17 December , 2017 Sunday

COASTAL NEWS

COASTAL NEWS

Archive for April, 2015

ಪ್ರಗತಿಬಂಧು ಒಕ್ಕೂಟದ ದಶಮಾನೋತ್ಸವ

By Karavali Nudi On April - 25 - 2015 ADD COMMENTS

ಕುಂದಾಪುರ: ಕರಾವಳಿ ಭಾಗದಲ್ಲಿ ಇರುವ ಸಂಪನ್ಮೂಲ, ಸ್ವ ಉದ್ಯೋಗ, ಕೃಷಿಗೆ ಪೂರಕವಾದ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸ್ವಾವ ಲಂಬನೆ ಸಾಧಿಸುವುದು ನಮ್ಮ ಆದ್ಯತೆ ಆಗಬೇಕು.

ಆ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಾ ಸಹಕಾರ ನೀಡುತ್ತದೆ ಎಂದು ಯೋಜನೆಯ ಕರಾವಳಿ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ ಹೇಳಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಂಡ್ಸೆ ವಲಯದ ಮಾರ್ಗ ದರ್ಶನದಲ್ಲಿ ಇತ್ತೀಚೆಗೆ ವಂಡ್ಸೆ ತಿರುಮಲ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಎದುರು ನಡೆದ ವಂಡ್ಸೆ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ 10ನೇ ವರ್ಷದ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಂಡ್ಸೆ ಒಕ್ಕೂಟದ ಅಧ್ಯಕ್ಷೆ ಜಯಂತಿ ಪಿ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಂಡ್ಸೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಶಶಿಧರ ಶೆಟ್ಟಿ, ಗ್ರಾಮಾಭಿವೃದ್ಧಿ ಯೋಜನೆಯ ವಲಯ ಅಧ್ಯಕ್ಷೆ ಸುಪ್ರಿತಾ ಶೆಟ್ಟಿ, ಕೋಟೇಶ್ವರ ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷ ಸುಬ್ರಹ್ಮಣ್ಯ ಶೆಟ್ಟಿ, ವಂಡ್ಸೆ ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷ ಸೋಮಶೇಖರ  ಶೆಟ್ಟಿ, ಸದಸ್ಯ ತ್ಯಾಂಪಣ್ಣ ಶೆಟ್ಟಿ, ತಿರುಮಲ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ  ಆಡಳಿತ ಮೊಕ್ತೇಸರ ವಿ.ಕೆ.ಶಿವರಾಮ ಶೆಟ್ಟಿ, ನಿವೃತ್ತ ಎಂಜಿನಿಯರ್‌ ಶ್ರೀಧರ ಶೆಟ್ಟಿ ಕೊರಾಡಿಮನೆ ಮುಖ್ಯ ಅತಿಥಿಗಳಾಗಿದ್ದರು.

ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಅಮರಪ್ರಸಾದ್ ಶೆಟ್ಟಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಚಕ್ರ ಯುವಕ ಮಂಡಲದ ಅಧ್ಯಕ್ಷ ಕರುಣಾಕರ ಶೆಟ್ಟಿ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಎಲ್.ಎನ್.ಆಚಾರ್ಯ, ಎಚ್.ಎಮ್.ಸಿ ಫ್ರೆಂಡ್ಸ್ ಅಧ್ಯಕ್ಷ ರಫೀಕ್ ಸಾಹೇಬ್, ಉದ್ಯಮಿ ಗೋಪಾಲ ಶೆಟ್ಟಿ ಕೊಳ್ತಾ, ಮಹಾಗಣಪತಿ ರಿಕ್ಷಾ ಚಾಲಕ, ಮಾಲಕರ ಸಂಘದ ಅಧ್ಯಕ್ಷ ಆನಂದ ನಾಯ್ಕ ಸೀತಾ-ಗೀತಾ, ವಲಯ ಮೇಲ್ವಿಚಾರಕ ನಾಗರಾಜ, ಸೇವಾ ಪ್ರತಿನಿಧಿ ಲಾಲಿ ಸೋಜನ್ ಇದ್ದರು.

