17 December , 2017 Sunday

COASTAL NEWS

COASTAL NEWS

Archive for June, 2015

ಬೈಂದೂರು ಕಾಲೇಜು ವಿದ್ಯಾರ್ಥಿ ನಿ ಅಸಹಜ ಸಾವು ಪ್ರಕರಣ

By Nagaraj On June - 25 - 2015 ADD COMMENTS


ಬಡ ಕುಟುಂಬಕ್ಕೆ ನವೋದಯ ಟ್ರಸ್ಟ್ನಿಂದ 1ಲಕ್ಷ ರೂ. ಹಸ್ತಾಂತರ
ಬೈಂದೂರು ಸಮೀಪದ ಹೇನ್ಬೇರು ಪರಿಸರದ ಆಶಾ ನವೋದಯ ಗುಂಪಿನ ಸದಸ್ಯೆ ರಾಧಾ ದೇವಾಡಿಗ ಅವರ ಮಗಳು ಬೈಂದೂರು ಪದವಿ ಪೂರ್ವ ಕಾಲೇಜು ವಿದ್ಯಾಥರ್ಿನಿ ಅಕ್ಷತಾ ದೇವಾಡಿಗ ಜೂನ್ 17ರಂದು ಕಾಲೇಜಿನಿಂದ ಮನೆಗೆ ಬರುತ್ತಿರುವಾಗ ಮನೆ ಸಮೀಪದ ಆಕೇಶಿಯಾ ತೋಪಿನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದು, ಮಗಳನ್ನು ಕಳೆದುಕೊಂಡು ದುಃಖದಲ್ಲಿರುವ ಮನೆಗೆ ನವೋದಯ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರು, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಜೂನ್ 19ರಂದು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿ, ರೂ. 1ಲಕ್ಷ ನಗದನ್ನು ಕುಟುಂಬಕ್ಕೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ಈ ಭಾಗದ ವಿದ್ಯಾಥರ್ಿಗಳ ಬೇಡಿಕೆಯಂತೆ ಹೆನ್ಬೇರ್ನಿಂದ ಬೈಂದೂರು ಕಾಲೇಜು ತನಕ ಸಕರ್ಾರ ವಾಹನದ ವ್ಯವಸ್ಥೆ ಮಾಡುವ ತನಕ ವಾಹನದ ವ್ಯವಸ್ಥೆ ಕಲ್ಪಿಸಲಾಗುವುದು. ವಿದ್ಯಾಥರ್ಿಗಳು ಯಾವುದೇ ಕಾರಣಕ್ಕೂ ಶಾಲೆ ಕಾಲೇಜಿಗೆ ಹೋಗುವುದನ್ನು ನಿಲ್ಲಿಸಬಾರದು. ಅಲ್ಲದೇ ಕುಟುಂಬದ ತುತರ್ು ಅಗತ್ಯತೆಗಾಗಿ ಒಂದು ಲಕ್ಷ ರೂಪಾಯಿಯನ್ನು ನೀಡುತ್ತಿದ್ದೇವೆ. ಇಂಥಹ ದುರ್ಘಟನೆಗಳು ಭವಿಷ್ಯದಲ್ಲಿ ಘಟಿಸಬಾರದು ಎಂದು ಹೇಳಿದ ಅವರು, ಈ ಹಿಂದೆ ಇದೇ ಪರಿಸರದಲ್ಲಿ ಸರಣಿಯಾಗಿ ದನಗಳು ಸಾವನ್ನಪ್ಪಿದ ಸಂದರ್ಭದಲ್ಲಿ ಕೂಡಾ ನಾವು ಸ್ಪಂದಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿದರ್ೇಶಕರಾದ ಎಸ್.ರಾಜು ಪೂಜಾರಿ, ರಘುರಾಮ ಶೆಟ್ಟಿ, ಟಿಎಪಿಸಿಎಂಎಸ್ ಕುಂದಾಪುರ ಇದರ ಅಧ್ಯಕ್ಷರಾದ ಮಲ್ಯಾಡಿ ಮೋಹನದಾಸ್ ಶೆಟ್ಟಿ, ವಲಯ ಮೇಲ್ವಿಚಾರಕ ಶಿವರಾಮ ಉಪಸ್ಥಿತರಿದ್ದರು.

