17 December , 2017 Sunday

COASTAL NEWS

COASTAL NEWS

Archive for May, 2015

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುಷಾಗೆ 542 ಅಂಕ

By Karavali Nudi On May - 26 - 2015 ADD COMMENTS

ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸ.ಪ.ಪೂ.ಕಾಲೇಜು ವಂಡ್ಸೆ (ನೆಂಪು) ಇಲ್ಲಿನ ವಿದ್ಯಾಥರ್ಿನಿ ಅನುಷಾ 542 ಅಂಕ ಗಳಿಸಿದ್ದಾರೆ. ಕನ್ನಡ-95, ಇಂಗ್ಲಿಷ್-78, ಹಿಸ್ಟರಿ-92, ಎಕಾನಮಿಕ್ಸ್-94, ಬ್ಯುಸಿನೆಸ್ ಸ್ಟಡೀಸ್-91, ಅಕೌಂಟೆನ್ಸಿ-92 ಅಂಕ ಗಳಿಸಿದ್ದಾರೆ. ಡಿಸ್ಟಿಂಕ್ಷನ್ನಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಆನಂದ ಪೂಜಾರಿ ಮತ್ತು ಆಶಾ ನೆಂಪು ಹೆಜರ್ಾಡಿ ಇವರ ಪುತ್ರಿ.

ಪಿಯುಸಿ ಫಲಿತಾಂಶ: ಉಡುಪಿ ಬಾಲಕಿಯರ ಮೇಲುಗೈ

By varthabharathi On May - 20 - 2015 ADD COMMENTS

ಉಡುಪಿ, ಮೇ 19: ಜಿಲ್ಲೆಯಿಂದ ಪರೀಕ್ಷೆಗೆ 13,770 ಮಂದಿ ರೆಗ್ಯುಲರ್ ವಿದ್ಯಾರ್ಥಿಗಳು ಹಾಜರಾಗಿದ್ದು, ಇವರಲ್ಲಿ 12,712 ಮಂದಿ ಉತ್ತೀರ್ಣರಾಗಿ ಶೇ.92.32 ಫಲಿತಾಂಶ ದಾಖಲಾಗಿದೆ. ಪರೀಕ್ಷೆಗೆ ಹಾಜರಾದ 1,242 ಖಾಸಗಿ ಅಭ್ಯರ್ಥಿಗಳ ಪೈಕಿ 496 ಮಂದಿ (ಶೇ. 39.94) ಹಾಗೂ 420 ಪುನರಾವರ್ತಿತ ವಿದ್ಯಾರ್ಥಿಗಳ ಪೈಕಿ 141 ಮಂದಿ (ಶೇ.33.51) ಪಾಸಾಗಿದ್ದಾರೆ.

ರೆಗ್ಯುಲರ್, ಖಾಸಗಿ ಮತ್ತು ಪುನರಾವರ್ತಿತ ವಿದ್ಯಾರ್ಥಿಗಳು ಸೇರಿ ಒಟ್ಟು 15,432 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ 13,349 ಮಂದಿ ತೇರ್ಗಡೆ ಹೊಂದಿ ಶೇ. 86.5 ಫಲಿತಾಂಶ ದಾಖಲಾಗಿದೆ. ಫಲಿತಾಂಶದಲ್ಲಿ ಬಾಲಕಿಯರು ಮೇಲುಗೈ ಸಾಸಿದ್ದಾರೆ. ಪರೀಕ್ಷೆ ಬರೆದ 8,011 ವಿದ್ಯಾರ್ಥಿನಿಯರ ಪೈಕಿ 7,318 ಮಂದಿ ತೇರ್ಗಡೆಗೊಂಡು ಶೇ.91.35 ಫಲಿತಾಂಶ ಬಂದಿದೆ.

