17 December , 2017 Sunday

COASTAL NEWS

COASTAL NEWS

Archive for July, 2015

ವಂಡ್ಸೆ ಗ್ರಾ.ಪಂ.ಅಧ್ಯಕ್ಷರಾಗಿ ಉದಯಕುಮಾರ್ ಶೆಟ್ಟಿ ಉಪಾಧ್ಯಕ್ಷರಾಗಿ ಶಾರದಾ ರುದ್ರಯ್ಯ ಆಚಾರ್ಯ

By Karavali Nudi On July - 1 - 2015 ADD COMMENTS


ವಂಡ್ಸೆ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ಉದಯಕುಮಾರ್ ಶೆಟ್ಟಿ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಶಾರದಾ ರುದ್ರಯ್ಯ ಆಚಾರ್ಯ ಆಯ್ಕೆಯಾದರು. ಅವಿರೋಧವಾಗಿ ಆಯ್ಕೆ ಪ್ರಕ್ರಿಯೆ ನಡೆಯಿತು..
ಅಧಿಕಾರ ಸ್ವೀಕರಿಸಿ ಮಾತನಾಡಿದ ಉದಯಕುಮಾರ್ ಶೆಟ್ಟಿ ಅವರು, ಬೆಳೆಯುತ್ತಿರುವ ವಂಡ್ಸೆಗೆ ಅತ್ಯಂತ ಅಗತ್ಯವಿರುವ ಸಮುದಾಯ ಭವನ ನಿಮರ್ಾಣದ ಬಗ್ಗೆ ತಕ್ಷಣ ಕಾರ್ಯಪ್ರವತ್ತರಾಗಲಾಗುವುದು. ಈಗಾಗಲೇ ಗುರುತಿಸಿರುವ ಪಂಚಾಯತ್ ನಿವೇಶನದಲ್ಲಿ ಸಮುದಾಯ ಭವನಕ್ಕೆ ಯೋಜನೆ ತಯಾರಿಸಲಾಗುವುದು. ವಂಡ್ಸೆ-ಕಾನಮ್ಮ ದೇವಸ್ಥಾನ ರಸ್ತೆ, ಭದ್ರಮಹಾಕಾಳಿ ರಸ್ತೆಗೆ ಗೆ ಅಡ್ಡಲಾಗಿ ಕಿರು ಸೇತುವೆ ನಿಮರ್ಾಣ, ದಿನದ 24 ಗಂಟೆ ಕುಡಿಯುವ ನೀರು ನೀಡುವ ನಿಟ್ಟಿನಲ್ಲಿ ತೆರೆದ ಬಾವಿ ನಿಮರ್ಾಣ ಮಾಡಿ, ಪ್ರತಿಮನೆಗೂ ಮೀಟರ್ ಅಳವಡಿಸಿ ನೀರು ಸರಬರಾಜು ಮಾಡುವುದು, ಶಾಲೆ ರಸ್ತೆಯ ಅಭಿವೃದ್ದಿ, ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಯ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ವಂಡ್ಸೆ ಗ್ರಾ.