 

ಮೂರು ದಿನಗಳಲ್ಲಿ ಪ್ರಕರಣ ಬೇಧಿಸಿದ ಪೊಲೀಸ್ ಕಾರ್ಯವೈಖರಿಗೆ ಶಾಸಕರ ಅಭಿನಂದನೆ

By Nagaraj On June - 25 - 2015 ADD COMMENTS

 
ಬೈಂದೂರು ಸಮೀಪದ ಹೆನ್ಬೇರು ವಿದ್ಯಾಥರ್ಿನಿ ಅಕ್ಷತಾ ದೇವಾಡಿಗ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ. ಘಟನೆ ನಡೆದ ಮೂರು ದಿನಗಳ ಒಳಗೆ ಆರೋಪಿಯನ್ನು ಬಂಧಿಸಿದ ಪೊಲೀಸ್ ಇಲಾಖೆ ಅಭಿನಂದನಾರ್ಹ ಎಂದು ಬೈಂದೂರು ಕ್ಷೇತ್ರದ ಶಾಸಕ ಕೆ.ಗೋಪಾಲ ಪೂಜಾರಿ ತಿಳಿಸಿದರು.
ಅವರು ಶಾಸಕರ ಕಛೇರಿಯಲ್ಲಿ ಜೂನ್ 20ರಂದು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು. ಈ ಘಟನೆ ಬಹಳ ದುಃಖಕರವಾದುದಾಗಿದ್ದು, ಬುಧವಾರ ಸಂಜೆ ವಿದ್ಯಾಥರ್ಿ ಅಕ್ಷತಾ ಶವ ಪತ್ತೆಯಾಗುತ್ತಿದ್ದಂತೆ ನನಗೆ ಪೋನ್ ಕರೆ ಬಂತು. ಆ ಸಂದರ್ಭ ನಾನು ಬೆಂಗಳೂರಿನಲ್ಲಿ ಅಗತ್ಯ ಸಭೆಯೊಂದನ್ನು ಮುಗಿಸಿ, ಶಿವಮೊಗ್ಗ ಸಮೀಪ ಬರುತ್ತಿದ್ದೆ. ತಕ್ಷಣ ಈ ಭಾಗದ ಪ್ರಮುಖರಿಗೆ ಸ್ಥಳಕ್ಕೆ ಹೋಗುವಂತೆ ಸೂಚಿಸಿದೆ. ಬೆಳಿಗ್ಗೆ ಮೃತ ಅಕ್ಷತಾ ಮನೆಗೆ ಭೇಟಿ ನೀಡಿದ್ದೇನೆ. ಪೊಲೀಸ್ ಇಲಾಖೆ ಜೊತೆ ನಿರಂತರ ಸಂಪರ್ಕದಲ್ಲಿದ್ದುಕೊಂಡಿದ್ದಲ್ಲದೇ ಮುಖ್ಯಮಂತ್ರಿಗಳ ಜೊತೆ ಚಚರ್ಿಸಿದ್ದೇನೆ. ಐಜಿಪಿ ಮೂಲಕ ಗೃಹ ಸಚಿವರ ಜೊತೆ ಮಾತನಾಡಿದ್ದು, ಅವರು ಶೋಧ ಕಾರ್ಯ ತೀವ್ರಗೊಳಿಸುವಂತೆ ಇಲಾಖೆಗೆ ಸೂಚಿಸಿದ್ದಲ್ಲದೇ ಅವರು ಪೊಲೀಸ್ ಇಲಾಖೆ ಜೊತೆ ನಿರಂತರ ಸಂಪರ್ಕದಲ್ಲಿದ್ದರು. ಐಜಿಪಿ, ಎಸ್ಪಿ ಅವರು ಹೇಳಿದಂತೆ ಮೂರು ದಿನಗಳಲ್ಲಿ ಆರೋಪಿಯನ್ನು ಬಂಧಿಸುವ ಕೆಲಸ ಮಾಡಿದ್ದಾರೆ ಎಂದರು.