ಪರೀಕ್ಷೆ ಬರೆದ 7,421 ಬಾಲಕರಲ್ಲಿ 6,031 ಮಂದಿ ತೇರ್ಗಡೆಗೊಂಡು ಶೇ. 81.27 ಉತ್ತೀರ್ಣತೆ ದಾಖಲಾಗಿದೆ. ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 2,315 ವಿದ್ಯಾರ್ಥಿಗಳ ಪೈಕಿ 2,090 ಮಂದಿ ಉತ್ತೀರ್ಣರಾಗಿ ಶೇ. 90.28 ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ 7,425 ಮಂದಿ ಪರೀಕ್ಷೆ ಬರೆದಿದ್ದು, 6,935 ಮಂದಿ ಪಾಸಾಗಿ ಶೇ. 93.4 ಫಲಿತಾಂಶ ದಾಖಲಾಗಿದೆ. ವಿಜ್ಞಾನ ವಿಭಾಗದಲ್ಲಿ 4,030 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 3,687 ಮಂದಿ ತೇರ್ಗಡೆ ಹೊಂದಿ ಶೇ. 91.49 ಫಲಿತಾಂಶ ಬಂದಿದೆ. ನಗರ ಪ್ರದೇಶದ 6,627 ವಿದ್ಯಾರ್ಥಿಗಳಲ್ಲಿ 5,740 ಮಂದಿ (ಶೇ.92.18), ಗ್ರಾಮಾಂತರ ಪ್ರದೇಶದ 7,543 ವಿದ್ಯಾರ್ಥಿಗಳಲ್ಲಿ 6,972 ಮಂದಿ ಉತ್ತೀರ್ಣರಾಗಿ ಶೇ.92.43 ಫಲಿತಾಂಶ ಬಂದಿದೆ.

ಪ್ರಶಾಂತ್ ಬಿ.ಸಿಗೆ 535 ಅಂಕ

By Karavali Nudi On May - 19 - 2015 ADD COMMENTS


ಮೂಲತಃ ಕುಂದಾಪುರದವನಾದ ಬೆಂಗಳೂರು ಅರಬಿಂದೋ ವಿದ್ಯಾ ಮಂದಿರ್ನ ವಿದ್ಯಾಥರ್ಿ ಪ್ರಶಾಂತ್ ಬಿ.ಸಿ ಈ ಬಾರಿ ಎಸ್.ಎಸ್.ಎಲ್.ಸಿ ಪಬ್ಲಿಕ್ ಪರೀಕ್ಷೆಯಲ್ಲಿ 535(86.5%) ಅಂಕ ಗಳಿಸಿದ್ದಾನೆ. ಈತ ಬೆಂಗಳೂರಿನ ಅನ್ನಪೂಣರ್ೇಶ್ವರಿ ಸ್ವೀಟ್ಸ್ನ ಯು.ವಿ.ಚಂದ್ರಶೇಖರ ಮತ್ತು ಶಾಂತ ದಂಪತಿಗಳ ಪುತ್ರ.

ದ್ವಿತೀಯ ಪಿಯುಸಿ ಫಲಿತಾಂಶ: ರಾಜ್ಯಕ್ಕೆ ದ.ಕ. ಪ್ರಥಮ, ಉಡುಪಿ ದ್ವಿತೀಯ

By varthabharathi On May - 19 - 2015 ADD COMMENTS

ಮಂಗಳೂರು, ಮೇ 18: ದ.ಕ. ಜಿಲ್ಲೆಯು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕಳೆದೆ ರಡು ವರ್ಷಗಳಿಂದ ಸತತ ದ್ವಿತೀಯ ಬಾರಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಳ್ಳುವ ಮೂಲಕ ಬುದ್ಧಿವಂತರ ಜಿಲ್ಲೆ ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಂಡಿದೆ. 2014ನೆ ಸಾಲಿನಲ್ಲಿ ಶೇ.86.04 ಫಲಿತಾಂಶ ಪಡೆದಿದ್ದ ದ.ಕ. ಜಿಲ್ಲೆ ಈ ವರ್ಷ ಶೇ.93.09 ಫಲಿತಾಂಶದೊಂದಿಗೆ ಪ್ರಥಮ ಸ್ಥಾನವನ್ನು ತನ್ನಲ್ಲೇ ಉಳಿಸಿಕೊಂಡಿದೆ. ಶೇಕಡವಾರು ಫಲಿತಾಂಶದಲ್ಲೂ ದ.ಕ. ಪ್ರಗತಿ ಸಾಧಿಸಿದೆ. 2013ನೆ ಸಾಲಿನಲ್ಲಿ ದ.ಕ. ದ್ವಿತೀಯ ಸ್ಥಾನದಲ್ಲಿತ್ತು. 2015ನೆ ಸಾಲಿನಲ್ಲಿ ದ.ಕ. ಜಿಲ್ಲೆಯಿಂದ 31,396 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದು, 29,226 ಮಕ್ಕಳು ಉತ್ತೀರ್ಣರಾಗಿದ್ದಾರೆ. ಜಿಲ್ಲಾಧಿಕಾರಿ ಮೆಚ್ಚುಗೆ
ಪಿಯುಸಿ ಪರೀಕ್ಷೆಯಲ್ಲಿ ದ.ಕ. ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆ ದಿದ್ದು, ಕಳೆದ ವರ್ಷದ ಸ್ಥಾನವನ್ನು ಉಳಿಸಿಕೊಂ ಡಿರುವುದು ಶ್ಲಾಘನೀಯ ಎಂದು ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನ ಸಂತ ಅಲೋಶಿಯಸ್ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಅಸ್ಮಾ ಖಾನ್ 590 (98.33 ಶೇ.) ಅಂಕಗಳನ್ನು ಗಳಿಸಿದ್ದಾರೆ.
ಆಶಿಕಾ ಆಯಿಷಾಳಿಗೆ ಶೇ.94 ಅಂಕ
ಪುತ್ತೂರು, ಮೇ 18: ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಆಶಿಕಾ ಆಯಿಷಾ ಫರ್ಹಾನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ 562 ಅಂಕ (ಶೇ.94) ಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಕಾಲೇಜಿಗೆ ದ್ವಿತೀಯ ಸ್ಥಾನಿಯಾಗಿದ್ದಾರೆ. ಈಕೆ ಕನ್ನಡದಲ್ಲಿ 96, ಇಂಗ್ಲಿಷ್ -86, ಭೌತಶಾಸ್ಟ್ರ- 97 ಮತ್ತು ರಸಾಯನಶಾಸ್ತ್ರ, ಗಣಿತ ಹಾಗೂ ಜೀವ ಶಾಸ್ತ್ರದಲ್ಲಿ ತಲಾ 96 ಅಂಕಗಳನ್ನು ಗಳಿಸಿದ್ದಾಳೆ. ಆಶಿಕಾ ಆಯಿಷಾ ಫರ್ಹಾನ ಉಪ್ಪಿನಂಗಡಿ ಮಠ ನಿವಾಸಿ ಯೂಸುಫ್ ಸಅದಿ ಮಠ ಹಾಗೂ ತಾಹಿರಾ ದಂಪತಿಯ ಪುತ್ರಿ.

