗರ ‍ಪ್ರಪಂಚದಲ್ಲಿಯೇ ಮೊದಲ ಇಂಗಾಲ ರಹಿತ ನಗರ

ಅಬುಧಾಬಿಗೆ ಪ್ರಧಾನಿ; ಇಂದು ದುಬೈ ಭೇಟಿ

By varthabharathi On August - 17 - 2015 ADD COMMENTS

ಯುಎಇಗೆ ನಮೋ 34 ವರ್ಷಗಳ ಬಳಿಕ ಯುಎಇಗೆ ಭೇಟಿ ನೀಡಿದ ಭಾರತದ ಪ್ರಪ್ರಥಮ ಪ್ರಧಾನಿ ಅಬುಧಾಬಿಯ ಶೇಖ್ ಝಾಯಿದ್ ಮಸೀದಿಗೆ ಭೇಟಿ ಅಬುಧಾಬಿ, ಆ.16: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಗೆ ಎರಡು ದಿನಗಳ ಭೇಟಿಗಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ರವಿವಾರ ಅಬುಧಾಬಿಗೆ ವಿಶೇಷ ವಿಮಾನದಲ್ಲಿ ಬಂದಿಳಿದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿರುವಂತೆಯೇ ಮೋದಿಯವರನ್ನು ಅಬುಧಾಬಿಯ ಯುವರಾಜ ಶೇಖ್ ಮುಹಮ್ಮದ್ ಬಿನ್ ಝಾಯಿದ್ ಅಲ್ ನಹ್ಯಾನ್ ಸ್ವಾಗತಿಸಿದರು. 34 ವರ್ಷಗಳ ಬಳಿಕ ಭಾರತದ ಪ್ರಧಾನಿಯೋರ್ವರು ಇದೇ ಮೊದಲ ಬಾರಿಗೆ ಯುಎಇಗೆ ಭೇಟಿ ನೀಡುತ್ತಿರುವುದು ಹೆಚ್ಚಿನ ಮಹತ್ವ ಪಡೆದಿದೆ. ಇಂಧನ, ವ್ಯಾಪಾರ ಕ್ಷೇತ್ರದಲ್ಲಿ ಹೆಚ್ಚಿನ ಸಹಕಾರ ಹಾಗೂ ಬಂಡವಾಳ ಹೂಡಿಕೆದಾರರನ್ನು ಭಾರತದತ್ತ ಸೆಳೆಯುವುದು ಮೋದಿಯವರ ಭೇಟಿಯ ಪ್ರಮುಖ ಉದ್ದೇಶಗಳಲ್ಲಿ ಸೇರಿವೆ. ವಾಣಿಜ್ಯ ಹಾಗೂ ಭಯೋತ್ಪಾದನೆ ನಿಗ್ರಹ ವಿಚಾರಗಳಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ಭಾರತದ ಉನ್ನತ ಪಾಲುದಾರನಾಗಬೇಕೆನ್ನುವುದು ಭಾರತದ ಬಯಕೆಯಾಗಿದೆ ಎಂದು ಮೋದಿಯವರನ್ನು ಉಲ್ಲೇಖಿಸಿ ಮಾಧ್ಯಮ ವರದಿಯೊಂದು ತಿಳಿಸಿದೆ. ಭಾರತದ ಆರ್ಥಿಕ, ಇಂಧನ ಹಾಗೂ ಭದ್ರತಾ ಹಿತಾಸಕ್ತಿಗಳ ದೃಷ್ಟಿಯಿಂದ ಕೊಲ್ಲಿ ಪ್ರದೇಶವು ಅತ್ಯಂತ ಮಹತ್ವದ್ದಾಗಿದೆ ಎಂದು ಮೋದಿ ಅಭಿಪ್ರಾಯಿಸಿದ್ದಾರೆ.   ‘‘ಭಯೋತ್ಪಾದನೆ ಹಾಗೂ ಉಗ್ರವಾದ ಸೇರಿದಂತೆ ಸಾಮಾನ್ಯ ಭದ್ರತೆ ಹಾಗೂ ಇನ್ನಿತರ ವಿಷಯಗಳಿಗೆ ಸಂಬಂಧಿಸಿ ಭಾರತ ಹಾಗೂ ಯುಎಇ ನಡುವೆ ಹಲವು ಸಾಮ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಯುಎಇ ಜೊತೆಗೆ ಮಹತ್ವದ ಪಾಲುದಾರಿಕೆ ಹೊಂದಲು ನಾನು ಆಸಕ್ತನಾಗಿರುವೆ’’ ಎಂದು ಪ್ರಧಾನಿ ಮೋದಿ ರವಿವಾರ ಅಬುಧಾಬಿಗೆ ನಿರ್ಗಮಿಸುವ ಮುನ್ನ ಖಲೀಜ್ ಟೈಮ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ‘‘ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹಾಗೂ ಪ್ರಾದೇಶಿಕ ಸವಾಲುಗಳನ್ನು ಎದುರಿಸುವಲ್ಲಿ ನಾವು ಜೊತೆಗೂಡಿ ಶ್ರಮಿಸಲಿದ್ದೇವೆ. ನಮ್ಮ ಸಂಬಂಧಗಳಿಗೆ ಯಾವುದೇ ಮಿತಿಗಳಿಲ್ಲ’’ ಎಂದವರು ಹೇಳಿದ್ದಾರೆ. ‘‘ಭಯೋತ್ಪಾದನೆಯು ಮಾನವೀಯತೆಗೆ ಭಾರೀ ಅಪಾಯವನ್ನು ತಂದೊಡ್ಡಿದೆ. ಮಾನವೀಯತೆಯನ್ನು ನಂಬುವ ಎಲ್ಲ ರಾಷ್ಟ್ರಗಳೂ ಭಯೋತ್ಪಾದಕ ಶಕ್ತಿಗಳ ವಿರುದ್ಧ ಸೆಟೆದು ನಿಲ್ಲುವುದು ಅತ್ಯಗತ್ಯ’’ ಎಂದವರು ಅಭಿಪ್ರಾಯಿಸಿದರು. ಏತನ್ಮಧ್ಯೆ ಪ್ರಧಾನಿ ನರೇಂದ್ರ ಮೋದಿಯವರ ಯುಎಇ ಪ್ರವಾಸವು ಬಾಂಧವ್ಯವನ್ನು ಹೊಸ ದಿಕ್ಕಿನೆಡೆಗೆ ಕೊಂಡೊಯ್ಯಲು ಒಂದು ಸುಸಂದರ್ಭವಾಗಿದೆ ಎಂದು ಯುಎಇನ ವಿದೇಶಾಂಗ ಸಚಿವ ಶೇಖ್ ಅಬ್ದುಲ್ಲಾ ಬಿನ್ ಝಾಯಿದ್ ಅಲ್ ನಹ್ಯಾನ್ ಬಣ್ಣಿಸಿದ್ದಾರೆ. ಅಂತಾರಾಷ್ಟ್ರೀಯ ಪಾಲುದಾರಿಕೆಯಲ್ಲಿ ಯುಎಇಯು ಭಾರತವನ್ನು ಮುಂಚೂಣಿಯಲ್ಲಿರಿಸಿದೆ ಹಾಗೂ ಭಾರತದ ಜೊತೆ ಸಮಗ್ರ ಮಾತುಕತೆಯನ್ನು ನಡೆಸುವ ಮಹತ್ವವನ್ನು ಅದು ಅರಿತುಕೊಂಡಿದೆಯೆಂದು ಅವರು ಖಲೀಜ್ ಟೈಮ್ಸ್ ಪತ್ರಿಕೆಗೆ ಬರೆದ ಲೇಖನವೊಂದರಲ್ಲಿ ಹೇಳಿದ್ದಾರೆ. ಭಯೋತ್ಪಾದನೆ ವಿರುದ್ಧ ಹೋರಾಟಕ್ಕಾಗಿ ಭದ್ರತಾ ಸಹಕಾರವನ್ನು ಏರ್ಪಡಿಸಿಕೊಳ್ಳಲು ಯುಎಇ ಹಾಗೂ ಭಾರತಕ್ಕೆ ಈಗ ಬಲವಾದ ಅವಕಾಶಗಳು ಒದಗಿಬಂದಿರುವುದಾಗಿ ಅವರು ಹೇಳಿದ್ದಾರೆ. ಮೋದಿ ತನ್ನ ಯುಎಇ ಭೇಟಿ ಸಂದರ್ಭದಲ್ಲಿ ಶೇಖ್ ಅಬ್ದುಲ್ಲಾ ಬಿನ್ ಝಾಯಿದ್ ಹಾಗೂ ಯುಎಇನ ಉಪಾಧ್ಯಕ್ಷ ಹಾಗೂ ಪ್ರಧಾನಿ ಶೇಖ್ ಮುಹಮ್ಮದ್ ಬಿನ್ ರಾಶಿದ್ ಅಲ್ ಮಖ್ತೂಮ್ ಜೊತೆ ಮಾತುಕತೆ ನಡೆಸಲಿದ್ದಾರೆ.ಅಬುಧಾಬಿ ಹೂಡಿಕೆ ಪ್ರಾಧಿಕಾರದ ಆಡಳಿತ ನಿರ್ದೇಶಕ ಹಮೀದ್ ಬಿನ್ ಝಾಯಿದ್ ನಹ್ಯಾನ್ ಅವರ ಆತಿಥ್ಯದಲ್ಲಿ ಇಂದು ರಾತ್ರಿ ನಡೆದ ಔತಣಕೂಟದಲ್ಲಿ ಮೋದಿ ಪಾಲ್ಗೊಂಡರು. ಜಗತ್ತಿನ ಅತಿ ಬೃಹತ್ ಮಸೀದಿಗಳಲ್ಲೊಂದಾದ ಶೇಖ್ ಝಾಯಿದ್ ಗ್ರಾಂಡ್ ಮಸೀದಿಗೂ ಪ್ರಧಾನಿ ಭೇಟಿ ನೀಡಿದರು. ಸುಮಾರು 40 ಸಾವಿರ ಮಂದಿ ಏಕಕಾಲದಲ್ಲಿ ಪ್ರಾರ್ಥನೆ ಸಲ್ಲಿಸಲು ಸ್ಥಳಾವಕಾಶವಿರುವ ಈ ಮಸೀದಿಯು ಇಸ್ಲಾಂ ಸಂಸ್ಕೃತಿಯ ಪ್ರಮುಖ ಕೇಂದ್ರಗಳಲ್ಲೊಂದಾಗಿದೆ. ಸೋಮವಾರ ಮೋದಿ ಅಬುದಾಭಿ ಸಮೀಪದ ಹೆೆೈಟೆಕ್ ನಗರ ಸದರ್‌ಗೂ ಭೇಟಿ ನೀಡಲಿದ್ದಾರೆ.   ಆನಂತರ ಮೋದಿ ದುಬೆೈಗೆ ಪ್ರಯಾಣಿಸಲಿದ್ದು ಅಲ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಭಾರತ ತೆೈಲ ಆಮದು ಮಾಡಿಕೊಳ್ಳುವ ರಾಷ್ಟ್ರಗಳ ಪೆೈಕಿ ಯುಎಇ ಆರನೆ ಸ್ಥಾನದಲ್ಲಿದೆ. 2014-15ನೆ ಸಾಲಿನಲ್ಲಿ ಅಮೆರಿಕ ಹಾಗೂ ಚೀನದ ಆನಂತರ ಯುಎಇ ಭಾರತದ ಮೂರನೆ ಅತಿ ದೊಡ್ಡ ಉದ್ಯಮ ಪಾಲುದಾರನಾಗಿದೆ.
ಕಾರ್ಮಿಕರ ಶಿಬಿರದಲ್ಲಿ ಭಾರತೀಯರ ಭೇಟಿ ಅಬುಧಾಬಿಯಲ್ಲಿ ಪ್ರಸಿದ್ಧ ಶೇಖ್ ಝಾಯಿದ್ ಮಸೀದಿಗೆ ಭೇಟಿ ನೀಡಿದ ಬಳಿಕ ಮೋದಿಯವರು ಅಬುಧಾಬಿಯ ಹೊರವಲಯದಲ್ಲಿರುವ ಕಾರ್ಮಿಕ ಶಿಬಿರದಲ್ಲಿ ನೆಲೆಸಿರುವ ಭಾರತೀಯರನ್ನು ಭೇಟಿ ಮಾಡಿ ವಿಚಾರವಿನಿಮಯ ನಡೆಸಿದರು. ಈ ಕಾರ್ಮಿಕ ಶಿಬಿರ(ಐಸಿಎಡಿ)ದಲ್ಲಿ 90 ಸಾವಿರಕ್ಕೂ ಅಧಿಕ ಕಾರ್ಮಿಕರಿದ್ದಾರೆ.