ಇನ್ನೂ ಬಡ ಕುಟುಂಬಕ್ಕೆ 5 ಲಕ್ಷಗಳ ಪರಿಹಾರವನ್ನು ಸಕರ್ಾರದ ವತಿಯಿಂದ ಕೂಡಲೆ ತರಿಸಿಕೊಡಲಾಗುವುದು. ಪೊಲೀಸ್ ಇಲಾಖೆಯ ವರದಿಗಳಲ್ಲಿ ಪರಿಹಾರ ದೊರಕಿಸಿಕೊಡುವಲ್ಲಿ ಪ್ರಮುಖವಾಗಿರುವುದರಿಂದ ವರದಿಗಳ ಬಂದ ತಕ್ಷಣ ಪರಿಹಾರ ದೊರಕಿಸಿಕೊಡಲಾಗುವುದು. ತಕ್ಷಣ ಪ್ರಕರಣವನ್ನು ಬೇಧಿಸುವಲ್ಲಿ ಇಲಾಖೆ ಶ್ರಮಿಸಿದ್ದು, ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಬಗ್ಗೆ ಗೌರವ ಮೂಡಿಸುವ ಕೆಲಸ ಮಾಡಿದೆ ಎಂದರು.
ಈಗಾಗಲೇ ಮೃತ ಅಕ್ಷತಾ ಮನೆಗೆ ಶಿಕ್ಷಣ ಸಚಿವರು ಭೇಟಿ ನೀಡಿ, ಅಲ್ಲಿನ ವಿದ್ಯಾಥರ್ಿಗಳ ಬೇಡಿಕೆಯಂತೆ ವಾಹನ ವ್ಯವಸ್ಥೆಯ ಭರವಸೆ ನೀಡಿದ್ದಾರೆ. ಬೈಂದೂರು ಕಾಲೇಜಿನಲ್ಲಿ ಬಾಲಕರ ಶೌಚಾಲಯಕ್ಕೆ 10 ಲಕ್ಷ, ಬಾಲಕಿಯರ ಶೌಚಾಲಯಕ್ಕೆ 20 ಲಕ್ಷ ಮಂಜೂರು ಮಾಡುವ ಆಶ್ವಾಸನೆ ನೀಡಿದ್ದಾರೆ. ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನ ಅಧ್ಯಕ್ಷರು ನವೋದಯ ಟ್ರಸ್ಟ್ನಿಂದ ರೂ.1ಲಕ್ಷ ಆಥರ್ಿಕ ನೆರವು ನೀಡಿದ್ದಾರೆ. ಮೂರು ತಿಂಗಳು ವಾಹನದ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ. ಇನ್ನೂ ಈ ಭಾಗದ ಬಹು ಬೇಡಿಕೆ ಲೇಡಿಸ್ ಹಾಸ್ಟೆಲ್. ಮುಖ್ಯಮಂತ್ರಿಗಳ ಜೊತೆ ಈ ಬಗ್ಗೆ ಚಚರ್ಿಸಿ, ಬೈಂದೂರಿಗೆ ಲೇಡಿಸ್ ಹಾಸ್ಟೆಲ್ ಖಂಡಿತ ಮಾಡುತ್ತೇನೆ ಎಂದರು.