ಗೋಳಿಗರಡಿ ಮೇಳದ ಪಂಚದೈವ ಪ್ರತಾಪ ನೂರರ ಸಂಭ್ರಮ

By Karavali Nudi On May - 16 - 2015 ADD COMMENTS


ಪ್ರಸ್ತುತ ಯಕ್ಷಗಾನ ಸಂವಿಧಾನದಲ್ಲಿ ಪ್ರಸಂಗ ರಚಿಸುತ್ತ ಸ್ವತಂತ್ರ ಛಂದಬದ್ಧವಾದ ಕೃತಿ ನೀಡುತ್ತ, ಯಕ್ಷಗಾನ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸುವ ಮೊಗೆಬೆಟ್ಟು ಪ್ರಸಾದ್ ಕುಮಾರ ಯುವ ಪ್ರಸಂಗಕರ್ತರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಯಕ್ಷಗಾನ ವಿಮರ್ಶಕ ಪ್ರೊ|ಎಸ್.ವಿ. ಉದಯಕುಮಾರ್ ಶೆಟ್ಟಿ ಹೇಳಿದರು.
ತೆಕ್ಕಟ್ಟೆಯ ಕಂಚಿಗಾರ್ಬೆಟ್ಟು ಶ್ರೀ ಜೈನ ಬೊಬ್ಬರ್ಯ ದೇವಸ್ಥಾನದ ವಠಾರದಲ್ಲಿ ಮೇ.4ರಂದು ಗೋಳಿಗರಡಿ ಶ್ರೀ ಪಂಜುರ್ಲಿ ಗೋಳಿಗರಡಿ ಮೇಳದ ಪಂಚದೈವ ಪ್ರತಾಪ ನೂರರ ಸಂಭ್ರಮ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಯಕ್ಷಗಾನ ಬಯಲಾಟ ಸಂದರ್ಭದಲ್ಲಿ ಪ್ರಸಾದ್ ಕುಮಾರ್ ಮೊಗೆಬೆಟ್ಟು ವಿರಚಿತ ಪಂಚದೈವ ಪ್ರತಾಪ ಯಕ್ಷಗಾನ ಪ್ರಸಂಗ ಶತದಿನೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯಶಸ್ವಿ ಪ್ರಸಂಗ ನೀಡಿದ ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಸಂಗಕರ್ತ ಪ್ರಸಾದ್ ಕುಮಾರ್, ‘ಎಂಟು ಗಂಟೆಯ ಕಥೆ, 25 ಪಾತ್ರಗಳು, 50 ದೃಶ್ಯಗಳು, 250 ಪದ್ಯಗಳ ಒಂದು ಯಕ್ಷಗಾನ ಪ್ರಸಂಗ ರಚನೆಯ ಹಿಂದಿರುವ ಕವಿಯ ಶ್ರಮ ಸಾರ್ಥಕವಾಗುವುದು ಪ್ರಸಂಗ ಯಶಸ್ವಿ ಪ್ರದರ್ಶನಗೊಂಡಾಗ. ಕವಿ, ಹುಚ್ಚ, ಮಗು ಒಂದೇ ವರ್ಗಕ್ಕೆ ಸೇರಿದವರು. ಕವಿಯದ್ದು ಕಲ್ಪನಾಲೋಕ, ಹುಚ್ಚನದ್ದು ಭ್ರಮಲೋಕ, ಮಗುವಿನದ್ದು ಭಾವನಾಲೋಕ. ಈ ಮೂರು ಒಬ್ಬನಾಗುವವನೇ ಪ್ರಸಂಗಕರ್ತ. ಪ್ರಸಂಗದ ಯಶಸ್ಸಿಗೆ ಕಲಾವಿದರು ಹಾಗೂ ಪ್ರಜ್ಞಾವಂತ ಪ್ರೇಕ್ಷಕರು ಕಾರಣವಾಗುತ್ತಾರೆ’ ಎಂದರು.
ತೆಕ್ಕಟ್ಟೆ ಗ್ರಾ.ಪಂ.ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಪತ್ರಕರ್ತ ಜಾನ್ ಡಿಸೋಜ, ಉದ್ಯಮಿ ರಮೇಶ ನಾಯಕ್ ತೆಕ್ಕಟ್ಟೆ, ಗೋಳಿಗರಡಿ ಮೇಳದ ಅಧ್ಯಕ್ಷ ವಿಠಲ ಪೂಜಾರಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಐರೋಡಿ ಗೋವಿಂದಪ್ಪ ಉಪಸ್ಥಿತರಿದ್ದರು.
ಶತದಿನೋತ್ಸವದ ಸವಿ ನೆನಪಿಗೆ ಕಲಾವಿದರಿಗೆ ಸ್ಮರಣಿಕೆ ನೀಡಲಾಯಿತು. ಶಂಕರ ಕುಲಾಲ್, ಗಣಪಯ್ಯ ಆಚಾರ್, ಬಾಗವತ ಉದಯಕುಮಾರ್ ಹೊಸಾಳ ಅತಿಥಿಗಳ ಗೌರವಿಸಿದರು. ಗಣೇಶ ಪಾಂಡೇಶ್ವರ ಕಾರ್ಯಕ್ರಮ ನಿರ್ವಹಿಸಿದರು.
ಪೋಟೋ ಇದೆ