ಪಂ.ನೂತನ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಈಗಾಗಲೇ ಸಾಕಷ್ಟು ಅಭಿವೃದ್ದಿ ಕಾಮಗಾರಿಗಳು ಚಾಲ್ತಿಯಲ್ಲಿದ್ದು ಅವುಗಳನ್ನು ಪೂರ್ಣಗೊಳಿಸಲಾಗುವುದು. ವಂಡ್ಸೆ ಗ್ರಾಮ ಗ್ರಾಮ ವಿಕಾಸ ಯೋಜನೆಯಲ್ಲಿ ಆಯ್ಕೆಯಾಗಿದ್ದು ಅದರ ಅನುದಾನದ ಸಮರ್ಪಕ ಸದ್ವಿನಿಯೋಗ ಮಾಡಲಾಗುವುದು. ಕೆಳಪೇಟೆಯಲ್ಲಿ ಶೌಚಾಲಯ ನಿಮರ್ಾಣ, ಸಂತೆ ಮಾರುಕಟ್ಟೆಯ ಪುನಃನಿಮರ್ಾಣಕ್ಕೆ ಕ್ರಿಯಾಯೋಜನೆ ತಯಾರಿಸಲಾಗುವದು. ಮೂಕಾಂಬಿಕಾ ಕಾಲೋನಿ ರಸ್ತೆ ಡಾಂಬರೀಕರಣ, ಪಂಚಾಯತ್ ನಿವೇಶನದಲ್ಲಿ ನಾಡಕಛೇರಿ, ಮೆಸ್ಕಾಂ ಕಛೇರಿ ನಿಮರ್ಾಣಕ್ಕೆ ಒತ್ತು ನೀಡಲಾಗುವುದು ಎಂದರು.
ಮುಖ್ಯವಾಗಿ ಬೆಳೆಯುತ್ತಿರುವ ವಂಡ್ಸೆಗೆ ನಿದರ್ಿಷ್ಟ ತ್ಯಾಜ್ಯ ವಿಲೇವಾರಿ ಘಟಕದ ಅವಶ್ಯಕತೆ ಇದ್ದು ಈಗಾಗಲೇ ಸ್ಥಳ ಗುರುತಿಸಲಾಗಿದ್ದು, ಆ ಬಗ್ಗೆ ಕ್ರಿಯಾಯೋಜನೆ ತಯಾರಿಸಲಾಗುವುದು ಎಂದರು. ಗ್ರಾಮದ ಸಮಗ್ರ ಮಾಹಿತಿ, ಸಕರ್ಾರದ ಸೌಲಭ್ಯಗಳ ಮಾಹಿತಿ, ಯೋಜನೆಗಳ ವಿವರಣೆಯನ್ನು ಜನರಿಗೆ ಮುಕ್ತವಾಗಿ ತಿಳಿಸುವ ನಿಟ್ಟಿನಲ್ಲಿ ವೆಬ್ಸೈಟ್ ನಿಮರ್ಾ ಣ ಮಾಡುವ ಗುರಿ ಇದೆ. ಒಟ್ಟಾರೆಯಾಗಿ ಗ್ರಾಮದ ಸವರ್ಾಂಗೀಣ ಅಭಿವೃದ್ಧಿಗೆ ನಾವು ಬದ್ಧರಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭ ಸದಸ್ಯರಾದ ಉದಯ ನಾಯ್ಕ್, ಗುಂಡು ಪೂಜಾರಿ, ಸಿಂಗಾರಿ ಪೂಜಾರಿ, ಮಲ್ಲಿಕಾ, ಲಕ್ಷ್ಮೀ ಉಪಸ್ಥಿತರಿದ್ದರು.