ಹೆನ್ಬೇರು ಭಾಗದ ಜನರ ಬೇಡಿಕೆ ರಾಘವೇಂದ್ರ ಮಠದ ಹತ್ತಿರ ಬಸ್ ತಂಗುದಾಣಕ್ಕೆ ಈಗಾಗಲೇ ಸಚಿವರು ಆದೇಶ ಮಾಡಿದ್ದಾರೆ. ಹಳ್ಳಿಗಳಿಗೆ ಹೊಸ ಬಸ್ ಪರವಾನಿಗೆ ನೀಡುವ ಕೆಲಸ ಆರಂಭವಾಗಲಿದೆ. ಒಟ್ಟಾರೆಯಾಗಿ ಗ್ರಾಮೀಣ ಭಾಗದ ಜನರ ನೋವಿಗೆ ನಾವು ತಕ್ಷಣ ಸ್ಪಂದಿಸುತ್ತೇವೆ. ಇಂಥಹ ಘಟನೆಗಳು ಭವಿಷುದಲ್ಲಿ ಪುನಾರವರ್ತನೆ ಆಗದಂತೆ ಮುಂಜಾರುಕತೆ ವಹಿಸುವ ಕೆಲಸ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ತಾ.ಪಂ.ಸದಸ್ಯ ರಾಜು ಪೂಜಾರಿ, ರಮೇಶ ಗಾಣಿಗ, ರಾಮ ಶೇರುಗಾರ್, ಮಾಜಿ ಸದಸ್ಯರಾದ ವಿಜಯಕುಮಾರ್ ಶೆಟ್ಟಿ, ಕೆ.ಪಿ.ಸಿ.ಸಿ ಸದಸ್ಯರಾದ ರಘುರಾಮ ಶೆಟ್ಟಿ, ಸಂಪಿಗೇಡಿ ಸಂಜೀವ ಶೆಟ್ಟಿ, ಮದನ್ ಕುಮಾರ್, ಬಾಬು ಶೆಟ್ಟಿ, ಅಶೋಕ ಶೆಟ್ಟಿ, ಚಂದ್ರ ಪೂಜಾರಿ, ಸುರೇಶ, ನಾಗರಾಜ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು.
‘ಸುಪ್ರಿತಾ ಪೂಜಾರಿ ಪ್ರಕರಣ ಮರೆತಿಲ್ಲ’
ಕಳೆದ ವರ್ಷ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ವಿದ್ಯಾಥರ್ಿನಿ ಸುಪ್ರಿತಾ ಪೂಜಾರಿ ಆತ್ಮಹತ್ಯೆ ಪ್ರಕರಣವನ್ನು ಮರೆತಿಲ್ಲ, ತನಿಖೆ ನಡೆಯುತ್ತಿದೆ. ರತ್ನ ಕೊಠಾರಿ ನಿಗೂಢ ಸಾವಿನ ಪ್ರಕರಣದ ಮರಣೋತ್ತರ ಪರೀಕ್ಷೆ ವರದಿ ಇತ್ತೀಚೆಗಷ್ಟೆ ಬೈಂದೂರು ಠಾಣೆಗೆ ಬಂದಿದ್ದು, ಇಲಾಖೆಯ ಚಾಜರ್್ಸೀಟ್ ಸಲ್ಲಿಸಿದ ಬಳಿಕ ಆಕೆಯ ಕುಟುಂಬಕ್ಕೆ ಆಶ್ವಾಸನೆ ಕೊಟ್ಟ ಪರಿಹಾರವನ್ನು ಮುಟ್ಟಿಸಲಾಗುವುದು ಎಂದು ಶಾಸಕರು ತಿಳಿಸಿದರು.