ಕನ್ನಡದಲ್ಲಿ 125: ಅವಳಿ ವಿದ್ಯಾರ್ಥಿ ನಿಯರ ಸಾಧನೆ

By Nagaraj On May - 16 - 2015 ADD COMMENTS

ಎಸ್.ಎಸ್.ಎಲ್.ಸಿ ಅಂತಿಮ ಪರೀಕ್ಷೆಯ ಕನ್ನಡ ವಿಷಯದಲ್ಲಿ 125ರಲ್ಲಿ 125 ಅಂಕ ಗಳಿಸುವ ಮೂಲಕ ಕುಂದಾಪುರದ ಅವಳಿ ಸಹೋದರಿಯರು ಅಪೂರ್ವ ಸಾಧನೆ ಮಾಡಿ ಗಮನ ಸಳೆದಿದ್ದಾರೆ. ಕುಂದಾಪುರದ ಸರೋಜಿನಿ ಮಧುಸೂಧನ ಕುಶೆ ಪ್ರೌಢಶಾಲೆಯ ವಿದ್ಯಾರ್ಥಿನಿ ಸಹೋದರಿಯರಾದ ಮುಸ್ತಾನ ಮತ್ತು ಮೆಲಕ್ ಕನ್ನಡದಲ್ಲಿ 125 ಅಂಕ ಪಡೆದಿದ್ದಾರೆ. ಇಬ್ಬರೂ ಸಹೋದರಿಯರು ಕೂಡಾ ಏಕರೂಪದ ಅಂಕ ಪಡೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಮುಸ್ತಾನ ಕನ್ನಡದಲ್ಲಿ 125, ಇಂಗ್ಲಿಷ್ನಲ್ಲಿ 88, ಹಿಂದಿಯಲ್ಲಿ 97, ಗಣಿತದಲ್ಲಿ 95, ವಿಜ್ಞಾನದಲ್ಲಿ 97, ಸಮಾಜದಲ್ಲಿ 89 ಒಟ್ಟು 591(94%) ಅಂಕ ಗಳಿಸಿದರೆ, ಮೆಲಕಾ ಕನ್ನಡದಲ್ಲಿ 125, ಇಂಗ್ಲಿಷ್ನಲ್ಲಿ 87, ಹಿಂದಿಯಲ್ಲಿ 95, ಗಣಿತದಲ್ಲಿ 89, ವಿಜ್ಞಾನದಲ್ಲಿ 95, ಸಮಾಜದಲ್ಲಿ 91 ಒಟ್ಟು 582(93%) ಅಂಕ ಗಳಿಸಿದ್ದಾರೆ. ಒಟ್ಟು ಅಂಕ ಗಳಿಕೆಯಲ್ಲಿ ಅಕ್ಕ ಮುಸ್ತಾನ 591 ಅಂಕ ಗಳಿಸಿದ್ದರೆ ತಂಗಿ ಮೆಲಕಾ 582 ಅಂಕ ಗಳಿಸಿದ್ದಾರೆ.
ಇವರು ಕುಂದಾಪುರ ವಡೇರಹೋಬಳಿ ಟಿ.ಟಿ ರಸ್ತೆಯ ಶೇಖ್ ಅದಮ್ ಹಾಗೂ ಶಕೀರಾ ಬಾನು ದಂಪತಿಗಳ ಪುತ್ರಿಯರು. ಶಾಲೆಯಲ್ಲಿ ಕನ್ನಡ ಶಿಕ್ಷಕಿ ನಾಗರತ್ನ ಅವರ ಭೋದನಶೈಲಿಯಿಂದ ನಾವು ಇಷ್ಟು ಅಂಕ ಪಡೆಯಲು ಸಾಧ್ಯವಾಯಿತು ಎನ್ನುವ ಅವಳಿ ಸಹೋದರಿಯರು ಮುಂದೆ ಪಿಸಿಎಂಬಿ ಮಾಡುವ ಇಚ್ಚೆ ವ್ಯಕ್ತ ಪಡಿಸುತ್ತಾರೆ