ಯುಎಇ ;ಶಾಲಾ ಬಸ್ ಮೇಲ್ವಿಚಾರಕಿಯರಿಗೆ ಡಿಮ್ಯಾಂಡಪ್ಪೊ ಡಿಮಾಂಡ್

By varthabharathi On August - 15 - 2015 ADD COMMENTS

ಖಾಸಗಿ ಶಾಲೆಗಳು ಮೇಲ್ವಿಚಾರಕಿಯರಿಗಾಗಿ ಬೇಡಿಕೆ ಸಲ್ಲಿಸುತ್ತಿವೆ. ಈ ಬೇಡಿಕೆಯು ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ. ದುಬೈನಲ್ಲಂತೂ ಶಾಲಾ ಬಸ್‌ಗಳಲ್ಲಿ ಮೇಲ್ವಿಚಾರಕಿಯರಿರುವುದು ಕಾನೂನು ಪ್ರಕಾರ ಕಡ್ಡಾಯವಾಗಿದೆ’’ ಎಂದು ಎಮಿರೇಟ್ಸ್ ಟ್ರಾನ್ಸ್‌ಪೋರ್ಟ್ ಸಂಸ್ಥೆಯಲ್ಲಿ ನಿರ್ವಹಣಾ ಸಮನ್ವಯಕಾರರಾಗಿರುವ ಮುಹಮ್ಮದ್ ಅಲ್ ಹಮ್ಮಾದಿ ಹೇಳುತ್ತಾರೆ.

ದುಬೈ: ಯುಎಇನಲ್ಲಿ ಸೆಪ್ಟಂಬರ್‌ನಲ್ಲಿ ನೂತನ ಶೈಕ್ಷಣಿಕ ವರ್ಷ ಆರಂಭವಾಗುವುದರೊಳಗೆ, ಹಲವಾರು ಶಾಲಾ ಬಸ್‌ಗಳಲ್ಲಿ 1 ಸಾವಿರಕ್ಕೂ ಅಧಿಕ ಮಹಿಳೆಯರನ್ನು ಮೇಲ್ವಿಚಾರಕಿಯರಾಗಿ ನೇಮಿಸಲಾಗುವುದು. ಈ ಮೇಲ್ವಿಚಾರಕಿಯರು ಬಹುತೇಕ ದುಬೈ ಹಾಗೂ ಉತ್ತರ ಎಮಿರೇಟ್ ಪ್ರಾಂತಗಳಲ್ಲಿ 40ಕ್ಕೂ ಅಧಿಕ ಶಾಲೆಗಳ ಬಸ್‌ಗಳಲ್ಲಿ ಸೇವೆ ಸಲ್ಲಿಸಲಿದ್ದಾರೆ.
ಯುಎಇನಲ್ಲಿ ಬಸ್ ಮೇಲ್ವಿಚಾರಕಿಯರಿಗೆ ಭಾರೀ ಬೇಡಿಕೆಯಿದೆ. ದುಬೈನಲ್ಲಿ ಶಾಲಾಬಾಲಕಿಯರನ್ನು ಹಾಗೂ ಎಳೆಯ ವಯಸ್ಸಿನ ಮಕ್ಕಳನ್ನು ಕೊಂಡೊಯ್ಯುವ ಬಸ್‌ಗಳಲ್ಲಿ ಮೇಲ್ವಿಚಾರಕಿಯರನ್ನು ಕಡ್ಡಾಯ ಗೊಳಿಸಿರುವುದೇ ಇದಕ್ಕೆ ಭಾಗಶಃ ಕಾರಣವಾಗಿದೆ.