ಈ ಸಂದರ್ಭದಲ್ಲಿ ಒಕ್ಕೂಟದ ಮಾಜಿ ಅಧ್ಯಕ್ಷರಾದ ಸುರೇಶ ಗಾಣಿಗ,  ವಾಸು ಜಿ.ನಾಯ್ಕ್, ಆನಂದ ನಾಯ್ಕ್, ಗಿರೀಶ್ ನಾಯ್ಕ್, ಶಂಕರ ಆಚಾರ್ಯ ಹಾಗೂ ಹಾಲಿ ಅಧ್ಯಕ್ಷರಾದ ಜಯಂತಿ ಪಿ.ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.  ಸದಾನಂದ ಆಚಾರ್ಯ ಪ್ರಾರ್ಥಿಸಿದರು, ರಾಘವೇಂದ್ರ ಸ್ವಾಗತಿಸಿದರು. ವಂಡ್ಸೆ ವಲಯ ಮೇಲ್ವಿಚಾರಕ ನಾಗರಾಜ ವರದಿ ಮಂಡಿಸಿದರು. ಮಾಜಿ ಅಧ್ಯಕ್ಷ ವಾಸು ಜಿ.ನಾಯ್ಕ ನಿರೂಪಿಸಿದರು, ಸಲ್ಮಾ ವಂದಿಸಿದರು.

ನಾಳೆಯಿಂದ ಶ್ರೀಕೃಷ್ಣ ಮಠದಲ್ಲಿ ‘ನರಸಿಂಹ ನವದಿನೋತ್ಸವ’

By prajavani On April - 25 - 2015 ADD COMMENTS

ಉಡುಪಿ: ನರಸಿಂಹ ಜಯಂತಿ ಅಂಗ­ವಾಗಿ ಏ. 26ರಿಂದ ಮೇ 4ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ‘ನರಸಿಂಹ ನವದಿನೋತ್ಸವ’ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಪರ್ಯಾಯ ಕಾಣಿಯೂರು ಮಠದ ವಿದ್ಯಾವಲ್ಲಭ ಸ್ವಾಮೀಜಿ ಹೇಳಿದರು.

ಏ. 26ರಂದು ಸಂಜೆ 5.30ಕ್ಕೆ ಕೃಷ್ಣಾಪುರ ಮಠದ ವಿದ್ಯಾಸಾಗರ ಸ್ವಾಮೀಜಿ ಮತ್ತು ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ ನವದಿನೋತ್ಸವಕ್ಕೆ ಚಾಲನೆ ನೀಡುವರು ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 26ರಿಂದ ಮೇ 2ರ ವರೆಗೆ ಪ್ರತಿದಿನ ಸಂಜೆ 6ಗಂಟೆಗೆ ವಿಶ್ವಪ್ರಿಯ ಸ್ವಾಮೀಜಿ ‘ಶ್ರೀಮದ್ಭಾಗವತದಲ್ಲಿ ನರಸಿಂಹ ಅವತಾರ’ ವಿಷಯದ ಕುರಿತು ಪ್ರವಚನ ನೀಡುವರು.

ಪ್ರತಿದಿನ ರಾತ್ರಿ 8ಗಂಟೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ. ಮೇ 2ರಂದು ಬೆಳಿಗ್ಗೆ 6ಗಂಟೆಗೆ ಕಾಣಿ­ಯೂರು ಮಠದ ಪಟ್ಟದ ದೇವರು ಯೋಗಾ­ನರ­ಸಿಂಹ­ದೇವರಿಗೆ ವಿಶೇಷ ಪಂಚಾ­ಮೃತಾ­ಭಿಷೇಕ ಹಾಗೂ ಶ್ರೀಕೃಷ್ಣನಿಗೆ ವಿಶೇಷ ಪೂಜೆ ನಡೆಸಲಾ­ಗುವುದು.

ಅಂದು ಸಂಜೆ 5 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ‘ಶ್ರೀ ವಿದ್ಯಾ­ಸಮುದ್ರ ಪ್ರಶಸ್ತಿ ಮತ್ತು ಶ್ರೀ ನೃಸಿಂಹಾನುಗ್ರಹ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಮೇ 4ರಂದು ಸಂಜೆ 5ಗಂಟೆಗೆ ಸಮಾರೋಪ ಸಮಾರಂಭ ಮತ್ತು ರಾತ್ರಿ 8ಗಂಟೆಗೆ ತಿರುವಾರುರ್‌ ಎಸ್‌. ಸ್ವಾಮಿನಾಥನ್‌ ಬಳಗದವರಿಂದ ‘ಕೊಳಲು ವಾದನ’ ನಡೆಯಲಿದೆ ಎಂದು ಮಾಹಿತಿ ನೀಡಿದರು. ಮಠದ ದಿವಾನ ರಘುಪತಿ ಆಚಾರ್ಯ, ವ್ಯವಸ್ಥಾಪಕ ರಾಧಾಕೃಷ್ಣ ಆಚಾರ್ಯ ಉಪಸ್ಥಿತರಿದ್ದರು.