ಶಂಕರನಾರಾಯಣ: ‘ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ’ ಸಾಧಕ ಕೃಷಿಕರಿಗೆ ಗೌರವ

By Nagaraj On July - 1 - 2015 ADD COMMENTS

ಇವತ್ತು ಕೃಷಿಗೆ ಯಂತ್ರೋಪಕರಣಗಳು ಬಂದರೂ ಕೂಡಾ ಕೃಷಿಕ ಕೃಷಿಯ ಬಗ್ಗೆ ನಿರಾಸಕ್ತಿ ತೋರಿಸುತ್ತಲೇ ಇದ್ದಾನೆ. ಕೈಷಿಯಲ್ಲಿ ಪಾಲ್ಗೊಳ್ಳುವಿಕೆ ಕುಂಠಿತವಾಗುತ್ತಿದೆ. ಕೃಷಿ ಕ್ಷೇತ್ರದ ಅನಾರೋಗ್ಯಕರ ಬೆಳವಣಿಗೆ ಬದಲಾಗಬೇಕು. ಕೃಷಿಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ಕೆಲಸ ಆಗಬೇಕು. ವಿವಿಧ ಇಲಾಖೆಗಳ ಪ್ರಯೋಜನವನ್ನು ಸಕಾಲಕ್ಕೆ ಪಡೆದುಕೊಂಡು ಕೃಷಿ ಅಭಿವೃದ್ಧಿ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಆರ್.ಶೆಟ್ಟಿ ಹೇಳಿದರು. ಶಂಕರನಾರಾಯಣದ ಜಿ.ಎಸ್.ಆಚಾರ್ ಸಭಾಂಗಣದಲ್ಲಿ ಜೂ.27ರಂದು ಉಡುಪಿ ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ, ಕುಂದಾಪುರ ಕ್ರಷಿ ಇಲಾಖೆಗಳ ಸಹಯೋಗದಲ್ಲಿ ವಂಡ್ಸೆ ಹೋಬಳಿ ಮಟ್ಟದ ಕೃಷಿ ಅಭಿಯಾನ ‘ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತಾಲೂಕು ಪಂಚಾಯತ್ ಸದಸ್ಯೆ ಪಾರ್ವತಿ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ವಂಡ್ಸೆ ಹೋಬಳಿಯಲ್ಲಿ ಕೃಷಿ ಸಾಧನೆ ಮಾಡಿದ ನೂಜಾಡಿ ಬ್ರಹ್ಮೇರಿಯ ಪ್ರಯೋಗಶೀಲ ಕೃಷಿಕ ಮಂಜುನಾಥ ನಾಯ್ಕ್, ಸಾವಯವ ಕೃಷಿಕ ಪದ್ಮನಾಭ ಅಡಿಗ ಗುಲ್ವಾಡಿ, ಸದಾನಂದ ನಾಯ್ಕ ಯಳಬೇರು, ದಾಕ್ಷಾಯಣಿ ಕುಂದಬಾರಂದಡಿ ಇವರನ್ನು ಸನ್ಮಾನಿಸಲಾಯಿತು. ತಾಲೂಕು ಪಂಚಾಯತ್ ಸದಸ್ಯೆ ಲಲಿತಾ ಆರ್.ಶೆಟ್ಟಿ, ಜಿಲ್ಲಾ ಉಪ ಕೃಷಿ ನಿದರ್ೇಶಕ ಚಂದ್ರಶೇಖರ ನಾಯಕ್, ಬ್ರಹ್ಮಾವರ ಕೆವಿಕೆಯ ವಿಜ್ಞಾನಿ ನವೀನ್ ಉಪಸ್ಥಿತರಿದ್ದರು. ಕುಂದಾಪುರ ಸಹಾಯಕ ಕೃಷಿ ನಿದರ್ೇಶಕ ಮೋಹನರಾಜ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಾಯಕ ಕೃಷಿ ಅಧಿಕಾರಿ ರಘುರಾಮ ಶೆಟ್ಟಿ ಸ್ವಾಗತಿಸಿ, ಕೃಷಿ ಅಧಿಕಾರಿ ಸುಬ್ಬಣ್ಣ ಶೆಟ್ಟಿ ಅತಿಥಿಗಳನ್ನು ಗೌರವಿಸಿದರು. ಕಾರ್ಯಕ್ರಮದಲ್ಲಿ ಆರ್ಹ ಫಲಾನುಭವಿಗಳಿಗೆ ಪವರ್ ಟಿಲ್ಲರ್ ಸೇರಿದಂತೆ ವಿವಿಧ ಕೃಷಿ ಪರಿಕರಗಳ ವಿತರಿಸಲಾಯಿತು. ಕೃಷಿ ಮಾಹಿತಿ, ಪ್ರಾತ್ಯಕ್ಷಿಕೆಗಳು ಜರಗಿದವು.

Copyright © 2012 All rights reserved.