ಅಷ್ಟೇ ಅಲ್ಲದೆ ಮಹಿಳೆಯರು ಮಕ್ಕಳ ವಿಷಯದಲ್ಲಿ ಉತ್ತಮ ರೀತಿಯಲ್ಲಿ ಕಾಳಜಿ ವಹಿಸುತ್ತಾರೆಂದು ಎಮಿರೇಟ್ಸ್ ಟ್ರಾನ್ಸ್‌ಪೋರ್ಟ್ ಸಂಸ್ಥೆಯಲ್ಲಿ ನಿರ್ವಹಣಾ ಸಮನ್ವಯಕಾರರಾಗಿರುವ ಮುಹಮ್ಮದ್ ಅಲ್ ಹಮ್ಮಾದಿ ಹೇಳುತ್ತಾರೆ. ಎಮಿರೇಟ್ಸ್ ಟ್ರಾನ್ಸ್ ಪೋರ್ಟ್, ಯುಎಇನ ಅತಿ ದೊಡ್ಡ ಶಾಲಾ ಸಾರಿಗೆ ಸೇವೆಯನ್ನು ಒದಗಿಸುವ ಸಂಸ್ಥೆಯಾಗಿದೆ.
‘‘ಖಾಸಗಿ ಶಾಲೆಗಳು ಮೇಲ್ವಿಚಾರಕಿಯರಿಗಾಗಿ ಬೇಡಿಕೆ ಸಲ್ಲಿಸುತ್ತಿವೆ. ಈ ಬೇಡಿಕೆಯು ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ. ದುಬೈನಲ್ಲಂತೂ ಶಾಲಾ ಬಸ್‌ಗಳಲ್ಲಿ ಮೇಲ್ವಿಚಾರಕಿಯರಿರುವುದು ಕಾನೂನು ಪ್ರಕಾರ ಕಡ್ಡಾಯವಾಗಿದೆ’’ ಎಂದು ಅಲ್ ಹಮ್ಮಾದಿ ಹೇಳುತ್ತಾರೆ.
ಎಮಿರೇಟ್ಸ್ ಟ್ರಾನ್ಸ್‌ಪೋರ್ಟ್ ಈಗಾಗಲೇ 5,500 ಪುರುಷ ಹಾಗೂ ಬಸ್ ಮೇಲ್ವಿಚಾರಕರನ್ನು ಹೊಂದಿದ್ದು, ಅವರು ಯುಎಇನ ಸರಕಾರಿ ಹಾಗೂ ಖಾಸಗಿ ಶಾಲೆಗಳಿಗಾಗಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ಶೈಕ್ಷಣಿಕ ವರ್ಷದ ಸೆಮಿಸ್ಟರ್‌ನಲ್ಲಿ ಪ್ರತಿಯೊಬ್ಬ ಬಸ್ ಮೇಲ್ವಿಚಾರಕನೂ 12 ತಾಸುಗಳ ವಿಶೇಷ ತರಬೇತಿಯನ್ನು ಪಡೆಯುವುದು ಕಡ್ಡಾಯವಾಗಿದೆ.
ಬಸ್‌ಮೇಲ್ವಿಚಾರಕರಾಗಿ ನೂತನವಾಗಿ ನೇಮಕಗೊಳ್ಳುವವರು ಸಾರಿಗೆ ಹಾಗೂ ಸುರಕ್ಷತಾ ವಿಷಯಗಳ ಜೊತೆಗೆ, ಮಕ್ಕಳನ್ನು ನಿಭಾಯಿಸುವ ನೈಪುಣ್ಯತೆಯ ಬಗೆಗೂ ತರಬೇತಿ ಪಡೆಯಲಿದ್ದಾರೆ. ಪ್ರತಿಯೊಂದು ಬಸ್ ದಿನಕ್ಕೆ ಎರಡು ಸಲ ಡಜನ್‌ಗಟ್ಟಲೆ ಮಕ್ಕಳನ್ನು ಸಾಗಿಸುವುದರಿಂದ, ಮಕ್ಕಳೊಂದಿಗೆ ಹೇಗೆ ವರ್ತಿಸಬೇಕೆಂಬ ಬಗ್ಗೆ ತರಬೇತಿ ಪಡೆಯುವುದು ಇಂದಿನ ತುರ್ತು ಅಗತ್ಯವಾಗಿದೆ. ಶಾಲಾಬಸ್‌ಗಳಲ್ಲಿ ಪ್ರಯಾಣಿಸುವಾಗ ಮಕ್ಕಳು ಜಗಳವಾಡುವುದು, ಹೊಕೈ ನಡೆಸುವುದು, ಇಲ್ಲವೇ ಅಸ್ವಸ್ಥರಾಗುವುದು ಅಥವಾ ರಚ್ಚೆ ಹಿಡಿದು ಅಳುವುದು ಸಾಮಾನ್ಯವಾಗಿದೆ. ಇಂತಹ ಸನ್ನಿವೇಶಗಳಲ್ಲಿ ಮೇಲ್ವಿಚಾರಕಿಯರು ಮಕ್ಕಳನ್ನು ನಿಭಾಯಿಸುವ ಕಲೆಯನ್ನು ಕಲಿತುಕೊಳ್ಳಬೇಕೆಂದು ಹಮ್ಮಾದಿ ಹೇಳುತ್ತಾರೆ.