 

ಗ್ರಾಪಂ ಚುನಾವಣೆ: ಇಂದು ದ.ಕ.-227, ಉಡುಪಿ- 148 ಗ್ರಾಪಂಗಳ ಫಲಿತಾಂಶ

By varthabharathi On June - 5 - 2015 ADD COMMENTS

 

ಉಡುಪಿ, ಜೂ.4: ಉಡುಪಿ ಜಿಲ್ಲೆಯ 148 ಗ್ರಾಪಂಗಳ 2126 ಸದಸ್ಯ ಸ್ಥಾನಗಳಿಗೆ ಕಳೆದ ಶುಕ್ರವಾರ ನಡೆದ ಚುನವಾಣೆಯಲ್ಲಿ ಸ್ಪರ್ಧಿಸಿರುವ ಒಟ್ಟು 4,740 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ ಜೂ.5ರಂದು ನಡೆಯಲಿದೆ. ಉಡುಪಿ, ಕುಂದಾಪುರ ಹಾಗೂ ಕಾರ್ಕಳ ತಾಲೂಕು ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಗೆ ಬಿಗು ಭದ್ರತೆಯ ನಡುವೆ ಮತಗಳ ಎಣಿಕೆ ಆರಂಭಗೊಳ್ಳಲಿದೆ.
ಉಡುಪಿಯ 355 ಕ್ಷೇತ್ರಗಳ 374 ಮತಗಟ್ಟೆಗಳಲ್ಲಿ ನಡೆದ ಮತದಾನದ ಮತಎಣಿಕೆಗಾಗಿ 118 ಟೇಬಲ್‌ಗಳನ್ನು ಸಜ್ಜುಗೊಳಿಸಲಾಗಿದ್ದು 548 ಸಿಬ್ಬಂದಿಯನ್ನು ನೇಮಿಸಲಾಗಿದೆ. ಕುಂದಾಪುರದ 283 ಕ್ಷೇತ್ರಗಳ 291 ಮತಗಟ್ಟೆಗಳಲ್ಲಿ ಚುನಾವಣೆ ನಡೆದಿದ್ದು, ಇವುಗಳ ಮತಎಣಿಕೆಗೆ 125 ಟೇಬಲ್‌ಗಳು ಸಿದ್ಧಗೊಂಡಿದ್ದು, 552 ಮಂದಿ ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ. ಇನ್ನು ಕಾರ್ಕಳ ತಾಲೂಕಿನ 168 ಕ್ಷೇತ್ರಗಳ 172 ಮತಗಟ್ಟೆಗಳಲ್ಲಿ ಮತದಾನವಾಗಿದ್ದು, ಇದ ಕ್ಕಾಗಿ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 67 ಟೇಬಲ್‌ಗಳನ್ನು 296 ಸಿಬ್ಬಂದಿಯನ್ನು ಸಜ್ಜುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇದೇ ವೇಳೆ ಮತ ಎಣಿಕೆಯ ಸಮಯದಲ್ಲಿ 3 ತಾಲೂಕು ಕೇಂದ್ರಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಂದೋಬಸ್ತ್‌ಗಾಗಿ ಸುಮಾರು 1,200 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಮತ ಎಣಿಕೆ ಕೇಂದ್ರದ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹಾಗೂ ಜಿಲ್ಲಾದ್ಯಂತ ನಾಳೆ ಬೆಳಗ್ಗೆ 6ರಿಂದ ಜೂ.6ರ ಬೆಳಗ್ಗೆ 6ರವರೆಗೆ ಸೆ.144ರಂತೆ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಲಾಗಿದೆ.ವಿಜಯೋತ್ಸವ ಅಥವಾ ಇನ್ಯಾವುದೇ ಮೆರವಣಿಗೆಯನ್ನು ಸಹ ನಿರ್ಬಂಧಿಸಲಾಗಿದೆ
ಜಿಲ್ಲೆಯಲ್ಲಿ ಒಟ್ಟು 155 ಗ್ರಾಪಂಗಳಿಗೆ (6 ಗ್ರಾಪಂಗಳನ್ನು ಹೊರತುಪಡಿಸಿ) ಚುನಾವಣೆಯನ್ನು ಘೋಷಿಸಲಾಗಿತ್ತು. ಇವುಗಳಲ್ಲಿ ನಾಮಪತ್ರಗಳ ಸಲ್ಲಿಕೆಯ ವೇಳೆ ಏಳು ಗ್ರಾಪಂಗಳ ಎಲ್ಲಾ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿರುವುದರಿಂದ ಉಳಿದ 148 ಗ್ರಾಪಂಗಳಿಗೆ ಮಾತ್ರ ಮೇ 29ರಂದು ಮೊದಲ ಹಂತದಲ್ಲಿ ಮತದಾನ ನಡೆದಿತ್ತು. 148 ಗ್ರಾಪಂಗಳಲ್ಲೂ 200ಕ್ಕೂ ಅಧಿಕ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಉಳಿದ 2,126 ಸ್ಥಾನಗಳಿಗೆ ಮಾತ್ರ 4740 ಮಂದಿ ಜಿದ್ದಾಜಿದ್ದಿನ ಸ್ಪರ್ಧೆ ನಡೆಸಿದ್ದರು.