ಹಸಿವು ಮುಕ್ತ ರಾಜ್ಯಕ್ಕೆ ಸರಕಾರ ಪಣ: ಉಳ್ಳಾಲ ಉರೂಸ್ ಸಮಾರಂಭದಲ್ಲಿ ಮುಖ್ಯಮಂತ್ರಿ

By varthabharathi On April - 25 - 2015 ADD COMMENTS

 

ಮಂಗಳೂರು, ಎ.24: ರಾಜ್ಯದಲ್ಲಿರುವ ಆರೂ ವರೆ ಕೋಟಿ ಜನರು ನೆಮ್ಮದಿಯಿಂದ ಬಾಳು ವಂತಹ ವಾತಾವರಣ ನಿರ್ಮಿಸುವ ಹೊಣೆ ಸರಕಾರದ್ದಾಗಿದ್ದು, ನಾಡಿನ ಯಾರೊಬ್ಬರೂ ಹಸಿವಿನಿಂದ ಬಳಲಬಾರದು ಎನ್ನುವ ಉದ್ದೇಶ ದಿಂದ ಕಳೆದ ಎರಡು ವರ್ಷದಲ್ಲಿ ಬಿಪಿಎಲ್ ಕಾರ್ಡ್‌ದಾರರಿಗೆ 1 ರೂ.ಗೆ 1 ಕೆ.ಜಿ.ಯಂತೆ ಅಕ್ಕಿ ಅನ್ನಭಾಗ್ಯ ಯೋಜನೆ ಮೂಲಕ ನೀಡಲಾಗಿದೆ. ಮೇ 1ರಿಂದ ಉಚಿತ ಅಕ್ಕಿ ಹಾಗೂ ಎಪಿಎಲ್ ಕಾರ್ಡುದಾರರಿಗೆ ರಿಯಾಯಿತಿ ದರದಲ್ಲಿ ಅಕ್ಕಿ, ಗೋಧಿ ನೀಡಲಾಗುವುದು. ಆ ಮೂಲಕ ಕರ್ನಾಟಕವನ್ನು ಹಸಿವುಮುಕ್ತ ರಾಜ್ಯವನ್ನಾ ಗಿಸಲು ಪಣ ತೊಡಲಾಗಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದರು. ಖುತುಬುಝ್ಝಮಾನ್ ಅಸ್ಸೈಯದ್ ಮುಹಮ್ಮದ್ ಶರೀಫುಲ್ ಮದನಿ 423ನೆ ವಾರ್ಷಿಕ ಹಾಗೂ 20ನೆ ಪಂಚವಾರ್ಷಿಕ ಉರೂಸ್ ಪ್ರಯುಕ್ತ ಶುಕ್ರವಾರ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆದ ರಾಜಕೀಯ ಮತ್ತು ಸಾಮಾಜಿಕ ಸಮಾವೇಶ ಉದ್ಘಾಟಿಸಿ ಅವರು ಮಾತನಾ ಡುತ್ತಿದ್ದರು.
ಕರಾವಳಿಯಲ್ಲಿ ಶಾಂತಿ ಕದಡುವ ಪ್ರಯತ್ನ ನಡೆಯುತ್ತಿದ್ದರೂ ಅದಕ್ಕೆ ತಡೆಯೊಡ್ಡುವ ಪ್ರಯತ್ನ ಮಾಡಲಾಗುತ್ತಿದೆ. ಮುಂದೆಯೂ ಮಾಡುತ್ತೇವೆ. ಭವಿಷ್ಯದಲ್ಲಿ ಎಲ್ಲರೂ ನಿರ್ಭೀತಿಯಿಂದ ಬದುಕುವ ವಾತಾವರಣಕ್ಕಾಗಿ ಮತಾಂಧ ಶಕ್ತಿ, ಜಾತೀವಾದಿಗಳ ಕುತಂತ್ರವನ್ನು ಹತ್ತಿಕ್ಕುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು. ಸಮಾಜದಲ್ಲಿ ಧರ್ಮಭೇದ ಮಾಡುವುದು ಅಮಾನವೀಯ ಕ್ರಮ, ಸಮಾಜದ ಎಲ್ಲರೂ ಶಾಂತಿಯುತವಾಗಿ ಬಾಳಬೇಕು. ಅವರಿಗೆ ಸಾಮಾಜಿಕ ನ್ಯಾಯ ನೀಡಬೇಕು, ಅದಕ್ಕಾಗಿ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆಯನ್ನು ಸರಕಾರ ಹಮ್ಮಿಕೊಂಡಿದೆ. ಅದನ್ನು ಯಶಸ್ವಿಗೊಳಿಸಿ ಯೋಜನೆಗಳನ್ನು ಅನು ಷ್ಠಾನಗೊಳಿಸುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದರು. ಅಶೈಖ್ ಸ್ವಬಾಹುದ್ದೀನ್ ರಿಫಾಯಿ ಅಲ್ ಬಗ್ದಾದ್ ದುಆಗೈದರು. ಉಳ್ಳಾಲ ಖಾಝಿ ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದರ್ಗಾದ ಸಾಕ್ಷ್ಯ ಚಿತ್ರದ ಸಿಡಿಯನ್ನು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ.ಇಬ್ರಾಹೀಂ ಬಿಡುಗಡೆಗೊಳಿಸಿದರು.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಆರೋಗ್ಯ ಸಚಿವ ಯು.ಟಿ.ಖಾದರ್, ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ, ಹಜ್ ಮತ್ತು ವಾರ್ತಾ ಸಚಿವ ರೋಶನ್ ಬೇಗ್, ವಕ್ಫ್ ಸಚಿವ ಖಮರುಲ್ ಇಸ್ಲಾಂ, ಶಾಸಕರಾದ ಬಿ.ಎ.ಮೊಯ್ದಿನ್ ಬಾವ, ಇಕ್ಬಾಲ್ ಅಹ್ಮದ್ ಅನ್ಸಾರಿ, ಜೆ.ಆರ್.ಲೋಬೊ, ಐವನ್ ಡಿಸೋಜ, ರಾಜ್ಯ ವಕ್ಫ್ ಮಂಡಳಿ ಸಿಇಒ ಎ.ಎಸ್.ಜೀಲಾನಿ, ಅಸ್ಸೈಯದ್ ಹಾಮಿದ್ ಇಂಬಿಚ್ಚಿಕೋಯ ತಂಙಳ್ ಕೊಯಿಲಾಂಡಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್, ಸೆಂಟ್ರಲ್ ಮುಸ್ಲಿಂ ಕಮಿಟಿಯ ಅಧ್ಯಕ್ಷ ಮುಹಮ್ಮದ್ ಮಸೂದ್, ದರ್ಗಾ ಮಾಜಿ ಅಧ್ಯಕ್ಷ ಕಣಚೂರು ಮೋನು, ಚೀರುಂಭ ಭಗವತಿ ಕ್ಷೇತ್ರ ತೀಯಾ ಸಮಾಜದ ಅಧ್ಯಕ್ಷ ಚಂದ್ರಹಾಸ ಉಳ್ಳಾಲ, ನಿವೃತ್ತ ಡಿಸಿಪಿ ಜಿ.ಎ.ಬಾವ, ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಚಂದ್ರಶೇಖರ ಉಚ್ಚಿಲ್, ರಾಜ್ಯ ವಕ್ಫ್ ಬೋರ್ಡ್ ಸದಸ್ಯ ಎನ್.ಕೆ.ಎಂ.ಶಾಫಿ ಸಅದಿ, ಉಪಾಧ್ಯಕ್ಷ ಅಶ್ರಫ್ ರೈಟ್‌ವೇ, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಹನೀಫ್ ಹಾಜಿ, ಅರೆಬಿಕ್ ಟ್ರಸ್ಟ್ ಕಾರ್ಯದರ್ಶಿ ಝಿಯಾದ್ ತಂಙಳ್, ರಹೀಂ ಉಚ್ಚಿಲ್, ಮಜೀದ್ ಹಾಜಿ ಉಚ್ಚಿಲ, ಗುಲಾಂ ಮುಹಮ್ಮದ್, ಬಿ.ಎಚ್.ಖಾದರ್, ಎಂ.ಎಸ್.ಮುಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು. ಉಳ್ಳಾಲ ದರ್ಗಾ ಸಮಿತಿಯ ಅಧ್ಯಕ್ಷ ಹಾಜಿ ಯು.ಎಸ್.ಹಂಝ ಸ್ವಾಗತಿಸಿದರು. ಕೆ.ಎಂ.ಕೆ. ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು.

ನಿಧನ

By Karavali Nudi On April - 6 - 2015 ADD COMMENTS


ರವೀಂದ್ರ
ವಂಡ್ಸೆ ಮೇಸ್ತ್ರೀಮನೆ ನಿವಾಸಿ ರವೀಂದ್ರ (40ವ) ಅಲ್ಪಕಾಲದ ಅಸೌಖ್ಯದಿಂದ ಏ.2ರಂದು ನಿಧನರಾದರು. ಮೃತರು ತಾಯಿ, ಇರ್ವರು ಸಹೋದರರು, ಓರ್ವ ಸಹೋದರಿಯನ್ನು ಅಗಲಿದ್ದಾರೆ.

Copyright © 2012 All rights reserved.