ಉತ್ತಮ ಬಸ್ ಮೇಲ್ವಿಚಾರಕರಾಗಲು ತಮ್ಮ ಸಂಸ್ಥೆಯು ಸಿಬ್ಬಂದಿಗೆ ನೀಡುವ ತರಬೇತಿಯ ಬಗ್ಗೆ ಅಲ್ ಹಮ್ಮಾದಿ ಹೀಗೆ ವಿವರಿಸುತ್ತಾರೆ: ನಮ್ಮ ತರಬೇತಿ ತಂಡವು, ಮಕ್ಕಳನ್ನು ನಿಭಾಯಿಸುವ ಕಲೆಗೆ ಸಂಬಂಧಿಸಿದ ಅಂಶಗಳ ಬಗ್ಗೆ ಸಿಬ್ಬಂದಿಯ ಜೊತೆ ವಿವರವಾಗಿ ಚರ್ಚಿಸುತ್ತದೆ. ಮಕ್ಕಳ ವಿಶ್ವಾಸವನ್ನು ಗಳಿಸುವುದು ಸುಲಭದ ಕೆಲಸವೇನಲ್ಲವೆಂದು ಅವರು ಹೇಳುತ್ತಾರೆ.
20ರಿಂದ 45 ವರ್ಷದೊಳಗಿನವರನ್ನೇ ಶಾಲಾಬಸ್‌ಗಳಲ್ಲಿ ಮೇಲ್ವಿಚಾರಕರನ್ನಾಗಿ ನೇಮಿಸಲಾಗುತ್ತದೆ. ಯುಎಇ ಮತ್ತಿತರ ಅರಬ್‌ದೇಶಗಳು, ಕೊಮೊರೊಸ್ ದ್ವೀಪಶ್ರೇಣಿ, ಭಾರತ, ಪಾಕಿಸ್ತಾನ ಹಾಗೂ ಫಿಲಿಪ್ಪೀನ್ಸ್ ಸೇರಿದಂತೆ ವಿವಿಧ ದೇಶಗಳ ಪ್ರಜೆಗಳು ಬಸ್ ಮೇಲ್ವಿಚಾರಕರಾಗಿ ದುಡಿಯುತ್ತಿದ್ದಾರೆ. ಅವರಲ್ಲಿ ಕೆಲವರು ಅನುಭವಿಗಳಾಗಿದ್ದರೆ, ಇನ್ನು ಕೆಲವರು ಈ ಉದ್ಯೋಗಕ್ಕೆ ಹೊಸಬರಾಗಿದ್ದಾರೆ.