ಹೊಸೂರು ಹೈಸ್ಕೂಲ್: ಹಳ್ಳಿ ವಿದ್ಯಾರ್ಥಿಗಳಿಂದ ಶೇ.100 ಫಲಿತಾಂಶ

By Karavali Nudi On May - 16 - 2015 ADD COMMENTS

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಹೊಸೂರು ಪ್ರೌಢಶಾಲೆಯು 2015ರ ಎಸ್.ಎಸ್.ಎಲ್.ಸಿ ಪಬ್ಲಿಕ್ ಪರೀಕ್ಷೆಯಲ್ಲಿ 100ಶೇ. ಫಲಿತಾಂಶವನ್ನು ದಾಖಲಿಸಿದೆ. ಪರೀಕ್ಷೆಗೆ ಕುಳಿತ 64 ವಿದ್ಯಾರ್ಥಿಗಳ ಪೈಕಿ ಎ+ ಶ್ರೇಣಿಯಲ್ಲಿ 1, ಎ ಶ್ರೇಣಿಯಲ್ಲಿ 17, ಬಿ+ಶ್ರೇಣಿಯಲ್ಲಿ 22, ಬಿ ಶ್ರೇಣಿಯಲ್ಲಿ 18 ಹೀಗೆ 58 ವಿದ್ಯಾರ್ಥಿಗಳು ಅಂದರೆ ಶಾಲೆಯ 91% ವಿದ್ಯಾರ್ಥಿಗಳು 60% ಅಂಕಕ್ಕಿಂತಲೂ ಹೆಚ್ಚು ಅಂಕ ಗಳಿಸಿ, ಗ್ರಾಮಾಂತರ ಪ್ರದೇಶದಲ್ಲಿನ ಹೊಸೂರು ಪ್ರೌಢಶಾಲೆಯು ಸಾಧನೆ ಮಾಡಿದೆ.

2014-15ನೇ ಸಾಲಿನಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ, ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟವನ್ನು ಯಶಸ್ವಿಯಾಗಿ ಸಂಘಟಿಸಿ, ಗುರುತಿಸಿಕೊಂಡ ಈ ಸಂಸ್ಥೆಗೆ 100% ಫಲಿತಾಂಶವು ಅದರ ಹಿರಿಮೆ ಮುಕುಟವಿಟ್ಟಂತಾಗಿದೆ. ಶೇ.100 ಫಲಿತಾಂಶವನ್ನು ದಾಖಲಿಸಲು ಕಾರಣಿಕರ್ತರರಾದ ಎಲ್ಲರಿಗೂ ಶಾಲೆಯ ಮುಖ್ಯೋಪಾಧ್ಯಾಯ ಎ.ಶಿವರಾಮ ಕೃತಜ್ಞತೆ ಸಲ್ಲಿಸಿದ್ದಾರೆ.

ಕೋಡಿ ಬ್ಯಾರೀಸ್ಗೆ ಮತ್ತೊಮ್ಮೆ ಶೇಕಡ 100 ಫಲಿತಾಂಶವಿದ್ಯಾರ್ಥಿಗಳ ಸರ್ವಾಂಗೀಣ  ಅಭಿವೃದ್ದಿಯನ್ನು ಮೂಲ ಮಂತ್ರವಾಗಿಸಿಕೊಂಡು ಕಾರ್ಯ ನಿರ್ವಹಿಸುತ್ತಿರುವ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಂಗ ಸಂಸ್ಥೆಯಾದ ಬ್ಯಾರೀಸ್ ಸೀ-ಸೈಡ್ ಪಬ್ಲಿಕ್ ಸ್ಕೂಲ್ ಈ ಬಾರಿಯೂ ಕೂಡ ಎಸ್.ಎಸ್.ಎಲ್.ಸಿ. ಪರೀಕ್ಷೆ 2014-15 ರಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ.