ದ.ಕ.: 7,619 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ
ಮಂಗಳೂರು, ಜೂ.4: ದಕ್ಷಿಣ ಕನ್ನಡ ಜಿಲ್ಲೆಯ 227 ಗ್ರಾಪಂಗಳಿಗೆ ಮೇ 29ರಂದು ನಡೆದ ಚುನಾವಣೆಯ ಫಲಿತಾಂಶವು ಶುಕ್ರವಾರ ಪ್ರಕಟ ಗೊಳ್ಳಲಿದ್ದು, ಸಂಜೆಯ ವೇಳೆಗೆ ಸ್ಪಷ್ಟ ಚಿತ್ರಣ ಸಿಗಲಿದೆ.
ಮಂಗಳೂರು ತಾಲೂಕಿನ 55 ಗ್ರಾ.ಪಂ.ಗಳ ಮತ ಎಣಿಕೆಯು ನಂತೂರು ಪಾದುವ ಹೈಸ್ಕೂಲ್, ಬಂಟ್ವಾಳ ತಾಲೂಕಿನ 57 ಗ್ರಾ.ಪಂ.ಗಳ ಮತ ಎಣಿಕೆಯು ಮೊಡಂಕಾಪು ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿ ತಾಲೂಕಿನ 46 ಗ್ರಾ.ಪಂ.ಗಳ ಮತ ಎಣಿಕೆಯು ಉಜಿರೆ ಎಸ್‌ಡಿಎಂ ಪದವಿ ಪೂರ್ವ ಕಾಲೇಜು, ಪುತ್ತೂರು ತಾಲೂಕಿನ 41ಗ್ರಾ.ಪಂ.ಗಳ ಮತ ಎಣಿಕೆಯು ಪುತ್ತೂರು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಸುಳ್ಯ ತಾಲೂಕಿನ 28 ಗ್ರಾ.ಪಂ.ಗಳ ಮತ ಎಣಿಕೆಯು ಸುಳ್ಯ ನೆಹರೂ ಸ್ಮಾರಕ ಕಾಲೇಜಿನಲ್ಲಿ ಬೆಳಗ್ಗೆ 8ರಿಂದ ಬಿಗಿ ಪೊಲೀಸ್ ಬಂದೋಬಸ್ತ್ ಮಧ್ಯೆ ನಡೆಯಲಿದೆ. ಮಂಗಳೂರು ತಾಲೂಕಿಗೆ 120 ಮೇಜು, ಬಂಟ್ವಾಳಕ್ಕೆ 91, ಬೆಳ್ತಂಗಡಿಗೆ 75, ಪುತ್ತೂರಿಗೆ 80, ಸುಳ್ಯಕ್ಕೆ 40 ಮೇಜುಗಳ ವ್ಯವಸ್ಥೆ ಮಾಡಲಾಗಿದೆ. ಮೊದಲು ಅಂಚೆ ಮತಗಳ ಎಣಿಕೆ ನಡೆಯಲಿದೆ. ಆ ಬಳಿಕ ಒಂದಕ್ಕಿಂತ ಹೆಚ್ಚು ಸದಸ್ಯ ಸ್ಥಾನ ಹೊಂದಿರುವ ಕ್ಷೇತ್ರಗಳ ಮತ ಎಣಿಕೆ ಆರಂಭಗೊಳ್ಳಲಿದೆ. ಸೂಕ್ಷ್ಮ ಮತಗಟ್ಟೆಗಳ ಎಣಿಕೆಯ ವೀಡಿಯೊ ಚಿತ್ರೀಕರಣವೂ ನಡೆಸಲಾಗುತ್ತದೆ.
ಜಿಲ್ಲೆಯ 3,288 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 7,619 ಅಭ್ಯರ್ಥಿಗಳ ಭವಿಷ್ಯವನ್ನು 7,33,579 ಮಂದಿ ನಿರ್ಧರಿಸಿದ್ದರು.
ಫಲಿತಾಂಶ ಘೋಷಣೆಯ ವಿಧಾನ
ಗ್ರಾ.ಪಂ. ಚುನಾವಣೆಯ ಫಲಿ ತಾಂಶ ಘೋಷಣೆಯ ವಿಧಾನ ಕೂಡ ವಿಶಿಷ್ಟ ವಾಗಿದೆ. ಇಬ್ಬರು ಅಭ್ಯರ್ಥಿಗಳಿಗೆ ಸಮಾನ ಮತ ಬಂದರೆ ಚೀಟಿ ಎತ್ತುವ ಮೂಲಕ ಆಯ್ಕೆಯನ್ನು ಸ್ಥಳದಲ್ಲೇ ಘೋಷಿಸಲಾಗುತ್ತದೆ. ಇನ್ನು ಮೂವರು ಸದಸ್ಯರಿರುವ ವಾರ್ಡ್‌ನಲ್ಲಿ ಅನುಸೂಚಿತ ಜಾತಿಯ ಮಹಿಳೆಯ 1 ಸ್ಥಾನಕ್ಕೆ ಇಬ್ಬರು ಸ್ಪರ್ಧಿಸಿದ್ದರೆ ಅತಿ ಹೆಚ್ಚು ಮತ ಗಳಿಸಿದ ಅಭ್ಯರ್ಥಿಯನ್ನು ವಿಜೇತ ಎಂದು ಘೋಷಿಸಲಾಗುತ್ತದೆ.

Copyright © 2012 All rights reserved.