1939 ಮುಸ್ಲಿಂ MARRIAGESACT ವಿಸರ್ಜನೆಗೆ

By admin On August - 15 - 2015 ADD COMMENTS
ಮದುವೆಯು ಬೇರ್ಪಡುವಿಕೆಗೆ ಫಾರ್ ತೀರ್ಪು 2. ಗ್ರೌಂಡ್ಸ್. ? ಮಹಿಳೆ ಮುಸ್ಲಿಂ ಕಾನೂನಿನ ಅಡಿಯಲ್ಲಿ ಹಾಗಿಲ್ಲ ಮದುವೆಯಾದ
ಯಾವುದೇ ಒಂದು ಅಥವಾ ಹೆಚ್ಚು ತನ್ನ ಮದುವೆಯು ಬೇರ್ಪಡುವಿಕೆಗೆ ಒಂದು ತೀರ್ಪು ಪಡೆಯಲು ಅರ್ಹತೆ
ಅವುಗಳೆಂದರೆ, ಆಧಾರದ ಕೆಳಗಿನ:
ಪತಿಯ ಇರುವಿಕೆಯ ನಾಲ್ಕು ವರ್ಷಗಳ ಕಾಲ ಕರೆಯಲಾಗುತ್ತದೆ ಮಾಡಿಲ್ಲ (i);
(II) ಪತಿ ನಿರ್ಲಕ್ಷ್ಯ ಮಾಡಿದೆ ಅಥವಾ ಕಾಲ ತನ್ನ ನಿರ್ವಹಣೆಗೆ ಒದಗಿಸುವಲ್ಲಿ ವಿಫಲವಾಗಿದೆ ಎಂದು
ಎರಡು ವರ್ಷಗಳ;
(III) ಪತಿ ಏಳು ವರ್ಷಗಳ ಕಾಲ ಜೈಲು ಶಿಕ್ಷೆ ಎಂದು ಅಥವಾ
ಮೇಲಕ್ಕೆ;
(IV) ಪತಿಗೆ, ಸಮಂಜಸವಾದ ಕಾರಣವಿಲ್ಲದೆ, ನಿರ್ವಹಿಸಲು ತನ್ನ ವೈವಾಹಿಕ ಜವಾಬ್ದಾರಿಗಳನ್ನು ವಿಫಲವಾಗಿದೆ ಎಂದು
ಮೂರು ವರ್ಷಗಳ ಕಾಲ;
(ವಿ) ಗಂಡ ಮದುವೆಯ ಸಂದರ್ಭದಲ್ಲಿ ಶಕ್ತಿಹೀನ ಮತ್ತು ಆದ್ದರಿಂದ ಮುಂದುವರಿದಿದೆ;
(Vi) ಪತಿ ಎರಡು ವರ್ಷಗಳ ಕಾಲ ಹುಚ್ಚು ಬಂದಿದೆ ಅಥವಾ ಕುಷ್ಠರೋಗ ಅಥವಾ ಬಳಲುತ್ತಿರುವ
ವಿಷಪೂರಿತ ಗುಹ್ಯ ರೋಗ;
ಅವರು ಕಂಡುಕೊಂಡಿದ್ದಾರೆ ಮೊದಲು (VII) ಅವರು ತನ್ನ ತಂದೆ ಅಥವಾ ಇತರ ಪೋಷಕರು ಮದುವೆ ನೀಡಲಾಗಿದೆ ನಂತರ
ಹದಿನೈದು ವರ್ಷ ವಯಸ್ಸಿನ, ಹದಿನೆಂಟು ವರ್ಷ ವಯಸ್ಸಿನ ಆಕ್ಟ್ ಮುನ್ನ ಮದುವೆ ಅಲ್ಲಗಳೆಯುತ್ತಾರೆ:
ಮದುವೆ ನೆರವೇರಿತೆಂದು ಇರುವಂತಹ ಒದಗಿಸಿದ;
(VIII) ಪತಿ ಕ್ರೌರ್ಯ ತನ್ನ ಪರಿಗಣಿಸುತ್ತದೆ, ಆ, ಹೇಳಲು ಹೊಂದಿದೆ?