ವಿದ್ಯಾರ್ಥಿಗಳೊಂದಿಗೆ ನಿರಂತರವಾಗಿ ಶ್ರಮಿಸಿ ಅವರನ್ನು ಕಲಿಕಾ ವಾತವರಣದಲ್ಲಿ ತೊಡಗಿಸಿ, ಸತತವಾಗಿ ಪ್ರೇರೇಪಿಸಿ ಶಾಲೆಗೆ ಶೇ.100 ರಷ್ಟು ಫಲಿತಾಂಶ ನೀಡುವಲ್ಲಿ ಅಧ್ಯಾಪಕರ ಪಾತ್ರ ಶ್ಲಾಘನೀಯ. ಶೇ.70 ರಷ್ಟು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದು, ರಾಹುಲ್ ಎಂಬ ವಿದ್ಯಾರ್ಥಿಶೇ.93 ರಷ್ಟು ಅಂಕಗಳನ್ನು ಗಳಿಸಿ ಸಂಸ್ಥೆಯ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಅಧ್ಯಾಪಕರೊಂದಿಗೆ ಕಲಿಕೆಯಲ್ಲಿ ಸಹಕರಿಸಿ ಉತ್ತಮ ಫಲಿತಾಂಶವನ್ನು ತಂದುಕೊಟ್ಟ

ವಿದ್ಯಾರ್ಥಿಗಳಿಗೆ ಮತ್ತು ಕಠಿಣ ಶ್ರಮವಹಿಸಿ ವಿದ್ಯಾರ್ಥಿಗಳಿಂದ ಈ ಫಲಿತಾಂಶವನ್ನು ಸಾಧಿಸಿದ ಅಧ್ಯಾಪಕರೆಲ್ಲರಿಗೂ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಮಾಸ್ಟರ್ ಮೆಹಮೂದ್ರವರು ಅಭಿನಂದನೆಗಳನ್ನು ತಿಳಿಸಿರುತ್ತಾರೆ.

ವಿದ್ಯಾರ್ಥಿನಿಲಯಕ್ಕೆ ಸೇರ್ಪಡೆ: ಅರ್ಜಿ ಆಹ್ವಾನ

By admin On May - 16 - 2015 ADD COMMENTS

ಉಡುಪಿ ತಾಲೂಕಿನಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರವಿದ್ಯಾರ್ಥಿನಿಲಯ ಬನ್ನಂಜೆ, ಬೆಳ್ಳಂಪಳ್ಳಿ, ಪೆಡರ್ೂರು, ಕುದಿ, ಗೋಳಿಯಂಗಡಿ ಮತ್ತು ಮೆಟ್ರಿಕ್ ಪೂರ್ವ ಬಾಲಕಿಯರ  ವಿದ್ಯಾರ್ಥಿನಿಲಯ ಬ್ರಹ್ಮಾವರ ಮತ್ತು ಪಟ್ಲ ಇಲ್ಲಿ ಖಾಲಿ ಇರುವ ಸ್ಥಾನಗಳಿಗೆ ಹೊಸದಾಗಿ 2015-16 ನೇ ಸಾಲಿನಲ್ಲಿ ವಿದ್ಯಾರ್ಥಿನಿಲಯಗಳಿಗೆ ಸೇರ್ಪಡೆಗೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ವರ್ಗ 1 ರ ವಿದ್ಯಾರ್ಥಿಗಳಿಗೆ ಅವರ ಹೆತ್ತವರ/ಪೋಷಕರ ವರಮಾನವು 2 ಲಕ್ಷದ ಮಿತಿಯೊಳಗೆ ಹಾಗೂ ಇತರೇ ಹಿಂದುಳಿದ ವರ್ಗಗಳ ವರ್ಗ 2ಎ, 2ಬಿ,3ಎ, 3ಬಿ ಹೆತ್ತವರ/ಪೋಷಕರ ವಾರ್ಷಿಕ  ವರಮಾನವು ರೂ.44500/- ರೊಳಗೆ ಇರತಕ್ಕದ್ದು.ಅರ್ಜಿಗಳನ್ನು ಸಲ್ಲಿಸುವಾಗ ಜಾತಿ, ಆದಾಯ ಪ್ರಮಾಣ-ಪತ್ರದ ದೃಢೀಕರಣ ಹಾಗೂ ಹಿಂದಿನ ತರಗತಿಯ ಪಾಸಾದ ಅಂಕಪಟ್ಟಿಯ ದೃಢೀಕೃತ ಪ್ರತಿಯನ್ನು ಲಗತ್ತಿಸಬೇಕು.
ವಿದ್ಯಾರ್ಥಿ ವಾಸ ಸ್ಥಾನದಿಂದ ವಿದ್ಯಾರ್ಥಿ ನಿಲಯಕ್ಕೆ ಇರುವ ದೂರ ಪ್ರಮಾಣಪತ್ರವನ್ನು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಿಂದ ದೃಢೀಕರಿಸಿ, ಲಗತ್ತಿಸಬೇಕು. ವಿದ್ಯಾರ್ಥಿಯ 2 ಪಾಸ್ಪೋಟರ್್ ಅಳತೆಯ ಭಾವಚಿತ್ರವನ್ನು ಲಗತ್ತಿಸಿ ಮೇ 30 ರ ಒಳಗೆ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಾಣಾಧಿಕಾರಿ ಕಚೇರಿ ಬನ್ನಂಜೆ, ಉಡುಪಿ ಅಥವಾ ಸಂಬಂಧಪಟ್ಟ ವಿದ್ಯಾರ್ಥಿನಿಲಯದಿಂದ ಪಡೆದು ಭತರ್ಿಮಾಡಿ ಆಯಾ ನಿಲಯದ ನಿಲಯ ಮೇಲ್ವಿಚಾರಕರಿಗೆ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

 

ಮೇ.20: ಚತುಃಪವಿತ್ರ ನಾಗಬ್ರಹ್ಮ ಮಂಡಲ

By Karavali Nudi On May - 16 - 2015 ADD COMMENTS

ವೈಶ್ಯವಾಣಿ ಸಮಾಜ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಕಾವ್ರಾಡಿ ಕುಟುಂಬಸ್ಥರ ಮೂಲನಾಗ ಸನ್ನಿಧಿಯಲ್ಲಿ ಚತುಃಪವಿತ್ರ ನಾಗಬ್ರಹ್ಮ ಮಂಡಲ ಸೇವೆ ಮೇ.20ರಂದು ನಡೆಯಲಿದೆ. ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ 5ಕ್ಕೆ ಧಾಮರ್ಿಕ ಸಭೆ ನಡೆಯಲಿದೆ.

ಚಿತ್ತೂರು ಸೌಪರ್ಣಿಕಾಸೌಹಾರ್ದ ಸಹಕಾರಿ ಸಂಘ: ಬಿಳ್ಕೋಡುಗೆ

By Nagaraj On May - 8 - 2015 ADD COMMENTS

 ಚಿತ್ತೂರಿನ ಸೌಪರ್ಣಿಕಾ  ಸೌಹಾರ್ದ ಸಹಕಾರಿ ಸಂಘ ನಿ., ಇಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದ ಚೈತ್ರ ಎಸ್.ಶೆಟ್ಟಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಬೀಳ್ಕೋಡಲಾಯಿತು.  ಸೌಪರ್ಣಿಕಾಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ಕೃಷ್ಣ ಪ್ರಸಾದ್ ಅಡ್ಯಂತಾಯ ಚೈತ್ರ ಎಸ್.ಶೆಟ್ಟಿ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಜಯರಾಜ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ, ಹಕ್ಲಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುಭಾಸ್ ಶೆಟ್ಟಿ ಹೊಳ್ಮಗೆ, ಮಂಜುನಾಥ  ಶಾರ್ಕೆ, ಬ್ಯಾಂಕಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.

 

Copyright © 2012 All rights reserved.