(ಒಂದು) ದಿನಂಪ್ರತಿ ತನ್ನ ಆಕ್ರಮಣ ಅಥವಾ ಅಂತಹ ವೇಳೆ ನೀತಿ ಕ್ರೌರ್ಯ ಮೂಲಕ ಶೋಚನೀಯ ತನ್ನ ಜೀವನ
ನೀತಿ ದೈಹಿಕ ಕೆಟ್ಟ ಚಿಕಿತ್ಸೆ ಮಟ್ಟಿಗೆ, ಅಥವಾ ಇಲ್ಲ
(ಬಿ) ದುಷ್ಟ ಪ್ರಸಿದ್ಧ ಮಹಿಳೆಯರೊಂದಿಗೆ ಸಹವರ್ತಿಗಳು ಅಥವಾ ಒಂದು ಕುಖ್ಯಾತ ಜೀವನ ಕಾರಣವಾಗುತ್ತದೆ, ಅಥವಾ
(ಸಿ) ಅನೈತಿಕ ಜೀವನವನ್ನು ತನ್ನ ಒತ್ತಾಯಿಸಲು ಪ್ರಯತ್ನಿಸುತ್ತಾನೆ, ಅಥವಾ
(ಡಿ) ತನ್ನ ಆಸ್ತಿ ವಿಲೇವಾರಿ ಅಥವಾ ಅದನ್ನು ತನ್ನ ಕಾನೂನು ಹಕ್ಕುಗಳನ್ನು ಚಲಾಯಿಸಿದರು ತನ್ನ ತಡೆಯುತ್ತದೆ, ಅಥವಾ
(ಇ) ತನ್ನ ಧಾರ್ಮಿಕ ವೃತ್ತಿ ಅಥವಾ ಅಭ್ಯಾಸ, ಅಥವಾ ಪಾಲನೆ ತನ್ನ ಅಡ್ಡಿಪಡಿಸುವ
(ಎಫ್) ಅವರು ಒಂದಕ್ಕಿಂತ ಹೆಚ್ಚು ಪತ್ನಿಯರನ್ನು ವೇಳೆ, ಸಮಾನವಾಗಿ ಅನುಗುಣವಾಗಿ ತನ್ನ ಚಿಕಿತ್ಸೆ ನೀಡುವುದಿಲ್ಲ
Qoran ಆಫ್ injunctions;
(IX) ಮದುವೆ ವಿಸರ್ಜನೆಗೆ ಅಡಿಯಲ್ಲಿ ಮಾನ್ಯ ಗುರುತಿಸಲ್ಪಟ್ಟಿದೆ ಯಾವುದೇ ನೆಲದ ಮೇಲೆ
ಮುಸ್ಲಿಂ ಕಾನೂನು:
ಒದಗಿಸಿದ?
ಶಿಕ್ಷೆಯನ್ನು ಅಂತಿಮ ವರೆಗೆ (ಒಂದು) ಯಾವುದೇ ತೀರ್ಪು ನೆಲದ (III) ವರ್ಗಾಯಿಸಲ್ಪಡುತ್ತವೆ ಹಾಗಿಲ್ಲ;
(ಬಿ) ನೆಲದ (ನಾನು) ವರ್ಗಾಯಿಸಲ್ಪಡುತ್ತವೆ ತೀರ್ಪು ದಿನಾಂಕದಿಂದ ಆರು ತಿಂಗಳ ಕಾಲ ಪರಿಣಾಮಕಾರಿಯಾಗಲು ಹಾಗಿಲ್ಲ
ಇಂತಹ ತೀರ್ಪು, ಪತಿ ಖುದ್ದಾಗಿ ಅಥವಾ ಅಧಿಕೃತ ಏಜೆಂಟ್ ಮೂಲಕ ಎರಡೂ ಕಾಣಿಸಿಕೊಳ್ಳುತ್ತದೆ ಮತ್ತು ವೇಳೆ
ಮತ್ತು ಒಳಗೆ ಆ ಅವಧಿಯಲ್ಲಿ ತನ್ನ ವೈವಾಹಿಕ ಕರ್ತವ್ಯಗಳನ್ನು ನಿರ್ವಹಿಸಲು ತಯಾರಿಸಲಾಗುತ್ತದೆ ಕೋರ್ಟ್ ತೃಪ್ತಿ,
ಕೋರ್ಟ್ ಪಕ್ಕಕ್ಕೆ ಹೇಳಿದರು ತೀರ್ಪು ಹಾಕುವರು; ಮತ್ತು
ಕೋರ್ಟ್, ಪತಿ ಅಪ್ಲಿಕೇಶನ್ ಮಾಡಿದ ಹಾಗಿಲ್ಲ (V) ನೆಲದ ಮೇಲೆ ತೀರ್ಪು ಹಾದುಹೋಗುವ ಮೊದಲು (ಸಿ)
ದಿನಾಂಕದಿಂದ ಒಂದು ವರ್ಷದ ಅವಧಿಯೊಳಗೆ ಕೋರ್ಟ್ ಪೂರೈಸಲು ಪತಿ ಅಗತ್ಯವಿರುವ ಸಲುವಾಗಿ
Copyright © 2012 All rights reserved.